Advertisement

ಜೋಳ ಖರೀದಿ: ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡ ಸರ್ಕಾರ

06:27 PM Mar 18, 2022 | Team Udayavani |

ಸಿಂಧನೂರು: ಏನೋ ಮಾಡಲು ಹೋಗಿ ಇನ್ನೇನೋ ಮಾಡಿದಂತಾಗಿದೆ ಸರ್ಕಾರದ ನಡೆ. ರೈತನಿಂದ 20 ಕ್ವಿಂಟಲ್‌ ಎಂಬ ಅವೈಜ್ಞಾನಿಕ ನಿಯಮ ಹೇರಿ ಆಕ್ರೋಶಕ್ಕೆ ಗುರಿಯಾಗಿತ್ತು. ಬಳಿಕ ಎಷ್ಟು ಬೇಕಾದರೂ ಮಾರಾಟ ಮಾಡಿ ಎಂಬ ಅವಕಾಶ ನೀಡಿ ಹಳ್ಳಕ್ಕೆ ಬಿದ್ದಂತಾಗಿದೆ.

Advertisement

ಪ್ರತಿ ನಿತ್ಯ ಖರೀದಿ ಕೇಂದ್ರಗಳ ಎದುರು ಹತ್ತಾರು ಲಾರಿ, ಟ್ರ್ಯಾಕ್ಟರ್‌ಗಳು ಹಗಲು-ರಾತ್ರಿ ಸರದಿ ನಿಲ್ಲುತ್ತಿದ್ದು, ಖರೀದಿ ಪ್ರಕ್ರಿಯೆ ಸುಲಭವಾಗಿ ನಡೆಯದಾಗಿದೆ. ಮಾರುಕಟ್ಟೆಯಲ್ಲೂ ಬೆಂಬಲ ಬೆಲೆಯಷ್ಟೇ ಪ್ರತಿ ಕ್ವಿಂಟಲ್‌ಗೆ ಬೆಲೆ ಸಿಗುತ್ತಿದ್ದರೂ ಅಲ್ಲಿ ಖರೀದಿಸಿದ ಜೋಳ “ಖರೀದಿ ಕೇಂದ್ರ’ಕ್ಕೆ ಬರಲಾರಂಭಿಸಿದೆ. ಆದರೆ, ಇದನ್ನು ಅಕ್ರಮ ಎನ್ನಲು ಸರ್ಕಾರಿ ನಿಯಮವೇ ಅಡ್ಡಿಯಾಗಿದೆ. ಈ ಹಿಂದೆ ಪ್ರತಿಯೊಬ್ಬ ರೈತನಿಂದ 75 ಕ್ವಿಂಟಲ್‌ ಎಂಬ ಮಿತಿಯಿತ್ತು. ಎಕರೆಗೆ 10 ಕ್ವಿಂಟಲ್‌ನಂತೆ ಕೊಡಿ ಎಂಬ ಆಹ್ವಾನ ಕೊಟ್ಟ ಮೇಲೆ ತಾಪತ್ರಯ ಉಂಟಾಗಿದೆ.

ಭಾರೀ ಬದಲಾವಣೆ

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ಆರಂಭಿಸಿದ ಬಳಿಕ ವಾಸ್ತವದಲ್ಲಿ ಭಾರೀ ವ್ಯತ್ಯಾಸ ಉಂಟಾಗಿದೆ. ಆರಂಭದಲ್ಲಿ ಪ್ರತಿಯೊಬ್ಬ ರೈತನಿಂದ 20 ಕ್ವಿಂಟಲ್‌ ಮಾತ್ರವೇ ಖರೀದಿ ಎಂಬ ಷರತ್ತು ಹಾಕಿ ನಿರ್ಬಂಧ ಹೇರಲಾಗಿತ್ತು. ಆದರೆ, ಚೌಕಾಸಿ ಮಾಡಿ ನಿರ್ಬಂಧ ಸಡಿಲಿಸುವಾಗ ಎಷ್ಟು ಜಮೀನು ಇದ್ದರೂ ಪ್ರತಿ ಎಕರೆಗೆ 10 ಕ್ವಿಂಟಲ್‌ನಂತೆ ಮಾರಾಟ ಮಾಡಬಹುದು ಎಂಬ ರಿಯಾಯಿತಿ ಕೊಟ್ಟ ಮೇಲೆ ಸರ್ಕಾರವೇ ಬೆಚ್ಚಿ ಬೀಳುವಂತಾಗಿದೆ. ಇಲ್ಲದ ಷರತ್ತು ಹಾಕಿ ಅವೈಜ್ಞಾನಿಕ ರಿಯಾಯಿತಿ ಕೊಟ್ಟು ಸರ್ಕಸ್‌ ಮಾಡಲು ಹೊರಟಿದೆ.

