Advertisement

ಪ್ಯಾನ್‌ ಇಂಡಿಯಾ ʼಪುಷ್ಪ-2ʼ ಎದುರು ಹೊಂಬಾಳೆಯ ʼರಘು ತಾತಾʼ ರಿಲೀಸ್:‌ ಏನಿದು ಲೆಕ್ಕಚಾರ?

12:38 PM Jun 01, 2024 | Team Udayavani |

ಚೆನ್ನೈ/ಹೈದರಾಬಾದ್:‌ ವರ್ಷದ ದ್ವಿತೀಯಾರ್ಧ ಆರಂಭಗೊಂಡಿದೆ. ದೊಡ್ಡ ದೊಡ್ಡ ಪ್ಯಾನ್‌ ಇಂಡಿಯಾ ಸಿನಿಮಾಗಳು ರಿಲೀಸ್‌ ಆಗಲು ಕಾಯುತ್ತಿದೆ. ಕೆಲವೊಂದಿಷ್ಟು ಸಿನಿಮಾಗಳು ವರ್ಷದ ಕೊನೆಯಲ್ಲಿ ರಿಲೀಸ್‌ ಗೆ ಪ್ಲ್ಯಾನ್‌ ಮಾಡಿಕೊಂಡಿದ್ದು, ಇನ್ನು ಕೆಲ ಸಿನಿಮಾಗಳ ಸೂಕ್ತ ರಿಲೀಸ್‌ ಡೇಟ್‌ ಗಾಗಿ ಕಾಯುತ್ತಿದೆ. ಇನ್ನೊಂದ್ದಿಷ್ಟು ಚಿತ್ರಗಳು ಈಗಾಗಲೇ ರಿಲೀಸ್‌ ಡೇಟ್‌ ಲಾಕ್‌ ಮಾಡಿಕೊಂಡಿದೆ.

Advertisement

ಟಾಲಿವುಡ್‌ ನಲ್ಲಿ ಈ ವರ್ಷದ ಬಹು ನಿರೀಕ್ಷಿತ ʼಪುಷ್ಪ-2ʼ ಸಿನಿಮಾ ರಿಲೀಸ್‌ ಆಗಲಿದೆ. ಅಲ್ಲು ಅರ್ಜುನ್‌ ಅವರ ಈ ಪ್ಯಾನ್‌ ಇಂಡಿಯಾ ಪ್ರಾಜೆಕ್ಟ್‌ ಗಾಗಿ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಇದೇ ಆಗಸ್ಟ್ 15 ರಂದು ಚಿತ್ರ ರಿಲೀಸ್‌ ಆಗಲಿದೆ.

ಆದರೆ ʼಪುಷ್ಪ-2ʼ ಗೆ ಟಾಲಿವುಡ್‌ ನಲ್ಲಿ ಬಿಟ್ಟರೆ ಇತರೆ ಭಾಷಾ ರಾಜ್ಯಗಳಲ್ಲಿ ಈ ಬಾರಿ ಟಫ್‌ ಕಾಂಪಿಟೇಷನ್‌ ಸಿಗುವ ಸಾಧ್ಯತೆ ಹೆಚ್ಚಾಗಿದೆ. ಏಕೆಂದರೆ ಬಹುದೊಡ್ಡ ಪ್ಯಾನ್‌ ಇಂಡಿಯಾ ಸಿನಿಮಾದ ಮುಂದೆ, ಬಹುದೊಡ್ಡ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌ ಸಿನಿಮಾವೊಂದನ್ನು ರಿಲೀಸ್‌ ಮಾಡಲಿದೆ. ಆ ಮೂಲಕ ʼಪುಷ್ಪ-2ʼ ಗೆ ಟಕ್ಕರ್‌ ಕೊಡಲು ರೆಡಿಯಾಗಿದೆ.

