ಹಾವೇರಿ: ನಾಗಮಂಗಲದಲ್ಲಿ ಮುಸ್ಲಿಂ ಕಿಡಿಗೇಡಿಗಳಿಂದ ಗಲಭೆಯಾಗಿದೆ. ಗಣೇಶನ ಮೆರವಣಿಗೆಯಲ್ಲಿ ಕಲ್ಲು, ಚಪ್ಪಲಿ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಮಸೀದಿ ಗಲಾಟೆ ಮಾಡುವ ಕೇಂದ್ರವೇ? ಮಸೀದಿ ಮುಂದೆ ಗಣೇಶನ ಮೆರವಣಿಗೆ ಹೋಗಬಾರದಾ? ಪೂರ್ವಯೋಜಿತ ಗಲಭೆ ಇದು, ಪೊಲೀಸರಿಗೆ ಇದು ಗೊತ್ತಾಗಲಿಲ್ವಾ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ನಾನು ನಾಗಮಂಗಲಕ್ಕೆ ಹೋಗುತ್ತೇನೆ, ತಡೆಯಿರಿ ನೋಡೋಣ! ಮುಸ್ಲಿಮರ ಜೊತೆ ಯಾವುದೇ ವ್ಯವಹಾರ ಮಾಡಬೇಡಿ, ಮುಸ್ಲಿಂರನ್ನು ಬಹಿಷ್ಕಾರ ಹಾಕಿ. ವಕ್ಪ್ ಬೋರ್ಡ್ ರದ್ದು ಮಾಡಬೇಕು, ಇವರಿಗಷ್ಟೇ ಯಾಕೆ ಬೋರ್ಡ್? ಮಸೀದಿ ಮೇಲೆ ಮೈಕ್ ನಿಲ್ಲಿಸಿ, ರಾಜ್ಯದಲ್ಲಿ ನಾನೇ ಡಿಜೆ ನಿಲ್ಲಿಸುತ್ತೇನೆ ಎಂದು ಕಿಡಿಕಾರಿದರು.
ಎಚ್ಚರಿಕೆ ಕೊಡುತ್ತಿದ್ದೇನೆ, ಇಂತಹ ಗಲಭೆಗಳಿಗೆ ನಾವು ಉತ್ತರ ಕೊಡಬೇಕಾಗುತ್ತದೆ. ಪೊಲೀಸ್ ಇಲಾಖೆ ಕತ್ತೆ ಕಾಯುತ್ತಿದೆಯಾ ಎಂದರು.
ಬಿಜೆಪಿಯವರಿಗೆ ಅಧಿಕಾರ ಮುಖ್ಯ, ಮಸೀದಿ ಮೇಲಿನ ಮೈಕ್ ಕಿತ್ತಾಕೊ ತಾಕತ್ತಿಲ್ಲ. ಮೈಕ್ ಕಿತ್ತಾಕಿ ಎಂದು ಹೋರಾಟ ಮಾಡಿದರೆ, ಬೊಮ್ಮಾಯಿ ನಮ್ಮನ್ನು ಅರೆಸ್ಟ್ ಮಾಡಿಸಿದ್ದರು ಎಂದರು.
ರಟ್ಟಿಹಳ್ಳಿಯ ಗಣೇಶ ವಿಸರ್ಜನೆಯಲ್ಲಿ ಭಾಗವಹಿಸಲು ಅವಕಾಶ ಕೊಟ್ಟಿಲ್ಲ. ರಟ್ಟಿಹಳ್ಳಿಗೆ ಪ್ರವೇಶ ಮಾಡದಂತೆ ಜಿಲ್ಲಾಧಿಕಾರಿಗಳು ನಿರ್ಬಂಧ ಹಾಕಿದ್ದಾರೆ. ರಟ್ಟಿಹಳ್ಳಿ ಪಾಕಿಸ್ತಾನ ಅಲ್ಲ, ಭಾರತದ ಒಂದು ಭಾಗ. ಗಲಭೆ ಮಾಡುವವರನ್ನು ಕಂಟ್ರೋಲ್ ಮಾಡಿ. ನಾನು ಗಲಭೆ ಮಾಡುವವನಲ್ಲ, ಸುಮ್ಮನೆ ಯಾಕೆ ಕೇಸ್ ಹಾಕುತ್ತಿದ್ದೀರಿ ಎಂದು ಮುತಾಲಿಕ್ ಹೇಳಿದರು.