Advertisement
ದಕ್ಷಿಣ ಭಾರತ ಮಾತ್ರವಲ್ಲದೆ, ಪ್ಯಾನ್ ಇಂಡಿಯಾದಲ್ಲಿ ಬಿಗ್ ಹಿಟ್ ಆಗಿ ಅಲ್ಲು ಅರ್ಜುನ್ ಅವರಿಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ‘ಪುಷ್ಪ’ ಸಿನಿಮಾ ಇಂಡಿಯನ್ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಕಮಾಯಿ ಮಾಡುವುದರ ಜೊತೆಗೆ ಟಾಲಿವುಡ್ ಸಿನಿಮಾರಂಗದಲ್ಲಿ ದಾಖಲೆ ಬರೆದಿತ್ತು.
Related Articles
Advertisement
ಅಲ್ಲು ಅರ್ಜುನ್ ಅವರ ರಕ್ತದ ಕಲೆಗಳ ಕೈಯ ಪೋಸ್ಟರ್ ವೊಂದನ್ನು ರಿಲೀಸ್ ಮಾಡಿ, ಡೇಟ್ ರಿವೀಲ್ ಮಾಡಿದೆ.
ಈ ಸಿನಿಮಾದಲ್ಲಿ ಫಾಹದ್ ಫಾಸಿಲ್ ಭನ್ವರ್ ಸಿಂಗ್ ಶೇಖಾವತ್ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ʼಪುಷ್ಪ-2ʼ ನಲ್ಲಿ ಫಾಹದ್ ಹಾಗೂ ಪುಷ್ಪ ಅವರ ಮುಖಾಮುಖಿ ಇರಲಿದೆ. ರಕ್ತ ಚಂದನದ ಸಾಗಾಟದ ಕಥೆಯನ್ನು ಚಿತ್ರ ಒಳಗೊಂಡಿದೆ. ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳಲಿದ್ದಾರೆ. ಇನ್ನು ನೆಗೆಟಿವ್ ರೋಲ್ ನಲ್ಲಿ ಡಾಲಿ ಧನಂಜಯ ಅವರು ಕೂಡ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.