Advertisement

ಪೈಲಟ್‌ ಇಲ್ಲದೆ ಪುಷ್ಪಕ ವಿಮಾನ ಯಾನ

10:45 PM Nov 09, 2019 | Lakshmi GovindaRaju |

ಪುಷ್ಪಕ ವಿಮಾನ….ರಾಮಾಯಣ ಗ್ರಂಥದಲ್ಲಿ ಕೇಳಿಬರುವ ಹೆಸರಿದು. ಇವತ್ತಿಗೂ ಈ ಹೆಸರಿನ ಬಗ್ಗೆ ಚರ್ಚೆ ನಡೆಯುತ್ತಿದೆ. ಆಧುನಿಕ ಕಾಲದಲ್ಲಿ ವಿಜ್ಞಾನ ತೀವ್ರವಾಗಿ ಬೆಳೆದಂತೆಲ್ಲ ಕಲ್ಪನೆ ಮಾತ್ರವಾಗಿದ್ದ ವಿಮಾನ, ವಾಸ್ತವದಲ್ಲೂ ಸಾಧ್ಯ ಎಂದು ತೋರಿಸಿಕೊಡಲಾಗಿದೆ. ಆದರೆ, ಈ ವಿಮಾನಗಳಲ್ಲಿ ಹಲವು ಕೊರತೆಗಳಿವೆ. ಆ ಕೊರತೆಗಳು ವಾಲ್ಮೀಕಿ ವಿರಚಿತ ರಾಮಾಯಣದಲ್ಲಿ ಬರುವ ಪುಷ್ಪಕವಿಮಾನದಲ್ಲಿಲ್ಲ!

Advertisement

ಈಗಿನ ಕಾಲದಲ್ಲಿರುವ ವಿಮಾನಗಳು ಅತಿವೇಗದಲ್ಲಿ ಸಂಚರಿಸುತ್ತವೆ. ಪುಷ್ಪಕವಿಮಾನ ಮನೋವೇಗದಲ್ಲಿ ಸಂಚರಿಸುತ್ತದೆ. ಎಲ್ಲಿಗೆ ಹೋಗಬೇಕೆಂದು ನೀವು ಇಚ್ಛಿಸುತ್ತೀರೋ ಆ ಜಾಗಕ್ಕೆ ಹೋಗಿ ನಿಲ್ಲುತ್ತದೆ. ಅದಕ್ಕೆ ಯಾವುದೇ ಪೈಲಟ್‌ಗಳ ಅಗತ್ಯವಿಲ್ಲ. ಇದಕ್ಕಿರುವ ಇನ್ನೊಂದು ಅಸಾಮಾನ್ಯ ಸೌಲಭ್ಯವೆಂದರೆ, ಇದು ಬೇಕೆಂದಾಗ ಹೆಲಿಕಾಪ್ಟರ್‌ ಗಾತ್ರಕ್ಕೆ ಇಳಿಯುತ್ತದೆ, ಅಗತ್ಯಬಿದ್ದಾಗ ಎಷ್ಟು ಲಕ್ಷ ಜನರನ್ನು ಬೇಕಾದರೂ ಹೊತ್ತೂಯ್ಯಬಲ್ಲಷ್ಟು ಹಿಗ್ಗುತ್ತದೆ.

ರಾವಣನನ್ನು ಕೊಂದು ಶ್ರೀರಾಮ ಮರಳಿ ಅಯೋಧ್ಯೆಗೆ ಹೊರಟು ನಿಂತಾಗ, ಲಕ್ಷಾಂತರ ಕಪಿಗಳನ್ನು (ರಾಮಾಯಣದಲ್ಲಿ ನೀಡಿರುವ ಕಪಿಗಳ ಲೆಕ್ಕವನ್ನೇ ತೆಗೆದುಕೊಂಡರೆ ಇಡೀ ಭೂಮಂಡಲದಲ್ಲಿ ಕಪಿಗಳನ್ನು ಹೊರತು ಬೇರೆ ಜೀವಿಗಳಿರುವುದು ಸಾಧ್ಯವಿಲ್ಲ, ಇಲ್ಲಿ ಅದನ್ನು ಗ್ರಹಿಕೆಗಾಗಿ ಲಕ್ಷಗಳ ಮಟ್ಟಕ್ಕೆ ಇಳಿಸಲಾಗಿದೆ!) ಒಂದೇ ವಿಮಾನದಲ್ಲಿ ಶ್ರೀರಾಮ ಕರೆದುಕೊಂಡು ಹೊರಡುತ್ತಾನೆ. ರಾವಣನ ವಶದಲ್ಲಿದ್ದ ಈ ವಿಮಾನವನ್ನು ರಾಮ ನಂತರ ಅದರ ನೈಜ ಒಡೆಯ ಕುಬೇರ ನಿಗೆ ಒಪ್ಪಿಸುತ್ತಾನೆ. ಸ್ವತಃ ಕುಬೇರನೇ ಇಟ್ಟುಕೊ ಳ್ಳಲು ಆಗ್ರಹಿಸಿದರೂ ರಾಮ ತಿರಸ್ಕರಿಸುತ್ತಾನೆ. ಇದು ರಾಮ ನಮಗೆ ನೀಡುವ ಆದರ್ಶ.

