Advertisement

Corruption Case: ಮಾಜಿ ಸಚಿವ ಮನ್‌ಪ್ರೀತ್ ಬಾದಲ್ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ

02:48 PM Sep 26, 2023 | Team Udayavani |

ಪಂಜಾಬ್‌: ಬಟಿಂಡಾದಲ್ಲಿ ಆಸ್ತಿ ಖರೀದಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಪಂಜಾಬ್ ವಿಜಿಲೆನ್ಸ್ ಬ್ಯೂರೋ ಮಂಗಳವಾರ ಪಂಜಾಬ್‌ನ ಮಾಜಿ ಹಣಕಾಸು ಸಚಿವ ಮನ್‌ಪ್ರೀತ್ ಸಿಂಗ್ ಬಾದಲ್ ವಿರುದ್ಧ ಲುಕ್‌ಔಟ್ ನೋಟೀಸ್ ಜಾರಿ ಮಾಡಿದೆ.

Advertisement

ನೊಟೀಸ್ ಜಾರಿಯಾಗುತ್ತಿದ್ದಂತೆ ಬಂಧನದಿಂದ ತಪ್ಪಿಸಿಕೊಳ್ಳಲು ಬಾದಲ್ ದೇಶದಿಂದ ಪಲಾಯನ ಮಾಡಬಹುದೆಂಬ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳ ತಂಡ ವಿಮಾನ ನಿಲ್ದಾಣಗಳಲ್ಲಿ ಹದ್ದಿನ ಕಣ್ಣಿಟ್ಟಿದೆ.

ಬಟಿಂಡಾ ಆಸ್ತಿ ಪ್ರಕರಣದಲ್ಲಿ ಬಾದಲ್ ಮತ್ತು ಇತರ ಐವರ ವಿರುದ್ಧ ವಿಜಿಲೆನ್ಸ್ ಅಧಿಕಾರಿಗಳು ಪ್ರಕರಣ ದಾಖಲಿಸಿದ ಒಂದು ದಿನದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: Cauvery water: ಕಾವೇರಿ ಹೋರಾಟ; ಎಲ್ಲಾ ಪಕ್ಷದ ನಾಯಕರ ಒಗ್ಗಟ್ಟಿಗೆ ಕಿಚ್ಚ ಸುದೀಪ್ ಮನವಿ

Advertisement

Udayavani is now on Telegram. Click here to join our channel and stay updated with the latest news.

Next