Advertisement

ಸಾಹಿತ್ಯಕ್ಕೆ ಶರಣರ ಕೊಡುಗೆ ಅಪಾರ

06:32 PM Oct 24, 2020 | Suhan S |

ಸಿಂದಗಿ: ಶರಣರು ವಚನಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯಲೋಕಕ್ಕೆ ತಮ್ಮದೆಯಾದ ಕೊಡುಗೆನೀಡಿದ್ದಾರೆ ಎಂದು ಕಡಕೋಳ ಸಂಸ್ಥಾನ ಹಿರೇಮಠದ ಡಾ| ರುದ್ರಮುನಿ ಶಿವಾಚಾರ್ಯರು ಹೇಳಿದರು.

Advertisement

ತಾಲೂಕಿನ ಮುರಡಿ ಗ್ರಾಮದ ದಾರ್ಶನಿಕ ಗುರು ಘಂಟಾಕರ್ಣ ಶಿವಯೋಗಿಗಳ 16ನೇ ಪುಣ್ಯಾರಾಧನೆ ನಿಮಿತ್ತ ಹಮ್ಮಿಕೊಂಡ ಪುರಾಣ ಹಾಗೂ ಧರ್ಮಸಭೆ ಸಾನ್ನಿಧ್ಯ ವಹಿಸಿ ಅವರುಮಾತನಾಡಿದರು.

ಶರಣರು ತಮ್ಮ ಕಾಯಕದಾಸೋಹದ ಜೊತೆಗೆ ವಚನಗಳನ್ನು ರಚನೆ ಮಾಡುವ ಮೂಲಕ ಸಮಾಜದಲ್ಲಿ ಆಳವಾಗಿ ಬೆರೂರಿದ್ದ ಮುಢನಂಬಿಕೆ, ಅಂಧಕಾರ, ಅಸಮಾನತೆ, ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸುವಲ್ಲಿ ಶ್ರಮಿಸಿದಕಾಯಕ ಯೋಗಿಗಳು. ಅವರವಚನಗಳನ್ನು ನಾವು ಅಧ್ಯಯನ ಮಾಡಬೇಕು. ದಿನಕ್ಕೊಂದು ವಚನ ಪಠಣ ಮಾಡಬೇಕು. ದಾರ್ಶನಿಕ ಗುರು ಘಂಟಾಕರ್ಣ ಶಿವಯೋಗಿಗಳ ಆದರ್ಶ, ತತ್ವಗಳನ್ನು ಹಾಗೂ ಅವರು ಹಾಕಿಕೊಟ್ಟ ಮಾರ್ಗದಲ್ಲಿನಡೆದಾಗ ಮಾತ್ರ ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು.

ಮಡಿವಾಳೇಶ್ವರರು ಒಬ್ಬ ದಾರ್ಶನಿಕ ಸಂತ, ಅವರ ವಚನಗಳುಮಾನವ ಕುಲಕೋಟಿಗೆ ದಾರಿ ದೀಪಗಳಾಗಿವೆ. ನಮ್ಮ ಸಮಾಜದ ನಿತ್ಯ ಜೀವನದ ಸತ್ಯ ಸಂಗತಿಗಳನ್ನು ಯಾರ ಮುಲಾಜು ಕಾಯದೆ ತಮ್ಮ ವಚನ ಮತ್ತು ಹಾಡಿನ ಮೂಲಕ ಪ್ರಸ್ತುತ ಪಡಿಸಿದ್ದಾರೆ. ಘಂಟಾಕರ್ಣ ಶಿವಯೋಗಿಗಳು ಕೂಡಾ ಅನೇಕ ಪವಾಡ ಮಾಡಿ ಭಕ್ತರ ಉದ್ಧಾರ ಮಾಡಿ ಚಿರಸ್ಮರಣೀಯರಾಗಿದ್ದಾರೆ. ಶರಣ ಸಂತರ ಜೀವನದ ತತ್ವ ಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸುಂದರ ಬದುಕು ಸಾಗಿಸಬೇಕು ಎಂದು ಹೇಳಿದರು.

ನೇತೃತ್ವ ವಹಿಸಿದ್ದ ಯಂಕಂಚಿ ಹಿರೇಮಠದ ಅಭಿನವರುದ್ರಮುನಿ ಶಿವಾಚಾರ್ಯರು ಮಾತನಾಡಿ, ಘಂಟೇಶ್ವರರು ಪ್ರಪಂಚ ಮಾಡುತ್ತಲೇಪಾರಮಾರ್ಥಿಕವನ್ನು ಗೆದ್ದು ಈ ಸಮಾಜದಲ್ಲಿ ಒಬ್ಬ ಮೇರುಪುರುಷರಾದರು. ನಮ್ಮ ಭರತಭೂಮಿಯಲ್ಲಿ ಇಂತಹ ಅನೇಕ ಸತ್ಪುರುಷರು ಬಾಳಿ ನಮಗೆಲ್ಲ ಜ್ಞಾನದ ಬೆಳಕು ನೀಡಿದ್ದಾರೆ. ಅವರ ತತ್ವ ಸಿದ್ಧಾಂತವನ್ನು ಅರಿತು ಅನುಸರಿಸಿಕೊಂಡು ನಮ್ಮ ಜೀವನ ಸಾರ್ಥಕಗಿಳಿಸಿಕೊಳ್ಳಬೇಕು ಎಂದು ಹೇಳಿದರು.

Advertisement

ಚಿಕ್ಕರೂಗಿಯ ಈರಣ್ಣ ಶಾಸ್ತ್ರಿ, ಸಂಖದ ಪ್ರವಚನಕಾರ ಪ್ರಶಾಂತ ಮಹಾರಾಜರು, ಡಾ| ಬಿ.ಜಿ. ಮಠ, ಶಿಕ್ಷಕ ಶ್ರೀಶೈಲ ಹದಗಲ ಮಾತನಾಡಿದರು. ಸಿದ್ರಾಮಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಹುಮನಾಬಾದಿನ ಹನುಮಂತ್ರಾಯಗೌಡ ಪಾಟೀಲ, ಶಿವಪ್ಪ ಬ್ಯಾಕೋಡ, ಶಿವಶರಣಪ್ಪ ಸಾಲೋಟಗಿ, ನಿಂಗಣ್ಣ ಜೇವರ್ಗಿ, ಶಿವಶರಣಪ್ಪ ಹದಗಲ್ಲ, ಬಸಪ್ಪ ಸಜ್ಜನ, ಕೇಸುರಾಯ ಹಚ್ಚಡ, ಗುರುಲಿಂಗಪ್ಪ ಅಂಗಡಿ, ಷಣ್ಮುಖಪ್ಪ ಪೂಜಾರಿ, ಶಹಾಬುದ್ದೀನ್‌ ಶೀತನೂರ,ಭೀಮಾಶಂಕರ ದೊಡಮನಿ ಇದ್ದರು.ಸೂರ್ಯಕಾಂತ ಸಾಲೋಟಗಿ ಸ್ವಾಗತಿಸಿದರು. ವೀರೇಶ ಮಠ ನಿರೂಪಿಸಿದರು. ನಿಂಗಣ್ಣ ಜಂಬರಖಾನಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next