Advertisement

ಶುದ್ಧ ಕುಡಿಯುವ ನೀರಿನ ಸವಾಲು: ಇರಲಿ ಕಣ್ಗಾವಲು

10:10 PM Apr 02, 2019 | sudhir |

ಉಡುಪಿ: ಅಂತರ್ಜಲ ಬತ್ತುತ್ತಿರುವುದರಿಂದ ನೀರಿನ ಮೂಲಗಳು ಅಳಿಯುತ್ತಿವೆ. ಇದರ ಜತೆಗೆ ಅಳಿದುಳಿದ ನೀರಿನ ಮೂಲಗಳ ಶುದ್ಧತೆಯ ಪ್ರಶ್ನೆ ಎದುರಾಗಿದೆ. ಸಾರ್ವಜನಿಕ ಕುಡಿಯುವ ನೀರು ಪೂರೈಕೆ ಹಾಗೂ ಖಾಸಗಿ ಬಳಕೆಯ ನೀರಿನ ಮೂಲಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಬೇಕಾದ ಆವಶ್ಯಕತೆ ಇದೆ.

Advertisement

ಉಡುಪಿ ಜಿಲ್ಲೆಯಲ್ಲಿ ಫ್ಲೋರೈಡ್‌, ಆರ್ಸೆನಿಕ್‌ ಮೊದಲಾದ ರಾಸಾಯನಿಕಗಳಿಂದ ಸಮಸ್ಯೆ ಎದುರಾಗಿಲ್ಲ. ಅಂಥ ಆತಂಕ ದೂರ. ಆದರೆ ಕೆಲವು ಬ್ಯಾಕ್ಟೀರಿಯಾಗಳುಳ್ಳ (ಇಸೆcàರೀಚಿಯಾ ಕೂಲ್‌ ಇಂಡಿಕೇಟರ್‌ ಬಾಕ್ಟೀರಿಯಾ) ಕಲುಷಿತ ನೀರು ಹಲವೆಡೆ ಗುರುತಿಸಲ್ಪಟ್ಟಿದೆ. ಇದು ನೀರಿನ ಮೂಲಗಳೆಲ್ಲವೂ ಯಾವಾಗಲೂ ಪರಿಶುದ್ಧವಾಗಿಲ್ಲ ಎಂಬುದನ್ನು ದೃಢಪಡಿಸಿದೆ.

6,000ಕ್ಕೂ ಅಧಿಕ ಮೂಲಗಳು ಅಯೋಗ್ಯ!
ಆರೋಗ್ಯ ಇಲಾಖೆಯ ಸರ್ವೇಕ್ಷಣಾ ವಿಭಾಗ ಜಿಲ್ಲೆಯಾದ್ಯಂತ ಕಳೆದೆರಡು ವರ್ಷಗಳಲ್ಲಿ 12,000ಕ್ಕೂ ಅಧಿಕ ಕುಡಿಯುವ ನೀರಿನ ಮೂಲಗಳಿಂದ ಮಾದರಿ ಸಂಗ್ರಹಿಸಿತ್ತು. ಈ ಪೈಕಿ ಸುಮಾರು 6,532ಕ್ಕೂ ಅಧಿಕ ನೀರಿನ ಮೂಲಗಳು (ತೆರೆದ ಬಾವಿ/ಕೊಳವೆ ಬಾವಿ/ನಳ್ಳಿ ನೀರು) ವಿವಿಧ ರೀತಿಯ(ಹಾನಿಕರ) ಬ್ಯಾಕ್ಟೀರಿಯಾಗಳಿಂದ ಕೂಡಿದ್ದ ಹಿನ್ನೆಲೆಯಲ್ಲಿ ಕುಡಿಯಲು ಅಯೋಗ್ಯ ಎಂದು ಗುರುತಿಸಲ್ಪಟ್ಟಿದ್ದವು.

