Advertisement
ಉಭಯ ಜಿಲ್ಲೆಯಲ್ಲಿ ಭತ್ತದ ಕೊçಲು ಮುಗಿಯುತ್ತಿದ್ದು, ಹಲವು ರೈತರು ಈಗಾ ಗಲೇ ತಾವು ಬೆಳೆದ ಭತ್ತವನ್ನು ಪ್ರತೀ ವರ್ಷ ದಂತೆ ಈ ವರ್ಷವೂ ಖಾಸಗಿ ಮಿಲ್‌ಗಳ ಮಾಲಕರಿಗೆ ನೀಡಿಯಾಗಿದೆ. ಇನ್ನು ಕೆಲವರು ಮಿಲ್‌ಗಳಿಗೆ ನೀಡುವ ಬಗ್ಗೆ ಹಿಂದೆಯೇ ಒಪ್ಪಂದವನ್ನು ಮಾಡಿಕೊಂಡಿದ್ದರಿಂದ ಅದರಂತೆ ಮುಂದುವರಿಯುತ್ತಿದ್ದಾರೆ.
ಭತ್ತ ಖರೀದಿಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯ ವಿವಿಧ ಹೋಬಳಿಗಳಲ್ಲಿ ತೆರೆಯಲಾಗಿರುವ ನೋಂದಣಿ ಕೇಂದ್ರದಲ್ಲಿ ನ. 30ರ ಅಂತ್ಯಕ್ಕೆ 32 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಈ ರೈತರಿಂದ ಸುಮಾರು 750 ಕ್ವಿಂ. ಭತ್ತ ಸಿಗುವ ಸಾಧ್ಯತೆ ಯಿದೆ. ದ.ಕ. ಜಿಲ್ಲೆಯ ವಿವಿಧೆಡೆಯಲ್ಲೂ ಭತ್ತ ಖರೀದಿ ನೋಂದಣಿ ಕೇಂದ್ರವನ್ನು ಆರಂಭಿಸಲಾಗಿದೆ. ಆದರೆ ಈವರೆಗೂ ನೋಂದಣಿ ಮಾಡಿಕೊಂಡಿರುವ ರೈತರ ಸಂಖ್ಯೆ ಕೇವಲ ನಾಲ್ಕು. ಈ ನಾಲ್ವರಿಂದ ಸುಮಾರು 80 ಕ್ವಿಂ. ಭತ್ತ ಬರಲಿದೆ. ರೈತರಿಗೆ ನಿರಂತರ ಮಾಹಿತಿ
ಉಡುಪಿ, ದ.ಕ. ಜಿಲ್ಲೆಯಲ್ಲಿ ಪಡಿತರ ವ್ಯವಸ್ಥೆಯ ಕುಚ್ಚಲು ಅಕ್ಕಿ ವಿತರಣೆಗೆ ಪ್ರತೀ ತಿಂಗಳು ಸರಾಸರಿ 1 ಲಕ್ಷ ಕ್ವಿಂಟಾಲ್ ಅಕ್ಕಿ ಅಗತ್ಯವಿದೆ. ಹೀಗಾಗಿ ಹೊರ ರಾಜ್ಯ ಅಥವಾ ಹೊರ ಜಿಲ್ಲೆಯಿಂದ ಕುಚ್ಚಲು ಅಕ್ಕಿ ತರಿಸಿಕೊಳ್ಳುವುದಕ್ಕಿಂತ ಸ್ಥಳೀಯವಾಗಿ ರೈತರು ಬೆಳೆದ ಕುಚ್ಚಲಕ್ಕಿಯ ಭತ್ತವನ್ನು ಬೆಂಬಲ ಬೆಲೆಯಡಿ ನೀಡುವಂತಾಗಬೇಕು. ಈ ಬಗ್ಗೆ ರೈತರಿಗೆ ನಿರಂತರ ಮಾಹಿತಿ ನೀಡು ತ್ತಿದ್ದೇವೆ. ಸ್ಥಳೀಯವಾಗಿ ಹೆಚ್ಚೆಚ್ಚು ಭತ್ತಗಳು ಲಭ್ಯವಾದಾಗ ಮಾತ್ರ ಸ್ಥಳೀಯ ಕುಚ್ಚಲಕ್ಕಿ ನೀಡಲು ಸಾಧ್ಯ ಎಂದು ಇಲಾಖೆ ತಿಳಿಸಿದೆ.