ವಿಜ್ಞಾನಕ್ಕೆ ಕೌತುಕ: ಸಾವಿರಾರು ವರ್ಷಗಳ ಕೆಳಗೇ ಇಂತಹದೊಂದು ವಿಮಾನವನ್ನು ಕವಿ ವಾಲ್ಮೀಕಿ ಚಿತ್ರಿಸಿರಬೇಕಾದರೆ ಅಂತಹ ವಿಮಾನಗಳು ಆಗಿನ ಕಾಲದಲ್ಲಿ ಇದ್ದಿರಬಹುದು, ಆ ತಂತ್ರಜ್ಞಾನ ಭಾರತೀಯರಿಗೆ ಗೊತ್ತಿತ್ತು ಎಂಬ ವಾದವಿದೆ. ಭಾರದ್ವಾಜ ಸಂಹಿತೆಯಲ್ಲಿ ವಿಮಾನ ನಿರ್ಮಾಣದ ತಂತ್ರಜ್ಞಾನವೇ ಇದೆ ಎಂದು ವಿದ್ವಾಂಸರು ಹೇಳುತ್ತಾರೆ.

ಸೀತಾಪಹರಣಕ್ಕೆ ಬಳಕೆ: ರಾವಣ ಅಷ್ಟು ಶೀಘ್ರವಾಗಿ ಸೀತೆಯನ್ನು ಅಪಹರಿಸಲು ಸಾಧ್ಯವಾಗಿದ್ದು, ಪುಷ್ಪಕವಿಮಾನದ ಮೂಲಕ. ಆತ ಮನೋವೇಗದಿಂದ ಬಳಿಬಂದು ಸೀತೆಯನ್ನು ಎತ್ತಿಕೊಂಡು ಪುಷ್ಪಕದ ಮೂಲಕ ಹಾರಿಹೋಗುತ್ತಾನೆ.

Advertisement

ರತ್ನಖಚಿತ ವಿಮಾನದೊಳಗೆ ರಾವಣನ ಅಂತಃಪುರ…: ಪುಷ್ಪಕ ಹೇಗಿದೆ ಎನ್ನುವುದನ್ನು ರಾಮಾಯಣದ ಸುಂದರಕಾಂಡದಲ್ಲಿ ವಿವರಿಸಲಾಗಿದೆ. ಅದು ರಾವಣನ ಅಂತಃಪುರವೂ ಹೌದಾಗಿತ್ತು. ರತ್ನಖಚಿತವಾಗಿತ್ತು. ಅದರ ಮೇಲೆ ಪುಷ್ಪಗಳು ಹರಡಿಕೊಂಡಿದ್ದವು. ಅತ್ಯಂತ ಸುಂದರ ಚಿತ್ರಗಳು, ಕೆತ್ತನೆಗಳನ್ನು ಅದರ ಮೇಲೆ ಮಾಡಲಾಗಿತ್ತು.

ಪುಷ್ಪಕದ ಮೂಲ ಒಡೆಯ ಬ್ರಹ್ಮ!: ಮೂಲತಃ ಈ ವಿಮಾನ ಬ್ರಹ್ಮನಿಗೆ ಸೇರಿದ್ದು. ತಪಸ್ಸಿಗೆ ಮೆಚ್ಚಿ ಬ್ರಹ್ಮ ಅದನ್ನು ಕುಬೇರನಿಗೆ ನೀಡುತ್ತಾನೆ. ಮುಂದೆ ರಾವಣ, ಕುಬೇರನನ್ನು ಶ್ರೀಲಂಕಾದಿಂದ ಹೊರಗಟ್ಟಿ ಪುಷ್ಪಕವನ್ನು ತನ್ನ ವಶಕ್ಕೆ ಪಡೆದುಕೊಳ್ಳುತ್ತಾನೆ.

Advertisement

Udayavani is now on Telegram. Click here to join our channel and stay updated with the latest news.

Next