Advertisement
1912ರ ಜೂ.1ರಂದು ಉಗಿ ಎಂಜಿನ್ ಮೂಲಕ ಪ್ರಥಮ ಬಾರಿಗೆ ಮುಂಬಯಿಯಿಂದ ಪೇಶಾವರ (ಈಗ ಪಾಕಿಸ್ತಾನದಲ್ಲಿದೆ) ನಡುವೆ ಸೇವೆಯನ್ನು ಪ್ರಾರಂಭಿಸಿದ ಪಂಜಾಬ್ ಮೇಲ್ ರೈಲನ್ನು ಆಗ ಪಂಜಾಬ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು. ಆರಂಭದಲ್ಲಿ ಕೇವಲ ಪ್ರಾಥಮಿಕ ಶ್ರೇಣಿಯ ಸೇವೆಯನ್ನು ನೀಡುತ್ತಿದ್ದ ಈ ರೈಲು ಶೀಘ್ರದಲ್ಲೇ ದ್ವಿತೀಯ ದರ್ಜೆಯ ಸೇವೆಯನ್ನು ನೀಡಲು ಆರಂಭಿಸಿತು. 1930ರ ದಶಕದ ಮಧ್ಯಭಾಗದಲ್ಲಿ ಪಂಜಾಬ್ ಮೇಲ್‌ನಲ್ಲಿ ತೃತೀಯ ದರ್ಜೆಯ ಬೋಗಿಗಳು ಕಾಣಲು ಪ್ರಾರಂಭಿಸಿದವು. 1945ರಲ್ಲಿ ಇದು ಹವಾನಿಯಂತ್ರಿತ ಬೋಗಿಯನ್ನು ಪಡೆದುಕೊಂಡಿತು.
ಬ್ರಿಟಿಷರ ಕಾಲದಲ್ಲಿ ಪಂಜಾಬ್ ಮೇಲ್ ರೈಲು ಆರು ಬೋಗಿಗಳನ್ನು ಒಳಗೊಂಡಿತ್ತು. ಈ ಪೈಕಿ ಮೂರು ಬೋಗಿಗಳನ್ನು ಪ್ರಯಾಣಿಕರಿಗೆ ಹಾಗೂ ಇತರ ಮೂರು ಬೋಗಿಗಳನ್ನು ಅಂಚೆ ಸರಕು ಮತ್ತು ಮೇಲ್‌ಗಳಿಗೆ ಮೀಸಲಿರಿಸಲಾಗಿತ್ತು. ಮೂರು ಪ್ರಯಾಣಿಕ ಬೋಗಿಗಳು ಕೇವಲ 96 ವ್ಯಕ್ತಿಗಳ ಸಾಮರ್ಥ್ಯವನ್ನು ಹೊಂದಿದ್ದವು ಎಂದು ರೈಲ್ವೇ ಅಧಿಕಾರಿ ಉದಾಸಿ ಅವರು ಹೇಳಿದ್ದಾರೆ.
ಅಷ್ಟೇ ಅಲ್ಲದೆ, ರೈಲಿನಲ್ಲಿ ಸ್ನಾನಗೃಹಗಳು, ರೆಸ್ಟೊರೆಂಟ್ ಹಾಗೂ ಬ್ರಿಟಿಷ್ ಪ್ರಯಾಣಿಕರ ಸೊತ್ತು ಮತ್ತು ಸೇವಕರಿಗಾಗಿ ಪ್ರತ್ಯೇಕ ಕಂಪಾರ್ಟ್ ಮೆಂಟ್ ಇದ್ದವು ಎಂದಿದ್ದಾರೆ.
ಡೆಕ್ಕನ್ ಕ್ವೀನ್ ರೈಲು 1930ರ ಜೂನ್ 1ರಂದು ಗ್ರೇಟ್ ಇಂಡಿಯನ್ ಪೆನಿನ್ಸುಲಾ ರೈಲ್ವೇ (ಈಗಿನ ಮಧ್ಯ ರೈಲ್ವೇ)ಯಿಂದ ಪರಿಚಯಿಸಲ್ಪಟ್ಟಿತು.