Advertisement

ತಿಂಡಿ ತಡವಾಗಿದ್ದಕ್ಕೆ ಮಾವನಿಂದಲೇ ಸೊಸೆಗೆ ಗುಂಡೇಟು

10:02 AM Jan 04, 2020 | Hari Prasad |

ಫ‌ರೀದ್‌ಕೋಟ್‌: ಸೊಸೆ ತಣ್ಣಗಾಗಿದ್ದ ಉಪಾಹಾರ ನೀಡಿದಳೆಂದು ಮಾವ ಆಕೆಯನ್ನು ಗುಂಡಿಕ್ಕಿ ಕೊಂದ ಘಟನೆ ಪಂಜಾಬ್‌ನಲ್ಲಿ ನಡೆದಿದೆ. ಮಹಿಳೆ ನೀಲಂ ಕುಮಾರಿ ಬೆಳಗ್ಗೆ ಮನೆಗೆಲಸದಲ್ಲಿ ನಿರತವಾಗಿದ್ದರಿಂದ ಉಪಾಹಾರ ನೀಡುವುದು ತಡವಾಗಿದೆ, ಇದರಿಂದ ಕುಪಿತರಾಗಿ ಆಕೆಯ ಮಾವ ಶಾಮ್‌ ಲಾಲ್‌ ತಮ್ಮ 12-ಬೋರ್‌ ರಿವಾಲ್ವರ್‌ನಿಂದ ಗುಂಡು ಹಾರಿಸಿದ್ದಾರೆ.

Advertisement

ಸೊಸೆ ನೀಲಂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಶಾಮ್‌ ಲಾಲ್‌ ಅವರು ವಾಯುಪಡೆಯ ಮಾಜಿ ಸಿಬ್ಬಂದಿಯಾಗಿದ್ದು, ಘಟನೆ ಬಳಿಕ ಅವರು ತಲೆಮರೆಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next