ಹೊಸದಿಲ್ಲಿ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮನ್ ಅವರಿಗೆ ಝಡ್ ಪ್ಲಸ್ ಭದ್ರತೆ ನೀಡಲು ಕೇಂದ್ರ ಸರ್ಕಾರ ಸೂಚಿಸಿದೆ. ದೇಶದಾದ್ಯಂತ ಅವರಿಗೆ ಈ ಭದ್ರತೆ ನೀಡಲಾಗುತ್ತದೆ.
ಪಂಜಾಬ್ ನ ಮುಖ್ಯಮಂತ್ರಿ ಭಗವಂತ್ ಮನ್ ಅವರಿಗೆ ಅಖಿಲ ಭಾರತ ಆಧಾರದ ಮೇಲೆ ‘Z+’ ಭದ್ರತೆಯನ್ನು ಒದಗಿಸಲು ಸಿಆರ್ ಪಿಎಫ್ ಗೆ ವಿನಂತಿಸಲಾಗಿದೆ, ತಕ್ಷಣವೇ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ.
Z+ ಕ್ಯಾಟಗರಿಯಲ್ಲಿ 10+ ಎನ್ ಎಸ್ ಜಿ ಕಮಾಂಡೋಗಳು ಮತ್ತು ಪೊಲೀಸ್ ಸಿಬ್ಬಂದಿ ಸೇರಿದಂತೆ 55 ಸಿಬ್ಬಂದಿಗಳು ಭದ್ರತೆ ನೀಡುತ್ತಾರೆ.
ಇದನ್ನೂ ಓದಿ:Mysuru ಅಭಿವೃದ್ಧಿಗಾಗಿ ನಾನು ಯಾರ ‘ಕೈ’ ಕಾಲು ಬೇಕಾದರೂ ಹಿಡಿಯುತ್ತೇನೆ: ಪ್ರತಾಪ್ ಸಿಂಹ
Z+ ಮಟ್ಟದ ಭದ್ರತೆಯನ್ನು ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಕಮಾಂಡೋಗಳು ಒದಗಿಸುತ್ತಾರೆ. ಅವರು Heckler & Koch MP5 ಸಬ್-ಮೆಷಿನ್ ಗನ್ ಗಳು ಮತ್ತು ಆಧುನಿಕ ಸಂವಹನ ಸಾಧನಗಳೊಂದಿಗೆ ಶಸ್ತ್ರಸಜ್ಜಿತರಾಗಿರುತ್ತಾರೆ. ಅಲ್ಲದೆ ಈ ತಂಡದ ಪ್ರತಿಯೊಬ್ಬ ಸದಸ್ಯರು ಸಮರ ಕಲೆಗಳು ಮತ್ತು ನಿರಾಯುಧ ಯುದ್ಧ ಕೌಶಲ್ಯಗಳಲ್ಲಿ ಪ್ರವೀಣರಾಗಿರುತ್ತಾರೆ.