Advertisement

ಸಿಎಂ ಗ್ರಾಮವಾಸ್ತವ್ಯದಿಂದ ಬದಲಾಗದ ಪುರ ಗ್ರಾಮ

02:57 PM Jun 20, 2019 | Suhan S |

ತುರುವೇಕೆರೆ: ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ 2006ರಲ್ಲಿ ತಾಲೂಕಿನ ಪುರ ಗ್ರಾಮದಲ್ಲಿ 2007ರ ಮೇ 3ರಂದು ಹಿಂದುಳಿದ ವರ್ಗದ ಸಮು ದಾಯದ ಹುಚ್ಚಯ್ಯ ಅವರ ಮನೆಯಲ್ಲಿ ರಾತ್ರಿ ಭೋಜನ ಸ್ವೀಕರಿಸಿ ಆದಿ ಚುಂಚನಗಿರಿ ಸಂಸ್ಥೆಯ ಶಂಭುಲಿಂಗೇಶ್ವರ ಪ್ರೌಢಶಾಲೆಯಲ್ಲಿ ವಾಸ್ತವ್ಯ ಹೂಡಿದ್ದರು.ಬಿಜೆಪಿ ಜೊತೆಗೂಡಿ ಸಮ್ಮಿಶ್ರ ಸರ್ಕಾರ ಮಾಡಿದ್ದ ವೇಳೆ ರಾಜ್ಯದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಜನಪ್ರಿಯತೆ ಗಳಿಸಿತ್ತು. ಅದರಂತೆ ತಾಲೂಕಿ ನಲ್ಲಿ ಗ್ರಾಮವಾಸ್ತವ್ಯ ಮಾಡಿದ್ದ ಎ‍ಚ್ಡಿಕೆ ಅಂದು ನೀಡಿದ್ದ ಭರವಸೆ ಇನ್ನೂ ಈಡೇರದಿರುವುದು ಗ್ರಾಮವಾಸ್ತವ್ಯದ ಬಗ್ಗೆ ಜನರಲ್ಲಿ ನಂಬಿಕೆ ಇಲ್ಲವಾಗಿದೆ.

Advertisement

ಅಂದು ಸಿಎಂ ಆಗಮನದ ಹಿನ್ನೆಲೆಯಲ್ಲಿ ಗ್ರಾಮ ತಳಿರು ತೋರಣಗಳಿಂದ ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ಅವರು ವಾಸ್ತವ್ಯ ಹೂಡಿದ್ದ ಕಾಂಪೌಂಡ್‌ ಒಳಗೆ ಸುಮಾರು 11 ಶೌಚಗೃಹ ನಿರ್ಮಿ ಸಲಾಗಿತ್ತು. ಅವರು ಮಲಗುವ ಕೊಠಡಿಗೆ ಹೊಂದಿ ಕೊಡಂತೆ ಕಮೋಡ್‌ ಶೌಚಗೃಹ ನಿರ್ಮಿಸಲಾಗಿತ್ತು. ಈಗಲೂ ಆ ಶೌಚಗೃಹ ಸುಸ್ಥಿತಿಯಲ್ಲಿದೆ.

ಸಿಕ್ಕಿಲ್ಲ ಉದ್ಯೋಗ: ಹುಚ್ಚಯ್ಯ ಎಂಬುವವರ‌ ಮನೆ ಯಲ್ಲಿ ಸಸ್ಯಾಹಾರಿ ಮತ್ತು ಶಾಖಾಹಾರಿ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಈ ನೆನಪಿಗೋಸ್ಕರ ಹುಚ್ಚಯ್ಯ ಅವರ ಪುತ್ರ ಯೋಗಾನಂದ್‌ಗೆ ಉದ್ಯೋಗ ಕೊಡಿಸು ವುದಾಗಿ ಭರವಸೆ ನೀಡಿದ್ದರು. ಮುಖ್ಯಮಂತ್ರಿ ಕಚೇರಿ ಯಿಂದ ಶಿಫಾರಸು ಪತ್ರ ಸಹ ನೀಡಿದ್ದರೂ ಈವರೆಗೆ ಉದ್ಯೋಗ ಸಿಕ್ಕಿಲ್ಲ. ಶಿಫಾರಸು ಪತ್ರ ಹಿಡಿದು ಮುಖ್ಯ ಮಂತ್ರಿ ಕಚೇರಿಗೆ ತೋರಿಸಿದರೂ ಪ್ರಯೋಜವಾಗಿಲ್ಲ. ಅಲೆದಾಟ ತಪ್ಪಿಲ್ಲ ಎಂದು ಯೋಗಾನಂದ್‌ ಅಳಲು ತೋಡಿಕೊಳ್ಳುತ್ತಾರೆ. ಅಂದು ಪುರ ಗ್ರಾಮಕ್ಕೆ ರಸ್ತೆ, ಚರಂಡಿ, ಪುರ ಗ್ರಾಮದಿಂದ ಮಾದಿಹಳ್ಳಿಗೆ ಸಂಪರ್ಕ ರಸ್ತೆ, ಸಮುದಾಯ ಭವನ, ಶಾಲಾಭಿವೃದ್ಧಿಗೆ ಅನುದಾನ ನೀಡುವುದಾಗಿ ನೀಡಿದ್ದ ಆಶ್ವಾಸನೆ ಇಂದಿಗೂ ಈಡೇರಿಲ್ಲ.

ಅರ್ಧಕ್ಕೆ ನಿಂತ ರಸ್ತೆ ನಿರ್ಮಾಣ: ಇತಿಹಾಸ ಪ್ರಸಿದ್ಧ ಪಂಚಲಿಂಗ ದೇವಸ್ಥಾನವಿರುವ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಸಂಕ್ರಾತಿಯಲ್ಲಿ ನಡೆಯುವ ದನಗಳ ಜಾತ್ರೆ ರಾಜ್ಯದಲ್ಲೆ ಪ್ರಸಿದ್ಧಿ ಪಡೆದಿದ್ದು, ಇಲ್ಲಿಯ ರಾಸುಗಳನ್ನು ಖರೀದಿಸಲು ದೂರದ ಜಿಲ್ಲೆಗಳಿಂದ ರೈತರು ಆಗಮಿಸುತ್ತಾರೆ. ಇಲ್ಲಿಯ ರಾಸುಗಳು ಸುಮಾರು 10 ಲಕ್ಷಕ್ಕೂ ಹೆಚ್ಚಿನ ಹಣಕ್ಕೆ ವ್ಯಾಪಾರವಾಗಿ ರುವ ಉದಾಹರಣೆಗಳು ಇವೆ. ಇಂತಹ ದೇವಾ ಲಯದ ಅಭಿವೃದ್ಧಿಗೆ ಅನುದಾನ ನೀಡಿಲ್ಲ. ಸಿಎಂ ಆಗಮಿಸುವ ವೇಳೆ ಪುರ ಗ್ರಾಮದಲ್ಲಿ ಕೇವಲ 10 ಮೀಟರ್‌ ಡಾಂಬರು ರಸ್ತೆ ಮಾತ್ರ ನಿರ್ಮಿಸಲಾಗಿತ್ತು. ಸಿಎಂ ಬಂದು ತೆರಳಿದ ನಂತರ ರಸ್ತೆ ನಿರ್ಮಾಣ ಪೂರ್ತಿಗೊಳಿಸದೆ ಅರ್ಧಕ್ಕೆ ನಿಲ್ಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next