ಬೇಲೂರು: ಬಂಟೇನಹಳ್ಳಿ ಗ್ರಾಮದ ಶ್ರೀ ವೀರಭದ್ರೇಶ್ವರ ಸ್ವಾಮಿ ನೂತನ ದೇಗುಲ ಲೋಕಾ ರ್ಪಣೆ ಕಾರ್ಯಕ್ರಮದಲ್ಲಿ ದಿವ್ಯ ನೇತೃತ್ವದಲ್ಲಿ ವಹಿಸಿದ್ದ ಪುಷ್ಪಗಿರಿ ಶ್ರೀಮಠದ ಶ್ರೀಶ್ರೀ ಸೋಮ ಶೇಖರ ಶಿವಾಚಾರ್ಯ ಮಹಾಸ್ವಾಮೀಜಿಗಳು 21 ಜಂಗಮ ವಟುಗಳಿಗೆ ದೀಕ್ಷೆ ನೀಡಿದರು. ಇದಕ್ಕೂ ಮುನ್ನ ವಟುಗಳಿಗೆ ವಿಭೂತಿ ಧಾರಣೆ, ಲಿಂಗ ಧಾರಣೆ, ಮಂತ್ರ ದೀಕ್ಷೆ ಜೊತೆಗೆ ಜೋಳಿಗೆ, ಬೆತ್ತ ಧಾರಣೆ ಮಾಡಲಾಯಿತು.
ವೀರಶೈವ- ಲಿಂಗಾಯಿತರಲ್ಲಿ ಜಂಗಮ ದೀಕ್ಷೆ ಪಡೆದ ಸಂದರ್ಭ ನೀಡುವ ಜೋಳಿಗೆಯಲ್ಲಿ ಕೋರು ಧಾನ್ಯ ಬೇಡುವ ಪದ್ಧತಿ, ವಟುಗಳು ಜೋಳಿಗೆ ಹೆಗಲಿಗೇರಿಸಿ ಶಿವ ಶಿವ ಗುರು ಧರ್ಮ ಕೋರುಧಾನ್ಯ ಭಿಕ್ಷೆ ನೀಡಿ ಎಂದು ವೀರಶೈವರ ಮನೆ ಮನೆಗೆ ತೆರಳಿ ಅವರು ನೀಡುವ ಧಾನ್ಯ ಸ್ವೀಕರಿಸಿ, ಭಿಕ್ಷೆ ನೀಡಿದ ಕುಟುಂಬಕ್ಕೆ ಆಯುಸ್ಸು, ಅಶ್ವರ್ಯ ನೀಡಲಿ ಎಂದು ಶಿವ ಕರುಣಿಸಲಿಯಂದು ಆಶೀರ್ವದಿಸುವರು.
ಸ್ವೀಕರಿಸಿದ ಭಿಕ್ಷೆಯನ್ನು ತಮ್ಮ ತಮ್ಮ ಮನೆಗೆ ತೆರಳಿ ಧಾನ್ಯಗಳಿಂದ ಅಡಿಗೆ ಮಾಡಿ, ಬಂದವರಿಗೆ ದಾಸೋಹ ನಡೆಸಲು ಪುಷ್ಪಗಿರಿ ಶ್ರೀಗಳು ದೀಕ್ಷೆ ಪಡೆಸ ವಟುಗಳಿಗೆ ಹೇಳಿದರು. ಧರ್ಮದಲ್ಲಿ ದೀಕ್ಷೆ ಪ್ರಮುಖ: ಪುಷ್ಪಗಿರಿ ಶ್ರೀಮಠದ ಪೂಜ್ಯ ಶ್ರೀಶ್ರೀ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ವೀರಶೈವ ಲಿಂಗಾಯತ ಧರ್ಮದಲ್ಲಿ ದೀಕ್ಷೆ ನೀಡುವುದು ಬಹಳ ಪ್ರಮುಖವಾಗಿದೆ.
