Advertisement

ಸಾಮೂಹಿಕ ವಿವಾಹ, ಸಾಧಕರಿಗೆ ಪ್ರಶಸ್ತಿ ಪ್ರದಾನ

06:10 AM Feb 11, 2019 | Team Udayavani |

ಪುಂಜಾಲಕಟ್ಟೆ: ಕಳೆದ 34 ವರ್ಷಗಳಿಂದ ವಿವಿಧ ಸಾಮಾಜಿಕ, ಆರೋಗ್ಯ, ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಗೈಯುತ್ತಿರುವ ಪುಂಜಾಲಕಟ್ಟೆಯ ಸ್ವಸ್ತಿಕ್‌ ಫ್ರೆಂಡ್ಸ್‌ ಕ್ಲಬ್‌ನ 35ನೇ ಸಂಭ್ರಮಾಚರಣೆ ಪ್ರಯುಕ್ತ 11ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ರವಿವಾರ ಇಲ್ಲಿನ ಬಂಗ್ಲೆ ಮೈದಾನದಲ್ಲಿ ಜರಗಿತು.

Advertisement

ಬೆಳಗ್ಗೆ ಪುಂಜಾಲಕಟ್ಟೆ ಬಸವನಗುಡಿ ಶ್ರೀ ಬಸವೇಶ್ವರ ದೇವಾಲಯದಲ್ಲಿ ಮುಂಬಯಿ ಉದ್ಯಮಿ, ಚೆನ್ನೈತ್ತೋಡಿ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಕಾಪು ಜಯರಾಮ ಶೆಟ್ಟಿ ಅವರು ದಿಬ್ಬಣವನ್ನು ಉದ್ಘಾಟಿಸಿದರು. ಪ್ರಮುಖರಾದ ರವೀಂದ್ರ ಬಾಳಿಗ, ಲಕ್ಷ್ಮೀನಾರಾಯಣ ಉಡುಪ, ಲೋಕೇಶ್‌ ಆಚಾರ್ಯ, ಪ್ರಕಾಶ್‌ ಅಂಚನ್‌, ಹೇಮಂತ್‌ ಕುಮಾರ್‌, ಉದಯ ಕುಮಾರ್‌ ಕಟ್ಟೆಮನೆ, ವಿಜಯ ರೈ ಮತ್ತಿತರರಿದ್ದರು.

ಮದುವೆ ಮಂಟಪದವರೆಗೆ ವಧು- ವರರ ದಿಬ್ಬಣವು ವಿವಿಧ ಸ್ತಬ್ಧಚಿತ್ರ, ಕಲಾ ತಂಡಗಳು, ಶಿಲ್ಪಾ ಗೊಂಬೆ ಬಳಗ, ಬ್ಯಾಂಡ್‌ , ಕೇರಳ ಚೆಂಡೆಗಳ ಆಕರ್ಷಣೆಯೊಂದಿಗೆ ಬಂಗ್ಲೆ ಮೈದಾನಕ್ಕೆ ಸಾಗಿ ಬಂತು. ಸಭಾಂಗಣ ದಲ್ಲಿ ವಧು-ವರರನ್ನು ಸಾಂಪ್ರಾದಾಯಿಕವಾಗಿ ಎದುರುಗೊಳ್ಳಲಾಯಿತು.