ಇದನ್ನೂ ಓದಿ: ‌Video: ಮತ್ತೆ ವಿವಾದದಲ್ಲಿ ಬಾಲಯ್ಯ: ನಟಿ ಅಂಜಲಿ ಹಿಂಭಾಗ ಮುಟ್ಟಿದ ವಿಡಿಯೋ ವೈರಲ್

ಕೀರ್ತಿ ಸುರೇಶ್‌ ಅಭಿನಯಿಸಿರುವ ʼರಘು ತಾತಾʼ ಸಿನಿಮಾವನ್ನು ಆಗಸ್ಟ್‌ 15 ರಂದು ರಿಲೀಸ್‌ ಮಾಡಲು ಹೊಂಬಾಳೆ ನಿರ್ಧರಿಸಿದ್ದು, ಅಧಿಕೃತವಾಗಿ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಲಾಗಿದೆ.

Advertisement

ʼಕೆಜಿಎಫ್‌ʼ, ʼಸಲಾರ್‌ʼ, ʼಕಾಂತಾರʼ ದಂತ ಹಿಟ್‌ ಸಿನಿಮಾಗಳನ್ನು ನೀಡಿರುವ ಹೊಂಬಾಳೆ ʼರಘು ತಾತಾʼವನ್ನು ʼಪುಷ್ಪ-2ʼ ದಂಥ ಪ್ಯಾನ್‌ ಇಂಡಿಯಾ ಸಿನಿಮಾದ ಎದುರು ರಿಲೀಸ್‌ ಮಾಡುತ್ತಿರುವುದು ರಿಸ್ಕಿ ಸಾಹಸ ಎಂದು ಚಿತ್ರರಂಗದಲ್ಲಿ ಗುಸು ಗುಸು ಶುರುವಾಗಿದೆ.

ಆದರೆ ಈ ಹಿಂದೆ ಕೂಡ ಹೊಂಬಾಳೆ ಇದೇ ರೀತಿ ದೊಡ್ಡ ಸಿನಿಮಾಗಳ ಮುಂದೆ ತಮ್ಮ ಸಿನಿಮಾವನ್ನು ರಿಲೀಸ್‌ ಮಾಡಿ ಮುನ್ನುಗ್ಗಿ ಬಂದಿದೆ. ʼಕೆಜಿಎಫ್‌ʼ ಸಿನಿಮಾ ಶಾರುಖ್‌ ಅವರ ʼಝೀರೋʼ ಎದುರು ರಿಲೀಸ್‌ ಆಗಿತ್ತು. ಅದೇ ರೀತಿ ʼಸಲಾರ್‌ʼ ಶಾರುಖ್‌ ಅವರ ʼಡಂಕಿʼ ಎದುರು ರಿಲೀಸ್‌ ಆಗಿತ್ತು.

ಈ ಹಿಂದೆ ʼಪುಷ್ಪʼ ರಿಲೀಸ್‌ ವೇಳೆ ಚಿತ್ರತಂಡ ʼಕೆಜಿಎಫ್‌ʼ ಸಿನಿಮಾದ ಬಗ್ಗೆ ಪರೋಕ್ಷವಾಗಿ ಒಂದಷ್ಟು ಟೀಕೆಗಳನ್ನು ಮಾಡಿತ್ತು. ಇದು ಚಿತ್ರರಂಗದಲ್ಲಿ ಸದ್ದು ಮಾಡಿತ್ತು. ಆದರೆ ಅದರ ಬಗ್ಗೆ ʼಹೊಂಬಾಳೆʼ ಯಾವ ಪ್ರತಿಕ್ರಿಯೆಯನ್ನು ನೀಡಿರಲಿಲ್ಲ. ಹೀಗಾಗಿ ʼಪುಷ್ಪ-2ʼ ಎದುರು ʼರಘು ತಾತಾʼವನ್ನು ಬೇಕಂತಲೇ ರಿಲೀಸ್‌ ಮಾಡಲಾಗುತ್ತಿದೆ ಎನ್ನುವ ಮಾತುಗಳೂ ಕೂಡ ಚಿತ್ರರಂಗದಲ್ಲಿ ಹರಿದಾಡುತ್ತಿದೆ.

ಇತ್ತ ಕನ್ನಡದಲ್ಲಿ ಶಿವರಾಜ್‌ ಕುಮಾರ್‌ ಅವರ ʼಭೈರತಿ ರಣಗಲ್‌ʼ ಚಿತ್ರ ಕೂಡ ಆಗಸ್ಟ್‌ 15 ರಂದೇ ರಿಲೀಸ್‌ ಆಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next