Advertisement

ನ್ಯಾಯಾಧೀಶರಂತೆ ಪೋಸ್ ಕೊಟ್ಟು ಉದ್ಯೋಗ ಕೊಡುವ ಭರವಸೆ; ಲಕ್ಷ ಲಕ್ಷ ಲೂಟಿ; ಪೊಲೀಸ್‌, ಪತ್ನಿ ಬಂಧನ

08:50 AM Jan 10, 2023 | Team Udayavani |

ಚಂಡಿಗಢ: ನ್ಯಾಯಾಧೀಶರಂತೆ ಪೋಸ್‌ ಕೊಟ್ಟು ಯುವಕರಿಗೆ ಉದ್ಯೋಗ ಹುಡುಕಿ ಕೊಡುತ್ತೇವೆ ಎಂದು ಸುಳ್ಳು ಹೇಳಿ ಹಣ ಪಡೆದು ವಂಚಿಸುತ್ತಿದ್ದ ಪೊಲೀಸ್‌ ಅಧಿಕಾರಿ ಹಾಗೂ ಅವರ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಮಾನಸಾ ಜೈಲಿನಲ್ಲಿ ಉಪ ಅಧೀಕ್ಷಕರಾಗಿದ್ದ ನರಪಿಂದರ್ ಸಿಂಗ್ (41), ಪತ್ನಿ ದೀಪ್‌ ಕಿರಣ್‌ (35) ಇಬ್ಬರೂ ಲೂಧಿಯಾನ ನಿವಾಸಿಗಳು. ಬಂಧಿತರಿಂದ ನಾಮಫಲಕವುಳ್ಳ ಮೂರು ಪೊಲೀಸ್ ಸಮವಸ್ತ್ರ‌, ನಾಮಫಲಕವುಳ್ಳ ಮಹಿಳಾ ಕಾನ್ಸ್‌ ಸ್ಟೇಬಲ್‌ ಸಮವಸ್ತ್ರ,10 ಖಾಲಿ ಪೊಲೀಸ್ ನೇಮಕಾತಿ ಅರ್ಜಿಗಳು,  1 ಲಕ್ಷ ರೂ. ನಗದು, ಚಿನ್ನದ ಸರ,ಚಿನ್ನದ ಉಂಗುರ ಮತ್ತು ಎರಡು ಕಾರುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಪೊಲೀಸ್‌ ಅಧಿಕಾರಿಯಾಗಿದ್ದ ನರಪಿಂದರ್ ಸಿಂಗ್ ಮತ್ತು ಪತ್ನಿ ದೀಪ್‌ ಕಿರಣ್‌ ಇಬ್ಬರು ನ್ಯಾಯಾಧೀಶರಂತೆ ಪೋಸ್‌ ಕೊಟ್ಟು ಉದ್ಯೋಗವಿಲ್ಲದವರಿಗೆ ಉದ್ಯೋಗ ನೀಡುತ್ತೇವೆ. ಪೊಲೀಸ್‌ ಇಲಾಖೆಯಲ್ಲಿ ಉದ್ಯೋಗ ನೀಡುವ ಭರವಸೆಯನ್ನು ಕೊಟ್ಟು, ಯುವಜನರಿಂದ ಹಣ ಪಡೆಯುತ್ತಿದ್ದರು. ಒಂದೊಂದು ಪ್ರಕರಣಕ್ಕೆ 8-10 ಲಕ್ಷ ರೂ.ಪಡೆಯುತ್ತಿದ್ದರು. ಉದ್ಯೋಗ ನೀಡುವ ಭರವವಸೆ ಕೊಟ್ಟು, ಉದ್ಯೋಗ ಅಕಾಂಕ್ಷಿಗಳಿಗೆ ವಂಚನೆ ಮಾಡುತ್ತಿದ್ದರು ಎಂದು ಲೂಧಿಯಾನ ಪೊಲೀಸ್ ಕಮಿಷನರ್ ಮನದೀಪ್ ಸಿಂಗ್ ಸಿಧು ಹೇಳಿದ್ದಾರೆ.

ಈ ಬಗ್ಗೆ ಮೋತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬಳಿಕ, ತನಿಖೆ ನಡೆಸಿ ಇಬ್ಬರನ್ನು ಬಂಧಿಲಾಗಿದೆ. ಈ ಪ್ರಕರಣದಲ್ಲಿ ಸಾಥ್‌ ಕೊಟ್ಟ ಇಬ್ಬರು ಸಹಚರರಾದ ಲಖ್ವಿಂದರ್ ಸಿಂಗ್ ಮತ್ತು ಸುಖದೇವ್ ಸಿಂಗ್ ತಲೆಮರೆಸಿಕೊಂಡಿದ್ದು, ಅವರನ್ನು ಹಿಡಿಯಲು ಪೊಲೀಸ್ ತಂಡಗಳು ದಾಳಿ ನಡೆಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next