ಗುರುವಾಯನಕೆರೆ ಕೃಷ್ಣ ಭಟ್ ಅವರ ಪೌರೋಹಿತ್ಯದಲ್ಲಿ , ಮಧ್ಯಾಹ್ನ 12.18ರ ಮುಹೂರ್ತದಲ್ಲಿ 13 ಜೋಡಿ ವಧು-ವರರಿಗೆ ಸಾಮೂಹಿಕ ವಿವಾಹ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ವಿವಿಧ ಸಾಧಕರಿಗೆ ಸ್ವಸ್ತಿ ಸಿರಿ ರಾಜ್ಯ ಪ್ರಶಸ್ತಿ ಪ್ರದಾನ ಮತ್ತು ಸ್ವಸ್ತಿಕ್‌ ಸಂಭ್ರಮ ಪುರಸ್ಕಾರ ಪ್ರದಾನ ಮಾಡಲಾಯಿತು. ಬದಿಯಡ್ಕ ಉದ್ಯಮಿ ವಸಂತ ಪೈಅವರು ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪಾಡಿಗುತ್ತು ಅಧ್ಯಕ್ಷತೆ ವಹಿಸಿದ್ದರು. ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ಪ್ರಶಸ್ತಿ ಪ್ರದಾನ ಮಾಡಿದರು.

ವಿಧಾನ ಪರಿಷತ್‌ ವಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ, ಕ್ಲಬ್‌ನ ಸ್ಥಾಪಕಾಧ್ಯಕ್ಷ ಎಂ. ತುಂಗಪ್ಪ ಬಂಗೇರ, ಕ್ಲಬ್‌ ಅಧ್ಯಕ್ಷ ಪ್ರಶಾಂತ್‌ ಪುಂಜಾಲಕಟ್ಟೆ, ತಹಶೀಲ್ದಾರ್‌ ಪುರಂದರ ಹೆಗ್ಡೆ, ಬೆಂಗಳೂರು ನ್ಯಾಯವಾದಿ ಸ್ವರ್ಣಲತಾ ಹೆಗ್ಡೆ, ಉದ್ಯಮಿಗಳಾದ ನಿತ್ಯಾನಂದ ಪೂಜಾರಿ ಕೆಂತಲೆ, ವಸಂತ ಹೆಗ್ಡೆ ಬೆಂಗಳೂರು, ಮೋಹನ್‌ ಚೌಧುರಿ, ಓಂ ಪ್ರಸಾದ್‌, ಹರೀಂದ್ರ ಪೈ, ಪಿಲಾತಬೆಟ್ಟು ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಗುತ್ತಿಗೆದಾರ ರವಿ ಕಕ್ಯಪದವು, ಬೆಸೆಂಟ್ ಕಾಲೇಜು ಗ್ರಂಥಪಾಲಕ ಲೋಕರಾಜ ವಿಟ್ಲ, ಪಿಲಾತಬೆಟ್ಟು ವ್ಯ.ಸೇ.ಸ. ಸಂಘದ ಉಪಾಧ್ಯಕ್ಷ ಉಮೇಶ್‌ ಪೂಜಾರಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಂಜಪ್ಪ ಮೂಲ್ಯ, ತಾ.ಪಂ. ಸದಸ್ಯರಾದ ಪ್ರಭಾಕರ ಪ್ರಭು, ರಮೇಶ್‌ ಕುಡ್ಮೇರ್‌, ಟಿ.ವಿ. ನಿರೂಪಕ ದಯಾನಂದ ಕತ್ತಲ್‌ಸಾರ್‌, ತು.ರ.ವೇ. ಸ್ಥಾಪಕಾಧ್ಯಕ್ಷ ಯೋಗೀಶ್‌ ಶೆಟ್ಟಿ ಜಪ್ಪು, ಎಲ್ಲೈಸಿ ಅಧಿಕಾರಿ ವೆಂಕಪ್ಪ, ಎಂಜಿನಿಯರ್‌ ಸಂದೀಪ್‌ ಆಚಾರ್ಯ, ಸ್ವರ್ಣೋದ್ಯಮಿ ಕೆ. ಲೋಕೇಶ್‌ ಆಚಾರ್ಯ, ವಾಮದಪದವು ವ್ಯ.ಸೇ.ಸ. ಸಂಘದ ಅಧ್ಯಕ್ಷ ಯಶೋಧರ ಶೆಟ್ಟಿ ದಂಡೆ, ಸ್ವಸ್ತಿಕ್‌ ಫ್ರೆಂಡ್ಸ್‌ ಗೌರವಾಧ್ಯಕ್ಷ ಅಬ್ದುಲ್ಲಾ ಪಿ., ಪದಾಧಿಕಾರಿಗಳಾದ ಪಿ.ಎಂ. ಪ್ರಭಾಕರ, ರಾಜೇಶ್‌ ಪಿ. ಬಂಗೇರ, ಅಬ್ದುಲ್‌ ಹಮೀದ್‌, ರತ್ನಾಕರ ಪಿ.ಎಂ., ಮಾಧವ ಬಂಗೇರ, ಗುರಿಕಾರ ಗಿರೀಶ್‌ ಸಾಲ್ಯಾನ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

