ರವಿಶಂಕರ್ ಗೌಡ ಮುಖ್ಯ ಭೂಮಿಕೆಯಲ್ಲಿರುವ “ಪುರುಸೋತ್ ರಾಮ’ ಚಿತ್ರ ಈ ವಾರ ತೆರೆಕಾಣುತ್ತಿದೆ. ಈ ಮೂಲಕ ತುಂಬಾ ದಿನಗಳ ನಂತರ ರವಿಶಂಕರ್ ತೆರೆಮೇಲೆ ನಗಿಸಲಿದ್ದಾರೆ.
ಹೆಸರಿಗೆ ತಕ್ಕಂತೆ ಇದೊಂದು ಕಾಮಿಡಿ ಸಿನಿಮಾ. ಚಿತ್ರದಲ್ಲಿ ಮೂವರು ನಾಯಕರಿದ್ದಾರೆ. ಚಿತ್ರದಲ್ಲಿ ರವಿಶಂಕರ್ ಗೌಡ ನಿರುದ್ಯೋಗಿ ಯುವಕನ ಪಾತ್ರ ಮಾಡಿದ್ದಾರೆ. ಚಿತ್ರದ ಪಾತ್ರ ಅವರ ಆರಂಭದ ದಿನಗಳನ್ನು ನೆನಪಿಸುವಂತಿತ್ತಂತೆ. ಇಡೀ ತಂಡದ ಶ್ರಮ ಹಾಗೂ ಶ್ರದ್ಧೆಯನ್ನುಕೊಂಡಾಡಲು ರವಿಶಂಕರ್ ಮರೆಯಲಿಲ್ಲ.
ಇದನ್ನೂ ಓದಿ :ಮದುವೆ ದಿನವೇ ಗ್ರಾಮಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಮದುಮಗ
ಚಿತ್ರದಲ್ಲಿ ಶಿವರಾಜ್‌ಕೆ ಆರ್ ಪೇಟೆ ಕೂಡಾ ನಟಿಸಿದ್ದು, ಅವರು ಕೂಡಾ ತಮ್ಮ ಫ್ಲ್ಯಾಶ್ ಬ್ಯಾಕ್‌ಗೆ ಜಾರಿದರು. ಕಾಮಿಡಿ ಕಿಲಾಡಿಗಳು ಶೋನಲ್ಲಿ ಅವಕಾಶ ಸಿಗುವ ಮುಂಚಿನ ಜೀವನವನ್ನು ನೆನಪಿಸಿಕೊಂಡರು. ರಿತಿಕ್ ಸರು ಈ ಚಿತ್ರದ ನಿರ್ದೇಶಕರು. ನಿರ್ದೇಶನದ ಜೊತೆಗೆ ಪ್ರಮುಖ ಪಾತ್ರ ಕೂಡಾ ಮಾಡಿದ್ದಾರೆ. ಚಿತ್ರವನ್ನು ಮಾನಸ ನಿರ್ಮಿಸುವ ಜೊತೆಗೆ ನಾಯಕಿಯಾಗಿಯೂ ನಟಿಸಿದ್ದಾರೆ. ಸಿನಿಮಾ ಚೆನ್ನಾಗಿ ಮೂಡಿಬಂದಿದ್ದು, ಜನಕೈ ಹಿಡಿಯುತ್ತಾರೆ ಎಂಬ ನಂಬಿಕೆ ಅವರಿಗಿದೆ.
ಉಳಿದಂತೆ ಚಿತ್ರದಲ್ಲಿ ಅನುಷಾ,ಕುರಿಪ್ರತಾಪ್ ಸಹನ, ಮಾನಸ, ಬ್ಯಾಂಕ್ ಜನಾರ್ದನ್, ಆರ್.ಟಿ.ರವಮಾ ಮುಂತಾದವರಿದ್ದಾರೆ.ಚಿತ್ರದಲ್ಲಿ ನಾಲ್ಕು ಹಾಡುಗಳನ್ನು ಪ್ರಭುದೇವ, ಧ್ರುವ ಬರೆದಿದ್ದಾರೆ. ಸುದ್ದೋರಾಯ್ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಕಿರಣ್ ಕುಮಾರ್ ಛಾಯಾ ಗ್ರಹಣ, ಚಂದನ್ ಸಂಕಲನ, ಈಶ್ವರಿ ಕುಮಾರ್ ಕಲಾ ನಿರ್ದೇಶನ ಹಾಗೂ ರಾಜಕಿಶೋರ್, ಮದನ್-ಹರಿಣಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.