Advertisement

Video call;ಪಂಜಾಬ್ ಸಚಿವ ಯುವತಿಗೆ ಖಾಸಗಿ ಅಂಗ ತೋರಿದ ವಿಡಿಯೋ ವೈರಲ್!

08:18 PM May 27, 2024 | Team Udayavani |

ಅಮೃತಸರ: ಪಂಜಾಬ್‌ನ ಆಮ್ ಆದ್ಮಿ ಪಕ್ಷದ (AAP) ಸಚಿವ ಬಾಲ್ಕರ್ ಸಿಂಗ್ ಅವರ ಆಕ್ಷೇಪಾರ್ಹ ವಿಡಿಯೋವನ್ನು ಸೋಮವಾರ ಹಲವಾರು ಬಿಜೆಪಿ ನಾಯಕರು ಹಂಚಿಕೊಂಡಿದ್ದಾರೆ. ವಿಡಿಯೋ ದಲ್ಲಿ ಸಚಿವ ಬಾಲ್ಕರ್ ಸಿಂಗ್ ಖಾಸಗಿ ಅಂಗಗಳನ್ನು 21 ವರ್ಷದ ಯುವತಿಗೆ ತೋರಿಸಿದ್ದಾರೆ ಎಂದು ಆರೋಪಿಸಲಾಗಿದೆ.

Advertisement

ಉದ್ಯೋಗಕ್ಕಾಗಿ ಸಚಿವರನ್ನು ಸಂಪರ್ಕಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ, ಈ ವಿಡಿಯೋ ಕುರಿತು ನನಗೇನೂ ಗೊತ್ತಿಲ್ಲ. ನಾನು ಹೆಚ್ಚೇನೂ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಸಚಿವ ಬಾಲ್ಕರ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ವಿಡಿಯೋ ಕರೆಯಲ್ಲಿ ಯುವತಿಯನ್ನು ವಿವಸ್ತ್ರವಾಗುವಂತೆ ಸಚಿವರು ಒತ್ತಾಯಿಸಿ, ಖಾಸಗಿ ಅಂಗಗಳನ್ನು ತೋರಿಸಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ಆರೋಪಗಳ ಬೆನ್ನಲ್ಲೇ ರಾಷ್ಟ್ರೀಯ ಮಹಿಳಾ ಆಯೋಗ (NCW) ತನಿಖೆ ಮಾಡಿ ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಪಂಜಾಬ್ ಪೊಲೀಸರಿಗೆ ಸೂಚಿಸಿದೆ.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಾಯಕ ತೇಜಿಂದರ್ ಸಿಂಗ್ ಬಗ್ಗಾ,  ಬ್ಲರ್ ಮಾಡಿದ ಫೋಟೋ ತೋರಿಸಿದ್ದಾರೆ. ವಿಡಿಯೋವನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next