2018ರಲ್ಲಿ ತಾಲೂಕಿನಲ್ಲಿ 5,975 ನೀರಿನ ಮೂಲಗಳಿಂದ ಮಾದರಿ ಪರೀಕ್ಷೆಗೊಳಪಡಿಸಲಾಗಿದ್ದು ಅದರಲ್ಲಿ 2,695 ಮೂಲಗಳು ಕುಡಿಯುವ ಬಳಕೆಗೆ ಅಯೋಗ್ಯ ಎಂದು ಗುರುತಿಸಲಾಗಿತ್ತು. ಕುಂದಾಪುರ ತಾಲೂಕಿನಲ್ಲಿ ಸಂಗ್ರಹಿಸಲಾದ 3,876 ನೀರಿನ ಮೂಲಗಳ ನೀರಿನ ಮಾದರಿಯಲ್ಲಿ 1,608 ಮೂಲಗಳು ಅಯೋಗ್ಯವಾಗಿದ್ದವು. ಕಾರ್ಕಳ ತಾಲೂಕಿನಲ್ಲಿ 2,961 ಮೂಲಗಳ ಮಾದರಿ ಸಂಗ್ರಹಿಸಲಾಗಿತ್ತು. ಇದರಲ್ಲಿ 1,424 ಮೂಲಗಳನ್ನು ಅಯೋಗ್ಯ ಎಂದು ಗುರುತಿಸಲಾಗಿತ್ತು. ಜಿಲ್ಲೆಯಲ್ಲಿ ಒಟ್ಟು 12,812 ನೀರಿನ ಮಾದರಿಗಳನ್ನು ಸಂಗ್ರಹಿಸಲಾಗಿದ್ದು ಅದರಲ್ಲಿ 5,727 ಮೂಲಗಳು ಅಯೋಗ್ಯ ಎಂದು ವರದಿ ಸಲ್ಲಿಸಲಾಗಿತ್ತು. ಈ ಪೈಕಿ ಬಹುತೇಕ ಮೂಲಗಳನ್ನು ಕ್ಲೋರಿನೇಷನ್‌ ಮಾಡಿ ಸ್ವತ್ಛಗೊಳಿಸಲಾಗಿದೆ. 2018ರಲ್ಲಿ 5,529 ಹಾಗೂ 2019ರ ಫೆಬ್ರವರಿವರೆಗೆ 792 ಮೂಲಗಳನ್ನು ಕ್ಲೋರಿನೇಷನ್‌ ಮಾಡಲಾಗಿದೆ ಎನ್ನುತ್ತದೆ ಇಲಾಖಾ ಮಾಹಿತಿ.

ಈ ಮೂಲಗಳ ಬಗ್ಗೆ ಆತಂಕ ಬೇಡ. ಆದರೆ ನೀರಿನ ಮೂಲಗಳಲ್ಲಿ ಸಂದೇಹ ಬಂದರೆ ಕೂಡಲೇ ಪ್ರಾ.ಆರೋಗ್ಯ ಕೇಂದ್ರ, ಸ್ಥಳೀಯಾಡಳಿತ ಸಂಸ್ಥೆಗಳಿಗೆ ತಿಳಿಸಬೇಕು. ಮಾದರಿಯನ್ನು ಇಲಾಖೆಗೆ ಕಳುಹಿಸಿಕೊಡಬೇಕು ಎನ್ನುತ್ತಾರೆ ಅಧಿಕಾರಿಗಳು.

Advertisement

ಕುದಿಸಿದ ನೀರು ನೀಡಲು ಸೂಚನೆ
ಎಲ್ಲ ಹೊಟೇಲ್‌ಗ‌ಳಲ್ಲಿ ಕೂಡ ಗ್ರಾಹಕರು ಕೇಳಿದರೆ ಕಡ್ಡಾಯವಾಗಿ ಕುದಿಸಿ ಆರಿಸಿದ ನೀರನ್ನೇ ನೀಡಲು ಸೂಚನೆ ನೀಡಲಾಗಿದೆ. ಆದೇಶ ಮೀರುವ ಹೊಟೇಲ್‌ಗ‌ಳ ವಿರುದ್ಧ ದಂಡ/ ಇತರ ಕ್ರಮ ಕೈಗೊಳ್ಳಲು ಅವಕಾಶವಿದೆ. ಆದರೆ ಸಾಮಾನ್ಯವಾಗಿ ಈ ಭಾಗದಲ್ಲಿ ಹೊಟೇಲ್‌ಗ‌ಳಲ್ಲಿ ತಣ್ಣೀರನ್ನೇ ಕುಡಿಯುವವರು ಹೆಚ್ಚು. ಕುದಿಸಿ ಆರಿಸಿದ ನೀರನ್ನು ಕುಡಿಯುವುದು ಸುರಕ್ಷಿತ. ಗ್ರಾ.ಪಂ. ಅಥವಾ ಇತರ ಸ್ಥಳೀಯಾಡಳಿತಗಳು ಪೂರೈಕೆ ಮಾಡುವ ನೀರಿನ ಶುದ್ಧತೆ/ ಗುಣಮಟ್ಟ ಪರೀಕ್ಷಿಸುವುದು, ಶುದ್ಧತೆ ಕಾಪಾಡುವುದು ಆಯಾ ಸ್ಥಳೀಯಾಡಳಿತ ಸಂಸ್ಥೆಗಳ ಜವಾಬ್ದಾರಿ.
-ಡಾ| ವಾಸುದೇವ ರಾವ್‌, ಜಿಲ್ಲಾ ಸರ್ವೇಕ್ಷಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next