Advertisement

ರೈತರಿಂದ ಬಾಳೆಹಣ್ಣು ಖರೀದಿಸಿ ವಿತರಣೆ

12:29 PM Nov 26, 2021 | Team Udayavani |

ಆಳಂದ: ಮಾರುಕಟ್ಟೆಯಲ್ಲಿ ಬಾಳೆ ಹಣ್ಣಿನ ಬೆಲೆ ಕುಸಿದು ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಬೆಂಬಲ ನೀಡಲು ತಾಲೂಕಿನ ಮದಗುಣಕಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ವೇಳೆ ಗ್ರಾಮಸ್ಥರೊಬ್ಬರು ಬಾಳೆಹಣ್ಣು ಖರೀದಿಸಿ ನೀಡಿದರು.

Advertisement

ಕರವೇ ಜಿಲ್ಲಾ ಸಂಚಾಲಕ ಮಹಾಂತೇಶ ಸಣ್ಣಮನಿ ಬಾಳೆ ಬೆಳೆಗಾರರಿಂದ ಬಾಳೆಹಣ್ಣು ಖರೀದಿಸಿ 180 ವಿದ್ಯಾರ್ಥಿಗಳಿಗೆ ತಲಾ ಎರಡು ಬಾಳೆ ಹಣ್ಣು ವಿತರಿಸಿದರು.

ಇದೇ ವೇಳೆ ಪ್ರತಿಕ್ರಿಯಿಸಿದ ಸಣ್ಣಮನಿ, ಸಂಕಷ್ಟದಲ್ಲಿರುವ ಬಾಳೆ ಬೆಳೆಗಾರರಿಗೆ ಬೆಲೆ ಕುಸಿದ ಹಿನ್ನೆಲೆಯಲ್ಲಿ ದಿಕ್ಕು ತೋಚದಂತಾಗಿದೆ. ಆದ್ದರಿಂದ ರೈತರಿಂದ ಬಾಳೆಹಣ್ಣು ಖರೀದಿಸಿ ಸಭೆ, ಸಮಾರಂಭ, ವಿವಾಹ ಸಮಾರಂಭಗಳಲ್ಲಿ ನೀಡಬೇಕು ಎಂದು ಕೋರಿದರು.

ಮುಖ್ಯ ಶಿಕ್ಷಕ ಬಸಣ್ಣ ಸಿಗರಕಂಟಿ ಅವರು ಕರವೇ ಜಿಲ್ಲಾ ಸಂಚಾಲಕರ ಕಾರ್ಯವನ್ನು ಶ್ಲಾಗಿಸಿದರು. ಶಿಕ್ಷಕರಾದ ಮಹಾದೇವ ಬಂಡೆ, ಭಾರತಿ, ನಾಗೇಶ ಇಂದಾಪುರೆ, ಬಸವರಾಜ, ಸಿದ್ಧು, ಶಿವನಿಂಗಪ್ಪ, ಬಿಸಿಯೂಟದ ಶಾಂತಾಬಾಯಿ ಮಾಂಗ್‌, ಭೌರಮ್ಮ ಸಣ್ಣಮನಿ, ಮಹಾದೇವಿ ಜಮಾದಾರ, ಗ್ರಾಮದ ನಾಗೇಶ ಮಡಿವಾಳ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next