Advertisement
ಜಿಲ್ಲೆಯ ರೈತರು ಕೃಷಿ ಇಲಾಖೆಯಿಂದ ಜಾರಿಗೊಳಿಸಿರುವ ಫ್ರೂಟ್ಸ್ ತಂತ್ರಾಂಶದ ಗುರುತಿನ ಪತ್ರ, ಆಧಾರ್ ಜೋಡಣೆ ಮಾಡಿದ ಮತ್ತು ವ್ಯವಹಾರ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಪ್ರತಿ ನೀಡಿ ರಾಗಿ ಮತ್ತು ಭತ್ತ ಮಾರಾಟಕ್ಕೆ ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕವಿತಾ ರಾಜರಾಂ ಅವರು ತಿಳಿಸಿದ್ದಾರೆ.
Related Articles
Advertisement
ನೋಂದಣಿ ಮಾಡಿಸಿಕೊಳ್ಳಿ: ಭತ್ತ ಮತ್ತು ರಾಗಿ ಖರೀದಿ ಹಾಸನದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ ಆವರಣದಲ್ಲಿ ಮೊಸಳೆ ಹೊಸಳ್ಳಿಯ ಎಪಿಎಂಸಿ ಪ್ರಾಂಗಣ, ದುದ್ದ ಎಪಿಎಂಸಿ ಪ್ರಾಂಗಣದಲ್ಲಿ ಖರೀದಿ ಕೇಂದ್ರ ತೆಗೆಯಲಾಗುವುದು. ಕಟ್ಟಾಯ ಹೋಬಳಿ ರೈತ ಸಂಪರ್ಕ ಕೇಂದ್ರದಲ್ಲಿ ನೋಂದಣಿ ಮಾತ್ರ ನಡೆಯಲಿದೆ ಎಂದು ಹೇಳಿದರು.
ಅರಸಿಕೆರೆ ತಾಲೂಕಿನ ಜಾವಗಲ್, ಗಂಡಸಿ, ಜೆ.ಸಿ.ಪುರ, ಬಾಣಾವಾರ, ಅರಸೀಕೆರೆ, ಕೃಷಿ ಉತ್ಪನ್ನ ಮಾರು ಕಟ್ಟೆ ಪ್ರಾಂಗಣದಲ್ಲಿ ರಾಗಿ ಮಾತ್ರ ನೋಂದಣಿ ಹಾಗೂ ಖರೀದಿಸಲಾಗುತ್ತದೆ ಎಂದರು.
ಭತ್ತ, ರಾಗಿ ಖರೀದಿಗೆ ನೋಂದಣಿ: ಅರಕಲಗೂಡು ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣ ಹಾಗೂ ರಾಮನಾಥಪುರ ರೈತ ಸಂಪರ್ಕ ಕೇಂದ್ರದಲ್ಲಿ ನೋಂದಣಿ ಮತ್ತು ಅರಕಲಗೂಡಿನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಭತ್ತ ಮತ್ತು ರಾಗಿ ನೋಂದಣಿ ಹಾಗೂ ಖರೀದಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ಬೇಲೂರು ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಹಾಗೂ ಚನ್ನರಾಯಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ನುಗ್ಗೇಹಳ್ಳಿ, ಶ್ರವಣಬೆಳಗೊಳ, ಉದಯಪುರ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಭತ್ತ ಮತ್ತು ರಾಗಿ ನೋಂದಣಿ ಹಾಗೂ ಖರೀದಿ ಮಾಡ ಲಾಗುವುದು ಎಂದರು.
ಹೊಳೆನರಸೀಪುರ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಭತ್ತ ಮತ್ತು ರಾಗಿ ಹಾಗೂ ಸಕಲೇಶಪುರ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಭತ್ತ ಮಾತ್ರ ಖರೀದಿ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಜಂಟಿ ಕೃಷಿ ನಿರ್ದೇಶಕ ರಾಜ ಸುಲೋಚನಾ, ಲೀಡ್ ಬ್ಯಾಂಕ್‌ನ ವ್ಯವಸ್ಥಾಪಕಿ ರೇವತಿ ಸುಧಾಕರ್ ಮತ್ತಿತರರು ಹಾಜರಿದ್ದರು.