Advertisement
ಬುಧವಾರದ ಐಪಿಎಲ್ ಪಂದ್ಯದಲ್ಲಿ ಸಾಮಾನ್ಯ ಮಟ್ಟದ ಬ್ಯಾಟಿಂಗ್ ಪ್ರದರ್ಶಿಸಿದ ಚೆನ್ನೈ 7 ವಿಕೆಟಿಗೆ 162 ರನ್ ಗಳಿಸಿದರೆ, ಪಂಜಾಬ್ 17.5 ಓವರ್‌ಗಳಲ್ಲಿ 3 ವಿಕೆಟಿಗೆ 163 ರನ್ ಬಾರಿಸಿತು.
Related Articles
Advertisement
ಶಿವಂ ದುಬೆ ಮೊದಲ ಎಸೆತದಲ್ಲೇ ಲೆಗ್ ಬಿಫೋರ್ ಆಗಿ “ಗೋಲ್ಡನ್ ಡಕ್’ ಅವಮಾನಕ್ಕೆ ಸಿಲುಕಿದರು. ಟಿ20 ವಿಶ್ವಕಪ್ ತಂಡಕ್ಕೆ ಆಯ್ಕೆಯಾದ ಖುಷಿಯನ್ನು ಇಲ್ಲಿ ಸಂಭ್ರಮಿಸಲಾಗಲಿಲ್ಲ.
ರವೀಂದ್ರ ಜಡೇಜ ಕೂಡ ನಿರಾಸೆ ಮೂಡಿಸಿ ದರು. ಕೇವಲ 2 ರನ್ ಮಾಡಿ ರಾಹುಲ್ ಚಹರ್ ಎಸೆತದಲ್ಲಿ ಲೆಗ್ ಬಿಫೋರ್ ಆದರು. 10 ಓವರ್ ಅಂತ್ಯಕ್ಕೆ ಚೆನ್ನೈ ಸ್ಕೋರ್ 3 ವಿಕೆಟಿಗೆ 71 ರನ್ ಆಗಿತ್ತು.
ಒಂದು ತುದಿಯಲ್ಲಿ ಕ್ರೀಸ್ ಆಕ್ರಮಿಸಿ ಕೊಂಡಿದ್ದ ಗಾಯಕ್ವಾಡ್‌ಗೆ ಸಮೀರ್ ರಿಝಿÌ ಉತ್ತಮ ಬೆಂಬಲವಿತ್ತರು. ಆದರೆ ರನ್ ಗತಿಯಲ್ಲಿ ವಿಶೇಷ ಪ್ರಗತಿ ಕಂಡುಬರಲಿಲ್ಲ. 5.4 ಓವರ್‌ಗಳಲ್ಲಿ 37 ರನ್ ಒಟ್ಟುಗೂಡಿತು, ಅಷ್ಟೇ. ರಿಝಿ ಗಳಿಕೆ 23 ಎಸೆತಗಳಿಂದ 21 ರನ್.
ಗಾಯಕ್ವಾಡ್-ಮೊಯಿನ್ ಅಲಿ ಜೋಡಿ ಯಿಂದ 38 ರನ್ ಸಂಗ್ರಹಗೊಂಡಿತು. ಈ ಹಂತದಲ್ಲಿ ಗಾಯಕ್ವಾಡ್ ವಿಕೆಟ್ ಬಿತ್ತು. 48 ಎಸೆತಗಳಿಂದ 62 ರನ್ ಬಾರಿಸಿ (5 ಬೌಂಡರಿ, 2 ಸಿಕ್ಸರ್) ಜವಾಬ್ದಾರಿಯುತ ಆಟವಾಡಿದ ಅವರು ಅರ್ಷದೀಪ್ ಎಸೆತದಲ್ಲಿ ಬೌಲ್ಡ್ ಆದರು. ಗಾಯಕ್ವಾಡ್ ಚಿಪಾಕ್ ಅಂಗಳದಲ್ಲಿ ಬಾರಿಸಿದ ಸತತ 4ನೇ 50 ಪ್ಲಸ್ ರನ್ ಇದಾಗಿದೆ.