ಪಹಣಿಯ ಮೇಲೂ ಬಾಡಿಗೆ

Advertisement

ಪಹಣಿಗಳಲ್ಲಿ ಬೆಳೆ ಕಾಲಂ ಬದಲಾವಣೆ ಮಾಡುತ್ತಿದ್ದಾರೆಂಬ ಆರೋಪ ಕೇಳಿಬಂದಿತ್ತು. ನೂರಾರು ಎಕರೆ ಜಮೀನು ಹೊಂದಿದ ಹಾಗೂ ಬಂಧು-ಬಳಗದ ಜಮೀನು ಒಗ್ಗೂಡಿಸಿಕೊಂಡ ವ್ಯಕ್ತಿಗಳು ಸಾವಿರಾರು ಕ್ವಿಂಟಲ್‌ ಜೋಳವನ್ನು ಖರೀದಿ ಕೇಂದ್ರಕ್ಕೆ ಹಾಕಲಾರಂಭಿಸಿದ್ದಾರೆ. ಒಂದು ಪಹಣಿಗೆ ಸಂಬಂಧಿಸಿ ಕ್ವಿಂಟಲ್‌ಗೆ 100 ರೂ. ಕಮಿಷನ್‌ ನೀಡಲಾಗುತ್ತಿದೆ. ಮಧ್ಯವರ್ತಿಗಳಿಗೂ ಕೂಡ 50ರಿಂದ 100 ರೂ. ಕೊಡಲಾಗುತ್ತಿದೆ. ಮುಕ್ತ ಮಾರುಕಟ್ಟೆಯಲ್ಲಿ 2,320 ರೂ. ಗೆ ಖರೀದಿಸಿ, ಬೆಂಬಲ ಬೆಲೆಯಡಿ ಸಿಗುತ್ತಿರುವ 2,738 ರೂ.ಗೂ ಮಾರಾಟ ಮಾಡಲು ಮುಂದಾಗಿದ್ದಾರೆ.

ಜಿದ್ದಾಜಿದ್ದಿ ಜೋರು

ತಾಲೂಕಿನಲ್ಲಿ 18 ಖರೀದಿ ಕೇಂದ್ರಗಳು ಸಕ್ರಿಯವಾಗಿವೆ. ಆದರೆ, ಈವರೆಗೂ 1 ಲಕ್ಷ ಕ್ವಿಂಟಲ್‌ ಕೂಡ ಖರೀದಿಯಾಗಿಲ್ಲ. ಆದರೆ, 4 ಲಕ್ಷ ಕ್ವಿಂಟಲ್‌ ಗೂ ಹೆಚ್ಚಿನ ಜೋಳವನ್ನು ನೋಂದಣಿ ಆಧರಿಸಿ ಖರೀದಿ ಮಾಡಬೇಕಿದೆ. ಹಗಲು- ರಾತ್ರಿ ತೂಕ ಮಾಡಿದರೂ ಮಾ.31ರೊಳಗೆ ಮುಗಿಯುವ ಲಕ್ಷಣಗಳಿಲ್ಲ. ಈ ಅವಧಿ ವಿಸ್ತರಿಸಬೇಕೆಂಬ ಕೂಗು ಬಲವಾಗಿದೆ.ಸರ್ಕಾರದಿಂದಲೇ ಮುಕ್ತ ಅವಕಾಶನೂರಾರು ಎಕರೆ ಜಮೀನು ಒಗ್ಗೂಡಿಸಿ 1 ಸಾವಿರ ಕ್ವಿಂಟಲ್‌ಗ‌ೂ ಹೆಚ್ಚು ಜೋಳ ಮಾರಾಟ ಮಾಡಲು ಸರ್ಕಾರವೇ ಅವಕಾಶ ಮಾಡಿಕೊಟ್ಟಿದೆ. ಇದನ್ನು ಬಂಡವಾಳ ಉಳ್ಳ ರೈತರು ಬಳಸಿಕೊಳ್ಳಲು ಆರಂಭಿಸಿದ್ದು, ಸರ್ಕಾರಿ ನಿಯಮದ ಪ್ರಕಾರವೇ ಪಹಣಿ, ಆಧಾರ್‌ ಸಂಖ್ಯೆ, ಬ್ಯಾಂಕ್‌ ಪಾಸ್‌ಬುಕ್‌, ಕೃಷಿ ಇಲಾಖೆಯ ಐಡಿ ಆಧರಿಸಿ ಖರೀದಿ ನಡೆಯುತ್ತಿದೆ. ಇದರಲ್ಲಿ ಇವರು ರೈತರೇ ಅಲ್ಲವೆಂದು ಹೇಳಲು ಸರ್ಕಾರದ ಬಳಿಯೇ ಅವಕಾಶ ಇಲ್ಲವಾಗಿದೆ. ಎಷ್ಟು ಬೇಕಾದರೂ ಮಾರಾಟ ಮಾಡಬಹುದು ಎಂಬ ಸರ್ಕಾರದ ಅವಕಾಶವನ್ನು ಬಹುತೇಕರು ಮುಕ್ತವಾಗಿ ಬಳಸಿಕೊಂಡು ಬೆಂಬಲ ಬೆಲೆ ಯೋಜನೆ ಲಾಭ ಪಡೆಯಲಾರಂಭಿಸಿದ್ದಾರೆ.