ಇದನ್ನೂ ಓದಿ:-ಸಾಗರಕ್ಕೆ ಕಾಲಿಟ್ಟ ಚಿಕ್ಕಮೇಳ ಯಕ್ಷಗಾನ ತಂಡ
ದೀಕ್ಷಾ ಎನ್ನುವುದಕ್ಕೆ ಬಹಳ ಅರ್ಥವಿದೆ. ದೀ ಎಂದರೆ ದೀಯತೆ ಶಿವಜ್ಞಾನಂ, ಕ್ಷೀ ಎಂದರೆ ಕ್ಷೀಯತೆ ಪಾಶ ಬಂಧನಂ ಎಂದು. ಬೇರೆ ಬೇರೆ ಧರ್ಮಗಳಲ್ಲಿ ಅದರದೇ ಆದಂತಹ ಪದ್ಧತಿಗಳಿವೆ. ಆದರೆ, ವೀರಶೈವ ಧರ್ಮದಲ್ಲಿ ಲಿಂಗಧಾರಣೆ ಮಾಡಿಕೊಳ್ಳುವ ಮೂಲಕ ಪರಮಾತ್ಮನನ್ನು ದೇಹದ ಮೇಲೆ ಹೊತ್ತುಕೊಂಡು ಹೋಗುವ ಶಕ್ತಿ ಈ ಧರ್ಮದಲ್ಲಿ ಮಾತ್ರವಿದೆ. ದೀಕ್ಷಾ ನಂತರದಲ್ಲಿ ಧಾರಣೆ ಮಾಡಿಕೊಳ್ಳುವ ಲಿಂಗವು ಶಿವನ ಪಂಚಮುಖ ಗಳಿಂದಾದು ಎನ್ನಲಾಗುತ್ತದೆ ಎಂದು ತಿಳಿಸಿದರು.
ಲಿಂಗಧಾರಣೆಗೆ ಜಾತಿಭೇದವಿಲ್ಲ: ಲಿಂಗಧಾರಣೆಗೆ ಯಾವುದೇ ಜಾತಿಭೇದವಿಲ್ಲ, ತಾಯಿ ಗರ್ಭದಿಂದ ಜನ್ಮ ತಾಳಿದ ನಂತರದಲ್ಲಿ ದೀಕ್ಷಾ ಸಂಸ್ಕಾರ ಪಡೆ ಯುವ ಸಂದರ್ಭದಲ್ಲಿ ನೀಡಲಾಗುವ ಮಂತ್ರೋಪ ದೇಶದಿಂದ ಜೀವನದಲ್ಲಿ ಮರು ಜೀವ ಪಡೆದಂತೆ. ಹೀಗಾಗಿ ದೀಕ್ಷಾ ಸಂಸ್ಕಾರ ವೀರಶೈವ ಲಿಂಗಾಯತ ಧರ್ಮೀಯರಿಗೆ ಬಹಳ ಮಹತ್ವವಾಗಿದೆ.
ಜಂಗಮ ದೀಕ್ಷೆ ಹಾಗೂ ಶಿವದೀಕ್ಷಾ ಸಂಸ್ಕಾರದಿಂದ ಮಗುವಿನ ಮನಸ್ಸು, ಸದ್ವಿಚಾರ, ಸದಾಚಾರಗಳತ್ತ ವಾಲುತ್ತದೆ. ಅದಕ್ಕೆ ಪೂರಕವಾದ ವಾತಾವರಣ, ಸಂಸ್ಕಾರಗಳು ಸಮಾಜ ಹಾಗೂ ಕುಟುಂಬದಿಂದ ದೊರೆಯ ಬೇಕಿದೆ. ಅಂದಾಗ ಧರ್ಮನಿಷ್ಠವಾದ ಸಮಾಜ ರೂಪುಗೊಳ್ಳುತ್ತದೆ ಎಂದರು. ಜಂಗಮ ವಟುಗಳಿಗೆ ದೀಕ್ಷೆ ಕಾರ್ಯಕ್ರಮ ಸಂಪೂರ್ಣ ಪೂಜಾ ಕೈಂಕರ್ಯವನ್ನು ವೇ. ಗುರು ಸಂಕೀಹಳ್ಳಿ ಮತ್ತು ತಂಡ ಸುಲಲಿತವಾಗಿ ನಡೆಸಿದರು.