Advertisement

ಪಪ್ಪೆಟ್ಸ್‌ ಮತ್ತು ದಿ ಕ್ರಿಟಿಕ್‌ ಕಿರುಚಿತ್ರ ಪ್ರಯೋಗ

03:24 PM Jan 20, 2022 | Team Udayavani |

ಅಭಿಷೇಕ್‌ ಕಾಸರಗೋಡು ನಿರ್ದೇಶನದ “ಪಪ್ಪೆಟ್ಸ್‌’ ಹಾಗೂ ಮಂಸೋರೆ ನಿರ್ದೇಶನದ “ದಿ ಕ್ರಿಟಿಕ್‌’ ಎರಡು ಕಿರುಚಿತ್ರಗಳು ಬಿಡುಗಡೆಯಾಗಿದೆ. ಕಳೆದ ಎರಡೂವರೆ ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಛಾಯಾಗ್ರಹಕರಾಗಿ ಕಾರ್ಯ ನಿರ್ವಹಿಸುತ್ತಿರುವ ಸತ್ಯ ಹೆಗಡೆ “ಸತ್ಯಹೆಗಡೆ ಸ್ಟುಡಿಯೋಸ್‌’ ಮೂಲಕ ಈ ಎರಡೂ ಕಿರುಚಿತ್ರಗಳನ್ನು ನಿರ್ಮಿಸುವ ಮೂಲಕ ನಿರ್ಮಾಪಕರಾಗುತ್ತಿದ್ದಾರೆ.

Advertisement

ಅಭಿಷೇಕ್‌ ಕಾಸರಗೋಡು ನಿರ್ದೇಶನದ “ಪಪ್ಪೆಟ್ಸ್‌’ ಕಿರುಚಿತ್ರದಲ್ಲಿ ಗೌತಮಿ ಜಾಧವ್‌ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಟಿಯೊಬ್ಬಳು ಸೇಲ್ಸ್ ಗರ್ಲ್ ಒಬ್ಬಳಿಂದ ಪ್ರಭಾವಿತಳಾಗುವ ಪಾತ್ರದಲ್ಲಿ ಗೌತಮಿ ಕಾಣಿಸಿಕೊಂಡಿದ್ದಾರೆ. “ಪಪ್ಪೆಟ್ಸ್‌’ ಮಿಥುನ್‌ ಮುಕುಂದನ್‌ ಸಂಗೀತ ನೀಡಿದ್ದಾರೆ. ಈ ಕಿರುಚಿತ್ರವನ್ನು ನೋಡಿದ್ದ ಮೆಚ್ಚುಗೆ ವ್ಯಕ್ತಪಡಿಸಿದ್ದ ಪುನೀತ್‌ ರಾಜಕುಮಾರ್‌, ಪೋಸ್ಟರ್‌ ಮೇಲೆ ಸಹಿ ಮಾಡಿ ಕೊಟ್ಟಿದ್ದಾರೆ.

ಇನ್ನು ಮಂಸೋರೆ ನಿರ್ದೇಶನದಲ್ಲಿ ಮೂಡಿಬಂದಿರುವ “ದಿ ಕ್ರಿಟಿಕ್‌’ ಕಿರುಚಿತ್ರದಲ್ಲಿ ನಿರ್ದೇಶಕ ಮತ್ತು ನಟ ಟಿ. ಎಸ್‌ ನಾಗಾಭರಣ ಹಾಗೂ ವೈ.ಜಿ ಉಮಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಬಶೀರ್‌ ಅವರ ಕಥೆಯನ್ನು ಇಟ್ಟುಕೊಂಡು ಕಳೆದ ಲಾಕ್‌ಡೌನ್‌ ಸಮಯದಲ್ಲಿ ಈ ಕಿರುಚಿತ್ರ ಮಾಡಲಾಗಿದೆ. ಕಿರುಚಿತ್ರಕ್ಕೆ ಬಕೇಶ್‌ ಸಂಗೀತ, ಗುರುಪ್ರಸಾದ್‌ ಛಾಯಾಗ್ರಹಣ, ಶ್ರೀನಿವಾಸ್‌ ಸಂಕಲನವಿದೆ. “ಸಂಚಾರಿ ವಿಜಯ್‌ ಸಾವಿನಿಂದ ಡಿಪ್ರಶನ್‌ಗೆ ಹೋಗಿದ್ದ ನನಗೆ, ಸತ್ಯ ಹೆಗಡೆ ಕಿರುಚಿತ್ರ ಮಾಡಲು ಪ್ರೇರೇಪಿಸಿದರು. ನಂತರ ಚಿತ್ರೀಕರಣಕ್ಕೆ ಮುಂದಾದೆ’ ಎನ್ನುವುದು ಕಿರುಚಿತ್ರದ ಬಗ್ಗೆ ಮಂಸೋರೆ ಮಾತು.

ಇದನ್ನೂ ಓದಿ:ವರ್ಷದ ಏಕದಿನ ತಂಡ ಪ್ರಕಟಿಸಿದ ಐಸಿಸಿ: ಭಾರತೀಯರಿಗೆ ಸ್ಥಾನವಿಲ್ಲ! ಬಾಬರ್ ಗೆ ನಾಯಕತ್ವ

ಹಿರಿಯ ನಿರ್ದೇಶಕ ಟಿ. ಎಸ್‌ ನಾಗಾಭರಣ, ನಾಗತಿಹಳ್ಳಿ ಚಂದ್ರಶೇಖರ್‌, ನಾಗಶೇಖರ್‌, ನಟ ಶ್ರೀನಗರ ಕಿಟ್ಟಿ ಮೊದಲಾದವರು “ಪಪ್ಪೆಟ್ಸ್‌’ ಹಾಗೂ “ದಿ ಕ್ರಿಟಿಕ್‌’ ಕಿರುಚಿತ್ರವನ್ನು ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

Advertisement

ಇನ್ನು ಪ್ರತಿಭಾವಂತ ಹೊಸ ತಂಡಕ್ಕೆ ವೇದಿಕೆ ಕಲ್ಪಿಸಿಕೊಡುವ ಉದ್ದೇಶದಿಂದ ನಮ್ಮ “ಸತ್ಯ ಸ್ಟುಡಿಯೋಸ್‌’ ಮೂಲಕ ಮೂಲಕ ಕಿರುಚಿತ್ರ ನಿರ್ಮಾಣ ಮಾಡಲು ಮುಂದಾಗಿದ್ದೇವೆ. ಆಸಕ್ತಿಯಿರುವವರು ನಮ್ಮನ್ನು ಸಂಪರ್ಕಿಸಬಹುದು. ಪ್ರತಿ ತಿಂಗಳ ಎರಡನೇ ಭಾನುವಾರ ಒಂದು ಕಿರುಚಿತ್ರ ಪ್ರದರ್ಶನ ಮಾಡುವ ಯೋಜನೆ ಇದೆ’ ಎಂದಿದ್ದಾರೆ ಛಾಯಾಗ್ರಹ ಮತ್ತು ನಿರ್ಮಾಪಕ ಸತ್ಯ ಹೆಗಡೆ.

Advertisement

Udayavani is now on Telegram. Click here to join our channel and stay updated with the latest news.

Next