Advertisement

Tollywood: ‘ಪುಷ್ಪ-3ʼ ಟೈಟಲ್‌ ರಿವೀಲ್..‌ ವಿಲನ್‌ ಆಗಿ ಅಬ್ಬರಿಸಲಿದ್ದಾರೆ ಈ ಖ್ಯಾತ ನಟ

03:09 PM Dec 03, 2024 | Team Udayavani |

ಹೈದರಾಬಾದ್:‌ ಬಹುನಿರೀಕ್ಷೆ ಹುಟ್ಟಿಸಿರುವ ʼಪುಷ್ಪ-2ʼ (Pushpa 2: The Rule) ಸಿನಿಮಾ ಇದೇ ವಾರ (ಡಿ.5 ರಂದು) ಸಾವಿರಾರು ಥಿಯೇಟರ್‌ಗಳಲ್ಲಿ ರಿಲೀಸ್‌ ಆಗಲಿದೆ.

Advertisement

ʼಪುಷ್ಪರಾಜ್‌ʼ ಆಗಿ ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ್‌ (Allu Arjun) ಬಿಗ್‌ ಸ್ಕ್ರೀನ್‌ನಲ್ಲಿ ರಂಜಿಸಲಿದ್ದಾರೆ. ʼಶ್ರೀವಲ್ಲಿʼಯಾಗಿ ರಶ್ಮಿಕಾ ಮಂದಣ್ಣ (Rashmika Mandanna) ಮೋಡಿ ಮಾಡಲು ಸಿದ್ದರಾಗಿದ್ದಾರೆ.

ದಟ್ಟ ಕಾಡಿನಲ್ಲಾಗುವ ಕ್ರೂರ ಹಾಗೂ ರೋಚಕ ಕಥೆಯನ್ನು ನಿರ್ದೇಶಕ ಸುಕುಮಾರ್‌ (Director Sukumar) ಮಾಸ್‌ ಜಾನರ್‌ ಅಂಶವನ್ನು ಪ್ರಧಾನವಾಗಿಟ್ಟುಕೊಂಡು ಹೇಳಲಿದ್ದಾರೆ.  ʼಪುಷ್ಪʼ ಮೊದಲ ಭಾಗಕ್ಕೆ ವರ್ಲ್ಡ್‌ ವೈಡ್‌ ಮೆಚ್ಚುಗೆಯ ಮಾತುಗಳು ಕೇಳಿ ಬಂದಿತ್ತು. ಸೀಕ್ವೆಲ್‌ಗೆ ಸಾಕಷ್ಟು ಪರಿಶ್ರಮ ಹಾಕಿರುವ ಚಿತ್ರತಂಡ ಕೆಲ ವಿಳಂಬದ ಬಳಿಕ ರಿಲೀಸ್‌ಗೆ ಸಿದ್ದವಾಗಿದೆ.

ಇದನ್ನೂ ಓದಿ: ʼRamayanaʼ ಪಾತ್ರದ ವೇಳೆ ವೇದಿಕೆಯಲ್ಲೇ ಜೀವಂತ ಹಂದಿಯ ಹೊಟ್ಟೆ ಬಗೆದು ಮಾಂಸ ಸೇವಿಸಿದ ಕಲಾವಿದ

ಈಗಾಗಲೇ ಹಾಡು, ಟ್ರೇಲರ್‌ನಿಂದ ಜನಮನದಲ್ಲಿ ʼಪುಷ್ಪ-2ʼ ಕ್ರೇಜ್‌ ಹುಟ್ಟಿಸಿದೆ. ಸೋಶಿಯಲ್‌ ಮೀಡಿಯಾದಲ್ಲೂ ಸಿನಿಮಾದ ಬಗ್ಗೆ ಹವಾ ಕ್ರಿಯೇಟ್‌ ಆಗಿದೆ.

Advertisement

ʼಪುಷ್ಪ-3 ಬರುತ್ತದೆ ಎನ್ನುವ ಮಾತುಗಳು ಕಳೆದ ಕೆಲ ಸಮಯದಿಂದ ಕೇಳಿ ಬರುತ್ತಿದೆ. ಸೀಕ್ವೆಲ್‌ ಸಿನಿಮಾದ ಚಿತ್ರೀಕರಣದ ಸಂದರ್ಭದಿಂದಲೂ ʼಪುಷ್ಪ-3ʼ ಬರಲಿದೆ ಎನ್ನುವ ಮಾತುಗಳು ಕೇಳಿ ಬಂದಿತ್ತು.

ಇದೀಗ ಫಿಲ್ಮ್ ಇಂಡಸ್ಟ್ರಿ ಟ್ರ್ಯಾಕರ್ ಮನೋಬಾಲಾ ವಿಜಯಬಾಲನ್ ಅವರು ಹಂಚಿಕೊಂಡಿರುವ ಫೋಟೋದಿಂದ ʼಪುಷ್ಪ-3ʼ ಬರುವುದು ಅಧಿಕೃತ ಎನ್ನುವ ಮಾತು ಹರಿದಾಡಿದೆ.

ಧ್ವನಿ ವಿನ್ಯಾಸಕ ರೆಸೂಲ್ ಪೂಕುಟ್ಟಿ ಮತ್ತು ಉಳಿದ ಸಿಬ್ಬಂದಿಗಳು ಸ್ಟುಡಿಯೋವೊಂದರಲ್ಲಿ ನಿಂತಿದ್ದು, ಇವರ ಹಿಂದೆ ಸ್ಕ್ರೀನ್‌ನಲ್ಲಿ ʼಪುಷ್ಪ 3: ದಿ ರ‍್ಯಾಂಪೇಜ್ʼ ಎನ್ನುವ ಟೈಟಲ್‌ ಇರುವುದು ಪತ್ತೆಯಾಗಿದೆ.

ಕೆಲವೊಂದು ಮೂಲಗಳ ಪ್ರಕಾರ ʼಪುಷ್ಪ-2ʼ ಸಿನಿಮಾದ ಕ್ಲೈಮ್ಯಾಕ್ಸ್‌ ಸೀನ್‌ ಬಳಿಕ ʼಪುಷ್ಪ-3ʼ ಟೈಟಲ್‌ ಕಾರ್ಡ್‌ ಪ್ಲೇ ಆಗಲಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.

ʼಪುಷ್ಪ-3ʼ ನಲ್ಲಿ ವಿಜಯ್‌ ದೇವರಕೊಂಡ (Vijay Deverakonda) ವಿಲನ್‌ ಆಗಿ ಬಣ್ಣ ಹಚ್ಚಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. 2022ರಲ್ಲಿ ದೇವರಕೊಂಡ ಸುಕುಮಾರ್‌ ಅವರ ಹುಟ್ಟುಹಬ್ಬದಂದು ವಿಶ್‌ ಮಾಡಿದ ವೇಳೆ ʼಪುಷ್ಪ-3ʼ ಸಿನಿಮಾದ ಟೈಟಲ್‌ ರಿವೀಲ್‌ ಮಾಡಿದ್ದರು.

ದೇವರಕೊಂಡ ಅವರು ʼಪುಷ್ಪ-3ʼ ನಲ್ಲಿ ಇರುವ ಬಗ್ಗೆ ಅಧಿಕೃತವಾದ ಮಾಹಿತಿ ಮುಂದಿನ ದಿನಗಳಲ್ಲಿ ಬರಲಿದೆ.

ʼಪುಷ್ಪ-2ʼ ನಲ್ಲಿ ಅಲ್ಲು ಅರ್ಜುನ್‌ – ಫಾಹದ್‌ ಪಾತ್ರ ಮುಖಾಮುಖಿ ಇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next