Advertisement

ʼPushpa-2ʼ ಎರಡನೇ ಹಾಡು ರಿಲೀಸ್:‌ ಕಪಲ್ಸ್‌ ಹಾಡಿಗೆ ಹೆಜ್ಜೆ ಹಾಕಿದ ʼಪುಷ್ಪʼ, ʼಶ್ರೀವಲ್ಲಿʼ

03:11 PM May 29, 2024 | Team Udayavani |

ಹೈದರಾಬಾದ್:‌ ಅಲ್ಲು ಅರ್ಜುನ್‌ – ರಶ್ಮಿಕಾ ಮಂದಣ್ಣ ಅಭಿನಯದ ʼಪುಷ್ಪ-2ʼ ಸಿನಿಮಾದ ಎರಡನೇ ಹಾಡು ರಿಲೀಸ್‌ ಆಗಿದ್ದು, ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಕಂಡು ಸದ್ದು ಮಾಡಿದೆ.

Advertisement

ಪ್ಯಾನ್‌ ಇಂಡಿಯಾ ಸಿನಿಮಾಗಳಲ್ಲಿ ಬಹು ನಿರೀಕ್ಷೆ ಹುಟ್ಟಿಸಿರುವ ʼಪುಷ್ಪ-2ʼ ಸೆಟ್ಟೇರಿದ ಸಮಯದಿಂದ ಒಂದಲ್ಲ ಒಂದು ಕಾರಣದಿಂದ ಇಂಟರ್‌ ನೆಟ್‌ ನಲ್ಲಿ ಟ್ರೆಂಡ್‌ ಆಗುತ್ತಲೇ ಬಂದಿದೆ. ಪೋಸ್ಟರ್‌, ಕಲಾವಿದರ ಪರಿಚಯ ಟೀಸರ್‌ ಹಾಗೂ ಹಾಡಿನಿಂದ ಸದ್ದು ಮಾಡಿದ ʼಪುಷ್ಪ-2ʼ ಚಿತ್ರತಂಡ ಇದೀಗ ಎರಡನೇ ಹಾಡು ರಿಲೀಸ್‌ ಮಾಡಿದೆ.

ಕೆಲ ದಿನಗಳ ಹಿಂದಷ್ಟೇ ಚಿತ್ರದʼಪುಷ್ಪ ಪುಷ್ಪʼ ಹಾಡು ರಿಲೀಸ್‌ ಆಗಿ ಸಖತ್‌ ಸೌಂಡ್‌ ಮಾಡಿತ್ತು. ಹಾಡು ವೈರಲ್‌ ಆಗುವುದರ ಜೊತೆಗೆ ರೀಲ್ಸ್‌ ನಲ್ಲಿ ಹರಿದಾಡಿತ್ತು. ಇದೀಗ  ʼ ಸೂಸೆಕಿʼ ಎನ್ನುವ ಕಪಲ್ಸ್‌ ಸಾಂಗ್‌ ನ್ನು ರಿಲೀಸ್‌ ಮಾಡಿದೆ.

ಶೂಟಿಂಗ್‌ ಸೆಟ್‌ ನಲ್ಲಿ ಸಿಂಪಲ್‌ ಲುಕ್‌ ನಲ್ಲಿ ಅಲ್ಲು – ರಶ್ಮಿಕಾ ಸ್ಟೆಪ್‌ ಹಾಕಿದ್ದಾರೆ.  ಲಿರಿಕಲ್‌ ವಿಡಿಯೋ ಹಾಡಿನಲ್ಲಿ ಶ್ರೀವಲ್ಲಿ ,ಪುಷ್ಪ ಸಖತ್‌ ಮಿಂಚಿದ್ದಾರೆ. ಶೂಟಿಂಗ್‌ ಸೆಟ್‌ ನಲ್ಲಿನ ಫನ್ನಿ ಮೊಮೆಂಟ್‌ ಹಾಗೂ ನಿರ್ದೇಶಕ, ನೃತ್ಯ ಸಂಯೋಜಕರನ್ನು ತೋರಿಸಲಾಗಿದೆ.

ಈ ಹಾಡನ್ನು ಶ್ರೇಯಾ ಘೋಷಾಲ್ ಹಾಡಿದ್ದು, ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದ್ದಾರೆ ಮತ್ತು ಚಂದ್ರಬೋಸ್ ಸಾಹಿತ್ಯವನ್ನು ಬರೆದಿದ್ದಾರೆ.

Advertisement

ಹಾಡಿನಲ್ಲಿ ಬರುವ ಸ್ಟೆಪ್‌ ಗಳು ʼಶ್ರೀವಲ್ಲಿʼ ಮತ್ತು ʼಸಾಮಿ ಸಾಮಿʼ ಹಾಡನ್ನು ನೆನೆಪಿಸುತ್ತದೆ.

ಪ್ಯಾನ್‌ ಇಂಡಿಯಾ ʼಪುಷ್ಪ-2ʼ ಇದೇ ಆಗಸ್ಟ್‌ 15 ರಂದು ರಿಲೀಸ್‌ ಆಗಲಿದ್ದು, ಈ ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಾಹದ್ ಫಾಸಿಲ್, ಪ್ರಕಾಶ್ ರಾಜ್, ಜಗಪತಿ ಬಾಬು, ಜಗದೀಶ್ ಪ್ರತಾಪ್ ಭಂಡಾರಿ ಹಾಗೂ ಇತರೆ ಪ್ರಮುಖರು ಕಾಣಿಸಿಕೊಳ್ಳಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next