Advertisement

Puri; ; ನಿನ್ನೆ ಮಧ್ಯರಾತ್ರಿಯಿಂದಲೇ ಜಗನ್ನಾಥನ ದರ್ಶನ

02:19 AM Jan 01, 2024 | Team Udayavani |

ಭುವನೇಶ್ವರ: ಒಡಿಶಾದ ಐತಿಹಾಸಿಕ ಪುರಿ ಜಗನ್ನಾಥ ದೇಗುಲಕ್ಕೆ ಹೊಸ ವರ್ಷದಂದು ಭೇಟಿ ನೀಡಲಿರುವ ಭಕ್ತರ ಅನುಕೂಲ­ಕ್ಕಾಗಿ ರವಿವಾರ ಮಧ್ಯರಾತ್ರಿ 1ರಿಂದಲೇ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಈ ಕುರಿತಂತೆ ಜಿಲ್ಲಾಧಿಕಾರಿ ಸಮಂತ್‌ ವರ್ಮಾ ಮಾಹಿತಿ ನೀಡಿದ್ದಾರೆ. ಹೊಸ ವರ್ಷದಂದು ಲಕ್ಷಾಂತರ ಭಕ್ತರು ದೇಗುಲಕ್ಕೆ ಭೇಟಿ ನೀಡುತ್ತಾರೆ. ಈ ವರ್ಷ ಕನಿಷ್ಠ 3ರಿಂದ 4 ಲಕ್ಷ ಭಕ್ತಾದಿಗಳು ಬರುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಜನದಟ್ಟಣೆಯನ್ನು ತಡೆಯುವ ನಿಟ್ಟಿನಲ್ಲಿ ಮಧ್ಯರಾತ್ರಿ 1 ರಿಂದಲೇ ದೇಗುಲ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ರಾತ್ರಿ 11 ಗಂಟೆವರೆಗೆ ದೇಗುಲ ತೆರೆದಿರಲಿದೆ ಎಂದಿದ್ದಾರೆ. ದಿನಂಪ್ರತಿ ಮುಂಜಾನೆ 5 ಗಂಟೆಗೆ ದೇಗುಲ ತೆರೆದು, ರಾತ್ರಿ 10 ಗಂಟೆಗೆ ಮುಚ್ಚಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next