ಪುತ್ತೂರು: ಕೇರಳದ ತೃಶ್ಶೂರ್‌ನಲ್ಲಿ ನಡೆಯುವ 7ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಡಾ| ಸುಂದರ ಕೇನಾಜೆ ಚಿತ್ರಕತೆ ಬರೆದು ನಿರ್ದೇಶನ ಮಾಡಿರುವ ತುಳು ಸಾಕ್ಷ್ಯಚಿತ್ರ “ಪುರ್ಸ ಕಟ್ಟುನೆ’ ಇನಿ-ಕೋಡೆ- ಎಲ್ಲೆ’ ಆಯ್ಕೆಯಾಗಿದೆ.
ತುಳು ವಿಕಿಪೀಡಿಯ ಫೌಂಡೇಶನ್ ತಯಾರಿಸಿದ ಈ ಸಾಕ್ಷ್ಯಚಿತ್ರದ ನಿರ್ಮಾಣವನ್ನು ಭರತೇಶ ಅಲಸಂಡೆಮಜಲು ಹಾಗೂ ಡಾ| ವಿಶ್ವನಾಥ ಬದಿಕಾನ ಮಾಡಿದ್ದರು. ದೇಶದ ಬೇರೆಬೇರೆ ಭಾಷೆಗಳಿಂದ ಆಯ್ಕೆಯಾದ 70 ಸಾಕ್ಷ್ಯಚಿತ್ರ ಹಾಗೂ ಜಗತ್ತಿನ ಬೇರೆಬೇರೆ ದೇಶಗಳಿಂದ ಆಯ್ಕೆಯಾದ 310 ಚಲನ ಚಿತ್ರಗಳು ಈ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ.
ತುಳು ಭಾಷೆಯ ಜಾನಪದ ವಿಭಾಗ ದಲ್ಲಿ ಈ ಸಾಕ್ಷ್ಯಚಿತ್ರವನ್ನು ಆಯ್ಕೆಯಾಗಿದೆ. “ಪುರ್ಸ ಕಟ್ಟುನ’ ಸಾಕ್ಷ್ಯಚಿತ್ರ ತುಳುನಾಡಿನ ಅದರಲ್ಲೂ ಮುಖ್ಯವಾಗಿ ಬೆಳ್ತಂಗಡಿ ಭಾಗದಲ್ಲಿ ಪ್ರಚಲಿತವಿರುವ ಪುರ್ಸಕುಣಿತ ಹಾಗೂ ಸುಳ್ಯ ತಾಲೂಕಿನ ಕೆಲವು ಕಡೆ ಪ್ರಚಲಿತ ವಿದ್ದ ಸಿದ್ದವೇಷ ಕುಣಿತಕ್ಕೆ ಸಂಬಂಧಿಸಿದ್ದಾಗಿದೆ.
40 ನಿಮಿಷದ ಈ ಸಾಕ್ಷ್ಯಚಿತ್ರ ಕರಾವಳಿಯಲ್ಲಿ ಪ್ರಚಲಿತವಿದ್ದ ತಾಂತ್ರಿಕ ಪಂಥ ಮತ್ತು ಜನಪದ ಕುಣಿತಕ್ಕೆ ಸಂಬಂಧಿಸಿದ್ದಾಗಿದೆ.
ಕರಾವಳಿಯ ಘಟನಾವಳಿ ಹಾಗೂ ವಿದ್ವಾಂಸರ ವಿಶ್ಲೇಷಣೆಯೊಂದಿಗೆ ಮೈಸೂರಿನ ಕನ್ನಡಿ ಕ್ರಿಯೇಷನ್ ತಯಾರಿಸಿದ ಈ ಸಾಕ್ಷ್ಯಚಿತ್ರ ಯೂಟ್ಯೂಬ್ ಮೂಲಕ ನೋಡು ಗರ ಮೆಚ್ಚುಗೆಗೆ ಪಾತ್ರವಾಗಿದೆ.