2024ರ ಜನವರಿಯಲ್ಲಿ ಅಯೋ ಧ್ಯೆಯ ಶ್ರೀರಾಮ ಮಂದಿರದ ಉದ್ಘಾಟನೆ ನಡೆಯಲಿದ್ದು, ಈ ಬಗ್ಗೆ ದೇಶದ ಚಿತ್ತ ನೆಟ್ಟಿರುವಂತೆಯೇ ಒಡಿಶಾ ಸರಕಾರ ದೇಶದ ಮತ್ತೂಂದು ಪ್ರಸಿದ್ಧ ಐತಿಹಾಸಿಕ ಸ್ಥಳದ ಸಮಾರಂಭಕ್ಕೆ ಸಜ್ಜುಗೊಂಡಿದೆ. ವಿಶ್ವ ಪ್ರಸಿದ್ಧ ಪುರಿ ಜಗನ್ನಾಥ ದೇಗುಲವನ್ನೊಳಗೊಂಡಂತೆ ಅಭಿವೃದ್ಧಿಪಡಿ ಸಲಾಗಿರುವ “ಶ್ರೀಮಂದಿರ ಪರಿಕ್ರಮ ಪಾರಂಪರಿಕ ಕಾರಿಡಾರ್’ ಜನವರಿ ಯಲ್ಲಿ ಉದ್ಘಾಟನೆಗೊಳ್ಳಲಿದ್ದು, ದೇಶದ ಗಮನವೀಗ ಪುರಿಯತ್ತ ನೆಟ್ಟಿದೆ.
ರಾಜ್ಯಸರಕಾರದ ಮಹತ್ವದ ಯೋಜನೆ
ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನೇತೃತ್ವದ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದು ಶ್ರೀಮಂದಿರ ಪರಿಕ್ರಮ ಕಾರಿಡಾರ್. ಪುರಿಯನ್ನು ಅಂತಾರಾಷ್ಟ್ರೀಯ ಪಾರಂಪರಿಕ ನಗರವನ್ನಾಗಿ ಪರಿವರ್ತಿಸುವುದು ಇದರ ಉದ್ದೇಶ.
ಏನಿದು ಕಾರಿಡಾರ್ ?12ನೇ ಶತಮಾನದ ಐತಿಹಾಸಿಕ ಪುರಿ ಜಗನ್ನಾಥ ದೇಗುಲದ ಸುತ್ತ 75 ಮೀ. ವ್ಯಾಪ್ತಿಯಲ್ಲಿ ನಿರ್ಮಿಸಿರುವುದೇ ಶ್ರೀಮಂದಿರ ಪರಿಕ್ರಮ ಕಾರಿಡಾರ್. ದೇವಾಲಯಕ್ಕೆ ಭದ್ರತೆ ಮಾತ್ರವಲ್ಲದೇ, ಭಕ್ತರಿಗೆ ಮೂಲಸೌಕರ್ಯ ಅಭಿವೃದ್ಧಿಪಡಿಸಲೂ ಈ ಕಾರಿಡಾರ್ ಬಳಕೆಯಾಗಲಿದೆ. ಸದ್ಯಕ್ಕೆ ಕಾರಿಡಾರ್‌ನ ಸಣ್ಣಪುಟ್ಟ ಪ್ರಗತಿ ಕೆಲಸಗಳು ನಡೆಯುತ್ತಿದ್ದು, ಡಿ.15ರ ವೇಳೆಗೆ ಎಲ್ಲ ಕಾರ್ಯಗಳೂ ಪೂರ್ಣಗೊಳ್ಳಲಿವೆ.
ಅದ್ದೂರಿ ಸಮಾರಂಭಕ್ಕೆ ಸಜ್ಜು
ರಾಮಮಂದಿರ ಉದ್ಘಾಟನೆಯ ಭಾಗವಾಗಿ ದೇಶಾದ್ಯಂತ ಸಮಾರಂಭಗಳನ್ನು ಆಯೋಜಿಸುತ್ತಿರುವಂತೆಯೇ ಒಡಿಶಾದಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಕಾರಿಡಾರ್ ಉದ್ಘಾಟನೆಯ ಭಾಗವಾಗಿ ಹಲವು ಸಮಾರಂಭಗಳನ್ನು ಯೋಜಿಸಲಾಗಿದೆ. ದೇಗುಲದ ನಾಲ್ಕು ದಿಕ್ಕಿನಲ್ಲೂ ಹೋಮ-ಹವನಗಳು, ವೇದ ಪಠಣ ಸೇರಿ ವಿವಿಧ ಕಾರ್ಯಕ್ರಮಗಳನ್ನು ಯೋಜಿಸಿ ಅದ್ದೂರಿಯಾಗಿ ಉದ್ಘಾಟನೆ ನಡೆಸಲು ಸರಕಾರ ಯೋಜಿಸಿದೆ.