36ನೇ ವರ್ಷದಲ್ಲಿ ಪದಾರ್ಪಣೆಚೆನ್ನೈ 2 ಬದಲಾವಣೆಗಳೊಂದಿಗೆ ಕಣಕ್ಕಿಳಿಯಿತು. ಗಾಯಾಳಾದ ಶ್ರೀಲಂಕಾ ಪೇಸರ್ ಮತೀಶ ಪತಿರಣ ಮತ್ತು ತುಷಾರ್ ದೇಶಪಾಂಡೆ ಬದಲು ಶಾದೂìಲ್ ಠಾಕೂರ್ ಹಾಗೂ ರಿಚರ್ಡ್ ಗ್ಲೀಸನ್ ಅವಕಾಶ ಪಡೆದರು. ಇವರಲ್ಲಿ 36 ವರ್ಷ, 151 ದಿನ ವಯಸ್ಸಿನ ಗ್ಲೀಸನ್‌ಗೆ ಇದು ಪದಾರ್ಪಣ ಪಂದ್ಯವಾಗಿದೆ. ಅವರು ಐಪಿಎಲ್ ಪದಾರ್ಪಣೆ ಮಾಡಿದ 2ನೇ ಅತೀ ಹಿರಿಯ ಆಟಗಾರನಾಗಿದ್ದಾರೆ. ದಾಖಲೆ ಸಿಕಂದರ್ ರಝ ಹೆಸರಲ್ಲಿದೆ (36 ವರ್ಷ, 151 ದಿನ). ಸ್ಕೋರ್ ಪಟ್ಟಿ
ಚೆನ್ನೆ „ ಸೂಪರ್ ಕಿಂಗ್ಸ್
ಅಜಿಂಕ್ಯ ರಹಾನೆ ಸಿ ರೋಸ್ಯೂ ಬಿ ಬ್ರಾರ್ 29
ಆರ್. ಗಾಯಕ್ವಾಡ್ ಬಿ ಅರ್ಷದೀಪ್ 62
ಶಿವಂ ದುಬೆ ಎಲ್‌ಬಿಡಬ್ಲ್ಯು ಬ್ರಾರ್ 0
ರವೀಂದ್ರ ಜಡೇಜ ಎಲ್‌ಬಿಡಬ್ಲ್ಯು ಚಹರ್ 2
ಸಮೀರ್ ರಿಝಿ ಸಿ ಹರ್ಷಲ್ ಬಿ ರಬಾಡ 21
ಮೊಯಿನ್ ಅಲಿ ಬಿ ಚಹರ್ 15
ಎಂ.ಎಸ್. ಧೋನಿ ರನೌಟ್ 14
ಡ್ಯಾರಿಲ್ ಮಿಚೆಲ್ ಔಟಾಗದೆ 1
ಇತರ 18
ಒಟ್ಟು (20 ಓವರ್‌ಗಳಲ್ಲಿ 7 ವಿಕೆಟಿಗೆ) 162
ವಿಕೆಟ್ ಪತನ: 1-64, 2-65, 3-70, 4-107, 5-145, 6-147, 7-162.
ಬೌಲಿಂಗ್:
ಕಾಗಿಸೊ ರಬಾಡ 4-0-23-1
ಅರ್ಷದೀಪ್ ಸಿಂಗ್ 4-0-52-1
ಸ್ಯಾಮ್ ಕರನ್ 3-0-37-0
ಹರ್‌ಪ್ರೀತ್ ಬ್ರಾರ್ 4-0-17-2
ರಾಹುಲ್ ಚಹರ್ 4-0-16-2
ಹರ್ಷಲ್ ಪಟೇಲ್ 1-0-12-0
ಪಂಜಾಬ್ ಕಿಂಗ್ಸ್
ಪ್ರಭ್‌ಸಿಮ್ರಾನ್ ಸಿಂಗ್ ಸಿ ಗಾಯಕ್ವಾಡ್ ಬಿ ಗ್ಲೀಸನ್ 13
ಜಾನಿ ಬೇರ್‌ಸ್ಟೊ ಸಿ ಧೋನಿ ಬಿ ದುಬೆ 46
ರಿಲೀ ರೋಸ್ಯೂ ಬಿ ಠಾಕೂರ್ 43
ಶಶಾಂಕ್ ಸಿಂಗ್ ಔಟಾಗದೆ 25
ಸ್ಯಾಮ್ ಕರನ್ ಔಟಾಗದೆ 26
ಇತರ 10
ಒಟ್ಟು (17.5 ಓವರ್‌ಗಳಲ್ಲಿ 3 ವಿಕೆಟಿಗೆ) 163
ವಿಕೆಟ್ ಪತನ: 1-19, 2-83, 3-113.
ಬೌಲಿಂಗ್: ದೀಪಕ್ ಚಹರ್ 0.2-0-4-0
ಶಾದೂìಲ್ ಠಾಕೂರ್ 3.4-0-48-1
ರಿಚರ್ಡ್ ಗ್ಲೀಸನ್ 3.6-0-30-1
ಮುಸ್ತಫಿಜುರ್ ರೆಹಮಾನ್ 4-1-22-0
ರವೀಂದ್ರ ಜಡೇಜ 3-0-22-0
ಮೊಯಿನ್ ಅಲಿ 2-0-22-0
ಶಿವಂ ದುಬೆ 1-0-14-1