Advertisement
ತಾಲೂಕಿನ ತಡವಲಗಾ ಗ್ರಾಮದ ಜೋಡಗುಡಿ ಹತ್ತಿರ 2017-18 ನೇ ಸಾಲಿನ ಕೃಷಿ ಅಭಿಯಾನ ಯೋಜನೆಯಡಿ ಕೃಷಿ ಯಂತ್ರಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕಳೆದ 10ರಿಂದ 15 ವರ್ಷಗಳ ಹಿಂದೆ ಕೇವಲ ಬಿತ್ತನೆ ಬೀಜ, ಗೊಬ್ಬರ, ಸಬ್ಸಿಡಿಗಳಿಗೆ ಮಾತ್ರ ಸೀಮಿತವಾದ ಇಲಾಖೆ ರೈತರಿಗಾಗಿ ಅನೇಕ ವಿನೂತನ ಯೋಜನೆಗಳನ್ನು ಜಾರಿ ಮಾಡಿ ರೈತರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ ಎಂದರು.
ರಾಜ್ಯದ ರೈತರಿಗೆ ಹಾಲಿನ ಸಬ್ಸಿಡಿಗಾಗಿ ಒಟ್ಟು ಎರಡುವರೆ ಸಾವಿರ ಕೋಟಿ ನೀಡಲಾಗಿದೆ. ಕರ್ನಾಟಕ ರಾಜ್ಯದಲ್ಲಿ ರೈತರಿಗೆ ಉಚಿತ ವಿದ್ಯುತ ಪೂರೈಕೆ ಮಾಡಿದಕ್ಕಾಗಿ ಪ್ರತಿ ವರ್ಷ 9 ಸಾವಿರ ಕೋಟಿ ಭರಿಸಿದೆ ಎಂದರು. ರಾಜ್ಯದಲ್ಲಿ ಅತೀ ಹೆಚ್ಚು ತೊಗರಿ ಬೆಳೆದ ಜಿಲ್ಲೆಗಳೆಂದರೆ ಕಲಬುರಗಿ ಹಾಗೂ ವಿಜಯಪುರ ತೊಗರಿ ಖರೀದಿಗೆ ಸರಕಾರ 1900 ಕೋಟಿ ರೂಪಾಯಿ ವ್ಯಯಿಸಿದೆ. ಇದರಲ್ಲಿ ಜಿಲ್ಲೆಗೆ 484 ಕೋಟಿ ನೀಡಲಾಗಿದೆ. ಬರದ ತಾಲೂಕಿನ ಸಮಗ್ರ ನೀರಾವರಿ ಮಾಡುವ ಮುಖಾಂತರ ಬರದ ಹಣೆಪಟ್ಟಿ ಕಳಚಿ ಹಸಿರನ್ನಾಗಿ ಮಾಡಿ ರೈತರಿಗೆ ಆರ್ಥಿಕವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದರು. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ದೇವರಾಜ ಅರಸರ ನಂತರ ಎಲ್ಲ ಸಮುದಾಯವನ್ನು ಸಮಾನವಾಗಿ ಗೌರವಿಸುವ ನಾಯಕರಾಗಿದ್ದಾರೆ ಎಂದು ಹೇಳಿದರು. ಜಿಲ್ಲಾಧಿಕಾರಿ ಶಿವುಕುಮಾರ ಕೆ. ಬಿ., ಪುರಸಭೆ ಅಧ್ಯಕ್ಷ ಶ್ರೀಕಾಂತ ಕುಡಿಗನೂರ, ತಾಪಂ ಅಧ್ಯಕ್ಷ ರುಕುದೀನ ತದ್ದೇವಾಡಿ, ಜಿಪಂ ಸದಸ್ಯ ಮಹಾದೇವಪ್ಪ ಪೂಜಾರಿ,
ತಮ್ಮಣ್ಣಾ ಪೂಜಾರಿ, ಜೆಟ್ಟೆಪ್ಪ ರವಳಿ, ಮಳಸಿದ್ದ ಬ್ಯಾಳಿ, ಭೀಮಣ್ಣಾ ಕೌಲಗಿ, ಸದಾಶಿವ ಪ್ಯಾಟಿ, ಮಹಾದೇವಪ್ಪ ಏವೂರ, ಕೃಷಿ ಡಿನ್ ಡಾ| ಬಿರಾದಾರ, ಇಲಿಯಾಸ ಬೋರಾಮಣಿ, ತಾಪಂ ಅಧಿಕಾರಿ ರಾಜಕುಮಾರ ತೊರವಿ, ತೋಟಗಾರಿ ಅಧಿಕಾರಿ ಎಸ್.ಎಚ್. ಪಾಟೀಲ, ದಾನಮ್ಮಗೌಡತಿ ಪಾಟೀಲ, ಬಿ.ಎಂ. ಕೋರೆ, ಭೀಮಣ್ಣ ಕವಲಗಿ, ಕಲ್ಲನಗೌಡ ಬಿರಾದಾರ, ಸುಬಾಸ ಕಲ್ಲೂರ ಇದ್ದರು.