Advertisement

ಪಂಜಾಬ್–ರಾಜಸ್ಥಾನ್ ಮುಖಾಮುಖಿ: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಸ್ಮಿತ್ ಪಡೆ

07:14 PM Sep 27, 2020 | Mithun PG |

ಶಾರ್ಜಾ: ಐಪಿಎಲ್ 13ನೇ ಆವೃತ್ತಿಯ 9ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮುಖಾಮುಖಿಯಾಗುತ್ತಿದ್ದು ಟಾಸ್ ಗೆದ್ದು ಸ್ಟೀವನ್ ಸ್ಮಿತ್  ಬೌಲಿಂಗ್ ಆಯ್ದುಕೊಂಡಿದ್ದಾರೆ.

Advertisement

ಇತ್ತಂಡಗಳೂ ಈವರೆಗೂ 19 ಬಾರಿ ಮುಖಾಮುಖಿಯಾಗಿದ್ದು 10ರಲ್ಲಿ ರಾಜಸ್ಥಾನ ರಾಯಲ್ಸ್ ಗೆಲುವಿನ ನಗೆ ಬೀರಿದೆ. 9 ಪಂದ್ಯಗಳಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಜಯಿಸುವ ಮೂಲಕ ಸಮಬಲದ ಹೋರಾಟ ನೀಡಿದೆ.

ಇಂದಿನ ಮ್ಯಾಚ್ ಸಾಕಷ್ಟು ಕುತೂಹಲ ಕೆರಳಿಸಿದ್ದು, ರಾಜಸ್ಥಾನ ತಂಡಕ್ಕಿದ್ದು ಎರಡನೇ ಪಂದ್ಯ. ಮೊದಲ ಪಂದ್ಯವನ್ನು ಚೆನ್ನೈ ವಿರುದ್ಧ ಭರ್ಜರಿ ಬ್ಯಾಟಿಂಗ್ ಮೂಲಕ ಜಯಗಳಿಸಿತ್ತು. ಜಾಸ್ ಬಟ್ಲರ್ ತಂಡಕ್ಕೆ ವಾಪಾಸ್ಸಾಗಿದ್ದು ಸಹಜವಾಗಿಯೇ ಉತ್ಸಾಹ ಹೆಚ್ಚಿದೆ.

ಮತ್ತೊಂದೆಡೆ ಮೊದಲ ಪಂದ್ಯವನ್ನು ಸೋತು, ಎರಡನೇ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಅಬ್ಬರಿಸಿರುವ ಪಂಜಾಬ್ ಕೂಡ ಬಲಿಷ್ಟವಾಗಿದೆ. ಕೆ.ಎಲ್ ರಾಹುಲ್ ಅಮೋಘ ಫಾರ್ಮ್ ನಲ್ಲಿದ್ದು, ಮ್ಯಾಕ್ಸ್ ವೆಲ್ ಕೂಡ ಸಿಡಿದೇಳುವ ತವಕದಲ್ಲಿದ್ದಾರೆ. ಪಂಜಾಬ್ ಬೌಲಿಂಗ್ ಕೂಡ ಹರಿತವಾಗಿದ್ದು, ಇಂದಿನ ಸೆಣೆಸಾಟ ಕೂತೂಹಲ ಕೆರಳಿಸಿದೆ.

ಆಡುವ ಹನ್ನೊಂದರ ಬಳಗ

Advertisement

ರಾಜಸ್ಥಾನ್ ರಾಯಲ್ಸ್: ಜೋಸ್ ಬಟ್ಲರ್, ಸ್ಟೀವನ್ ಸ್ಮಿತ್ (ನಾಯಕ), ಸಂಜು ಸ್ಯಾಮ್ಸನ್, ರಾಬಿನ್ ಉತ್ತಪ್ಪ, ರಾಹುಲ್ ತೆವಾಟಿಯಾ, ರಿಯಾನ್ ಪರಾಗ್, ಟಾಮ್ ಕರ್ರನ್, ಜೋಫ್ರಾ ಆರ್ಚರ್, ಶ್ರೇಯಾಸ್ ಗೋಪಾಲ್, ಜಯದೇವ್ ಉನಾದ್ಕಟ್, ಅಂಕಿತ್ ರಾಜ್‌ಪೂತ್

ಕಿಂಗ್ಸ್ ಇಲೆವೆನ್ ಪಂಜಾಬ್ : ಮಾಯಾಂಕ್ ಅಗರ್ವಾಲ್, ಲೋಕೇಶ್ ರಾಹುಲ್ (ನಾಯಕ), ನಿಕೋಲಸ್ ಪೂರನ್, ಗ್ಲೆನ್ ಮ್ಯಾಕ್ಸ್ ವೆಲ್, ಕರುಣ್ ನಾಯರ್, ಸರ್ಫರಾಜ್ ಖಾನ್, ಜೇಮ್ಸ್ ನೀಶಮ್, ಮುರುಗನ್ ಅಶ್ವಿನ್, ರವಿ ಬಿಸ್ನೋಯ್, ಮೊಹಮ್ಮದ್ ಶಮಿ, ಶೆಲ್ಡನ್ ಕಾಟ್ರೆಲ್

Advertisement

Udayavani is now on Telegram. Click here to join our channel and stay updated with the latest news.

Next