ಅಪರಾಹ್ನ ಕ್ಲಬ್‌ ವತಿಯಿಂದ ದ್ವಿತೀಯ ವರ್ಷದ ಶಿಶಿರ್‌ ಕುಮಾರ್‌ ಸ್ಮೃತಿ ಕಾರ್ಯಕ್ರಮ, ಹಾಲಾಡಿ ಮತ್ತು ಪೆರ್ಡೂರು ಮೇಳದ ಆಯ್ದ ಕಲಾವಿದರಿಂದ ಮಧುರಾ-ಮಹೇಂದ್ರ ಯಕ್ಷಗಾನ, ವೈಷ್ಣವಿ ಕಲಾವಿದೆರ್‌ ಕೊಯಿಲ ಇವರಿಂದ ಕುಸಾಲ್ದ ಗೌಜಿ ಹಾಸ್ಯ ಪ್ರದರ್ಶನ ನಡೆಯಿತು.

ಪ್ರಶಸ್ತಿ ಪುರಸ್ಕೃತರು
ಸ್ವಸ್ತಿ ಸಿರಿ ರಾಜ್ಯ ಪ್ರಶಸಿ್ತ: ಶ್ರೀನಿವಾಸ ಪಿ. ಸಾಫಲ್ಯ, ಮುಂಬಯಿ (ಸಮಾಜಸೇವೆ), ಸುಂದರ ಹೆಗ್ಡೆ (ಚಲನಚಿತ್ರ), ಅಶೋಕ್‌ ಚೂಂತಾರು (ಕೃಷಿ), ಸದಾಶಿವ ಆಚಾರ್ಯ (ಉದ್ಯಮ), ಕಲಾಕುಂಭ ಸಾಂಸ್ಕೃತಿಕ ವೇದಿಕೆ, ಕುಳಾಯಿ (ಸಂಘಟನೆ).

ಸ್ವಸ್ತಿಕ್‌ ಸಂಭ್ರಮ ಪುರಸ್ಕಾರ ಪ್ರಶಸ್ತಿ:
ರವಿ ರೈ ಕಳಸ (ಚಲನಚಿತ್ರ), ಹೊನ್ನಪ್ಪ ಪೂಜಾರಿ (ಸಂಘಟನೆ), ಡಾ| ರಾಮಕೃಷ್ಣ ಎಸ್‌. (ಸಮಾಜ ಸೇವೆ), ಎಸ್‌.ಪಿ. ಸರಪಾಡಿ (ಕಲೆ), ಕು| ಅನ್ವಿಷಾ ವಾಮಂಜೂರು (ಸಾಂಸ್ಕೃತಿಕ), ಕಾವ್ಯಶ್ರೀ ಜೋಡುಕಲ್ಲು (ಯೋಗ), ಪುರಂದರ ಹೆಗ್ಡೆ (ಸರಕಾರಿ ಸೇವೆ), ಸಚಿನ್‌ ಅತ್ತಾಜೆ (ಕಲೆ) ರಾಮ ಪಿ. ಸಾಲ್ಯಾನ್‌ (ಶಿಕ್ಷಣ).

Advertisement

Udayavani is now on Telegram. Click here to join our channel and stay updated with the latest news.

Next