Advertisement

Cop In Trouble: ರೀಲ್ಸ್ ಮಾಡಲು ಡ್ಯೂಟಿ ವಾಹನ ನೀಡಿ ತೊಂದರೆಗೆ ಸಿಲುಕಿದ ಪೊಲೀಸ್ ಅಧಿಕಾರಿ

03:55 PM Sep 29, 2023 | Team Udayavani |

ರೀಲ್ಸ್ ಎನ್ನುವುದು ಈಗ ಕಾಮನ್ ಆಗಿ ಬಿಟ್ಟಿದೆ, ಕೈಯಲ್ಲಿ ಮೊಬೈಲ್ ಇದ್ದರೆ ಸಾಕು ಹೋದಲ್ಲೆಲ್ಲಾ ಮೊಬೈಲ್ ವಿಡಿಯೋ ರೆಕಾರ್ಡ್ ಮಾಡುವುದು ಇನ್ಸ್ಟಾ ಗ್ರಾಮ್ ಗೆ ಅಪ್ ಲೋಡ್ ಮಾಡುವುದು.

Advertisement

ಅದೇ ರೀತಿ ಯುವತಿಯೊಬ್ಬಳು ತಾನು ರೀಲ್ಸ್ ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳಲು ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯ ವಾಹನವನ್ನು ಪಡೆದು ರೀಲ್ಸ್ ಮಾಡಿ ಇದೀಗ ಯುವತಿಗೆ ರೀಲ್ಸ್ ಮಾಡಲು ಅವಕಾಶ ಮಾಡಿಕೊಟ್ಟ ಪೊಲೀಸ್ ಅಧಿಕಾರಿ ತೊಂದರೆಗೆ ಸಿಲುಕಿದ ಘಟನೆಯೊಂದು ಬೆಳಕಿಗೆ ಬಂದಿದೆ.

ವೀಡಿಯೊದಲ್ಲಿ, ಹುಡುಗಿ ಜಲಂಧರ್‌ನಲ್ಲಿರುವ ಪೋಲೀಸ್ ಡ್ಯೂಟಿ ಕಾರಿನ ಬಾನೆಟ್‌ನಲ್ಲಿ ಕುಳಿತು ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡಲು ಪೋಸ್ ನೀಡಿ ಚಿತ್ರೀಕರಿಸುವುದನ್ನು ಕಾಣಬಹುದು. ವೀಡಿಯೋದ ಕೊನೆಯಲ್ಲಿ ಪೊಲೀಸ್ ಸಮವಸ್ತ್ರವನ್ನು ಧರಿಸಿರುವ ವ್ಯಕ್ತಿಯೂ ಹುಡುಗಿಯೊಂದಿಗೆ ಕಾಣಿಸಿಕೊಂಡಿದ್ದಾನೆ.

ವೀಡಿಯೊದಲ್ಲಿರುವ ಯುವತಿ ಸಾಮಾಜಿಕ ಮಾಧ್ಯಮದ ಪ್ರಭಾವಿ ಎಂದು ಗುರುತಿಸಲಾಗಿದೆ. ಅಲ್ಲದೆ ಇನ್ಸ್ಟಾ ಗ್ರಾಮ್ ನಲ್ಲಿ ವಿಡಿಯೋ ಅಪ್ ಲೋಡ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದಂತೆ ವಿಡಿಯೋಗೆ ಬಳಸಿದ ವಾಹನದ ಕುರಿತು ಪಂಜಾಬ್‌ನ ಜಲಂಧರ್ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಧಿಕಾರಿಗಳು ತನಿಖೆ ಆರಂಭಿಸಿದ್ದು, ವಿಡಿಯೋದಲ್ಲಿ ಬಾಲಕಿ ಭಾಗಿಯಾಗಿರುವ ಬಗ್ಗೆ ತನಿಖೆ ನಡೆಸುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ಎಸ್‌ಎಚ್‌ಒ ಅಶೋಕ್ ಕುಮಾರ್ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ ಮತ್ತು ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ.

 

Advertisement

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ವ್ಯಾಪಕ ಆಕ್ರೋಶವೂ ವ್ಯಕ್ತವಾಗಿದೆ, ಬಳಿಕ ಯುವತಿಗೆ ತನ್ನ ತಪ್ಪಿನ ಅರಿವಾಗಿದ್ದು ಸಾಮಾಜಿಕ ಮಾಧ್ಯಮದ ಮೂಲಕ ಜನರಲ್ಲಿ ಕ್ಷಮೆ ಕೋರಿದ್ದಾಳೆ. ನನ್ನ ಗೆಳೆಯನ ಹುಟ್ಟು ಹಬ್ಬದ ವಿಚಾರವಾಗಿ ಸಂಭ್ರಮದಲ್ಲಿದ್ದ ವೇಳೆ ಈ ರೀಲ್ಸ್ ಮಾಡಲಾಗಿದ್ದು ಇದರಿಂದ ಯಾರಿಗಾದರೂ ತೊಂದರೆಯಾಗಿದ್ದರೆ ಕ್ಷಮಿಸಿ ಅಲ್ಲದೆ ಉದ್ದೇಶಪೂರ್ವಕವಾಗಿ ಏನೂ ಮಾಡಿಲ್ಲ. ಇದು ಉದ್ದೇಶಪೂರ್ವಕವಾಗಿ ವೈರಲ್ ಆಗಿದ್ದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ನಾವು ಅದನ್ನು ತಮಾಷೆಗಾಗಿ ಪೋಸ್ಟ್ ಮಾಡಿದ್ದೇವೆ. ಆದರೆ ಜನರು ಅದನ್ನು ತಪ್ಪು ರೀತಿಯಲ್ಲಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಬರೆದುಕೊಂಡಿದ್ದಾಳೆ.

ಇದನ್ನೂ ಓದಿ: Viral Video: ಬಿಟ್ಟೋಗ್ಬೇಡಾ…ಮಾವುತ ಬಿಟ್ಟು ಹೋಗದಂತೆ ಪುಟ್ಟ ಮಗುವಿನಂತೆ ರಚ್ಚೆ ಹಿಡಿದ ಆನೆ

Advertisement

Udayavani is now on Telegram. Click here to join our channel and stay updated with the latest news.

Next