Advertisement
ಪಂಜಾಬ್ ಕಿಂಗ್ಸ್ ತಂಡವನ್ನು ಅವರದೇ ಮೊಹಾಲಿ ಅಂಗಳದಲ್ಲಿ ಎದುರಿಸಬೇಕಿದೆ. ಮುಂಬಯಿಯಲ್ಲಿ ಅನುಭವಿಸಿದ 13 ರನ್ ಸೋಲಿಗೆ ಸೇಡು ತೀರಿಸಿಕೊಳ್ಳಬೇಕಾದ ಒತ್ತಡ ರೋಹಿತ್ ಪಡೆಯ ಮೇಲಿದೆ.
Related Articles
ರಾಜಸ್ಥಾನ್ ಎದುರಿನ ತವರಿನ ಪಂದ್ಯದಲ್ಲಿ ಮುಂಬೈ ತಂಡದ ಬೌಲಿಂಗ್ ದೌರ್ಬಲ್ಯ ಎದ್ದು ಕಂಡಿತ್ತು. ಈ ಸಮಸ್ಯೆಯನ್ನು ಬ್ಯಾಟಿಂಗ್ ಮೂಲಕ ಹೋಗಲಾಡಿಸಿಕೊಂಡಿತು. ಆದರೆ ನಾಯಕ ರೋಹಿತ್ ಶರ್ಮ (3) ವಿಫಲರಾಗಿದ್ದರು. ಇಶಾನ್ ಕಿಶನ್ ಸಾಮಾನ್ಯ ಪ್ರದರ್ಶನ ನೀಡಿದ್ದರು. ಗ್ರೀನ್, ಸೂರ್ಯಕುಮಾರ್, ತಿಲಕ್ ವರ್ಮ, ಕೊನೆಯಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಸಿಂಗಾಪುರ ಮೂಲದ ಆಸೀಸ್ ಆಟಗಾರ ಟಿಮ್ ಡೇವಿಡ್ ಸಾಹಸದಿಂದ ಮುಂಬೈಗೆ ಗೆಲುವು ಒಲಿದಿತ್ತು. ಪಂಜಾಬ್ ವಿರುದ್ಧವೂ ಮುಂಬೈ ಇಂಥದೇ ಬ್ಯಾಟಿಂಗ್ ಪ್ರದರ್ಶನ ನೀಡಬೇಕಿದೆ. ಹಾಗೆಯೇ ಮುಂಬೈ ಬೌಲಿಂಗ್ ಘಾತಕವಾಗಿ ಪರಿಣಮಿಸುವ ಅಗತ್ಯ ಹೆಚ್ಚಿದೆ.
Advertisement
ಇತ್ತಂಡಗಳ ನಡುವಿನ ಮೊದಲ ಪಂದ್ಯ ಕೂಡ ಇನ್ನೂರರಾಚೆಯ ಹೋರಾಟವಾಗಿತ್ತು. ಪಂಜಾಬ್ 8 ವಿಕೆಟಿಗೆ 214 ರನ್ ಪೇರಿಸಿದರೆ, ಮುಂಬೈ 6 ವಿಕೆಟಿಗೆ 201 ರನ್ ಮಾಡಿ ಸೋಲು ಕಂಡಿತ್ತು.
ಮುಂಬೈಯಂತೆ ಪಂಜಾಬ್ ಕೂಡ ಅನಿಶ್ಚಿತ ಫಲಿತಾಂಶ ದಾಖಲಿಸುವ ತಂಡ. ಚೆನ್ನೈ ವಿರುದ್ಧ 200 ರನ್ ಚೇಸ್ ಮಾಡುವಾಗ ಪ್ರಭ್‌ಸಿಮ್ರಾನ್-ಶಿಖರ್ ಧವನ್‌ಉತ್ತಮ ಅಡಿಪಾಯ ನಿರ್ಮಿಸಿದ್ದರು. ಅಥರ್ವ ಟೈಡೆ, ಲಿವಿಂಗ್‌ಸ್ಟೋನ್, ಸ್ಯಾಮ್ ಕರನ್, ಸಿಕಂದರ್ ರಝ, ಜಿತೇಶ್ ಶರ್ಮ ಅವರಿಂದ ಬ್ಯಾಟಿಂಗ್ ಸರದಿ ಬೆಳೆಯುತ್ತದೆ.
ಬೌಲಿಂಗ್ ವಿಭಾಗದಲ್ಲಿ ಅರ್ಷ ದೀಪ್, ಕರನ್, ಚಹರ್ ಅವರನ್ನು ಹೆಚ್ಚು ನಂಬಿಕೊಂಡಿದೆ. ರಬಾಡ ಕ್ಲಿಕ್ ಆದರೆ ಪಂಜಾಬ್ ಬೌಲಿಂಗ್ ಸಮಸ್ಯೆ ಬಹುತೇಕ ಪರಿಹಾರಗೊಳ್ಳಲಿದೆ.