ತಾಲೂಕಿನ ಎಲ್ಲ ಖರೀದಿ ಕೇಂದ್ರಕ್ಕೂ ಭೇಟಿ ನೀಡಿ ತ್ವರಿತವಾಗಿ ಖರೀದಿ ಪ್ರಕ್ರಿಯೆ ಮುಗಿಸಲು ಸೂಚಿಸಲಾಗಿದೆ. ಅಗತ್ಯ ಬಿದ್ದರೆ ಖರೀದಿ ಅವಧಿ ವಿಸ್ತರಣೆ ಮಾಡುವಂತೆ ಸಂಬಂಧಿಸಿದ ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ. ಮಂಜುನಾಥ ಭೋಗಾವತಿ, ತಹಶೀಲ್ದಾರ್‌, ಸಿಂಧನೂರು ­ಯಮನಪ್ಪ ಪವಾರತಾಲೂಕಿನಲ್ಲಿ 18 ಖರೀದಿ ಕೇಂದ್ರಗಳು ಸಕ್ರಿಯವಾಗಿವೆ. ಆದರೆ, ಈವರೆಗೂ 1 ಲಕ್ಷ ಕ್ವಿಂಟಲ್‌ ಕೂಡ ಖರೀದಿಯಾಗಿಲ್ಲ. ಆದರೆ, 4 ಲಕ್ಷ ಕ್ವಿಂಟಲ್‌ ಗೂ ಹೆಚ್ಚಿನ ಜೋಳವನ್ನು ನೋಂದಣಿ ಆಧರಿಸಿ ಖರೀದಿ ಮಾಡಬೇಕಿದೆ. ಹಗಲು- ರಾತ್ರಿ ತೂಕ ಮಾಡಿದರೂ ಮಾ.31ರೊಳಗೆ ಮುಗಿಯುವ ಲಕ್ಷಣಗಳಿಲ್ಲ. ಈ ಅವಧಿ ವಿಸ್ತರಿಸಬೇಕೆಂಬ ಕೂಗು ಬಲವಾಗಿದೆ.

ಸರ್ಕಾರದಿಂದಲೇ ಮುಕ್ತ ಅವಕಾಶ

ನೂರಾರು ಎಕರೆ ಜಮೀನು ಒಗ್ಗೂಡಿಸಿ 1 ಸಾವಿರ ಕ್ವಿಂಟಲ್‌ಗ‌ೂ ಹೆಚ್ಚು ಜೋಳ ಮಾರಾಟ ಮಾಡಲು ಸರ್ಕಾರವೇ ಅವಕಾಶ ಮಾಡಿಕೊಟ್ಟಿದೆ. ಇದನ್ನು ಬಂಡವಾಳ ಉಳ್ಳ ರೈತರು ಬಳಸಿಕೊಳ್ಳಲು ಆರಂಭಿಸಿದ್ದು, ಸರ್ಕಾರಿ ನಿಯಮದ ಪ್ರಕಾರವೇ ಪಹಣಿ, ಆಧಾರ್‌ ಸಂಖ್ಯೆ, ಬ್ಯಾಂಕ್‌ ಪಾಸ್‌ಬುಕ್‌, ಕೃಷಿ ಇಲಾಖೆಯ ಐಡಿ ಆಧರಿಸಿ ಖರೀದಿ ನಡೆಯುತ್ತಿದೆ. ಇದರಲ್ಲಿ ಇವರು ರೈತರೇ ಅಲ್ಲವೆಂದು ಹೇಳಲು ಸರ್ಕಾರದ ಬಳಿಯೇ ಅವಕಾಶ ಇಲ್ಲವಾಗಿದೆ. ಎಷ್ಟು ಬೇಕಾದರೂ ಮಾರಾಟ ಮಾಡಬಹುದು ಎಂಬ ಸರ್ಕಾರದ ಅವಕಾಶವನ್ನು ಬಹುತೇಕರು ಮುಕ್ತವಾಗಿ ಬಳಸಿಕೊಂಡು ಬೆಂಬಲ ಬೆಲೆ ಯೋಜನೆ ಲಾಭ ಪಡೆಯಲಾರಂಭಿಸಿದ್ದಾರೆ.

ತಾಲೂಕಿನ ಎಲ್ಲ ಖರೀದಿ ಕೇಂದ್ರಕ್ಕೂ ಭೇಟಿ ನೀಡಿ ತ್ವರಿತವಾಗಿ ಖರೀದಿ ಪ್ರಕ್ರಿಯೆ ಮುಗಿಸಲು ಸೂಚಿಸಲಾಗಿದೆ. ಅಗತ್ಯ ಬಿದ್ದರೆ ಖರೀದಿ ಅವಧಿ ವಿಸ್ತರಣೆ ಮಾಡುವಂತೆ ಸಂಬಂಧಿಸಿದ ಮೇಲಧಿಕಾರಿಗಳ ಗಮನಕ್ಕೂ ತರಲಾಗಿದೆ. -ಮಂಜುನಾಥ ಭೋಗಾವತಿ, ತಹಶೀಲ್ದಾರ್‌, ಸಿಂಧನೂರು

­-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next