Advertisement
ಶ್ರೇಷ್ಠ ನಿರ್ವಹಣೆ ನೀಡಿ ಮೊದಲ ಪಂದ್ಯ ಗೆದ್ದಿರುವ ಕೆಕೆಆರ್ ಮತ್ತು ಪಂಜಾಬ್ ಬಲಿಷ್ಠವಾಗಿ ಗೋಚರಿಸಿವೆ. ಕೆಕೆಆರ್ ರವಿವಾರದ ಪಂದ್ಯದಲ್ಲಿ ಸನ್‌ರೈಸರ್ ಹೈದರಾಬಾದ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿ ಸಿತ್ತು. ಆ ಪಂದ್ಯದಲ್ಲಿ ಕೆಕೆಆರ್ ಬೌಲಿಂಗ್‌ನಲ್ಲಿ ಹಿಡಿತ ಸಾಧಿಸಲು ವಿಫಲವಾದರೂ ನಿತೀಶ್ ರಾಣ ಮತ್ತು ಆ್ಯಂಡ್ರೆ ರಸೆಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಜಯ ಸಾಧಿಸಿತ್ತು. ಪಂಜಾಬ್ ತಂಡ ಜೈಪುರದಲ್ಲಿ ರಾಜಸ್ಥಾನ್‌ವನ್ನು 14 ರನ್‌ಗಳಿಂದ ಸೋಲಿಸಿತ್ತು. ಇಲ್ಲಿ ಕ್ರಿಸ್ ಗೇಲ್ ಅವರ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದ ಸಂಘಟಿತ ಪ್ರದರ್ಶನ ತಂಡದ ಕೈಹಿಡಿದಿತ್ತು. ಇದೀಗ ಎರಡನೇ ಪಂದ್ಯಕ್ಕೆ ಎರಡೂ ತಂಡಗಳು ಸಿದ್ಧವಾಗಿವೆ.
ಕೆರಿಬಿಯನ್ ದೈತ್ಯರಾದ ಕ್ರಿಸ್ ಗೇಲ್ ಮತ್ತು ಆ್ಯಂಡ್ರೆ ರಸೆಲ್ ಈಗಾಗಲೇ ತಮ್ಮ ಮೊದಲ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು. ಕೋಲ್ಕತಾ ತಂಡಕ್ಕೆ ರಸೆಲ್ ಆಸರೆಯಾದರೆ ಪಂಜಾಬ್‌ಗ ಗೇಲ್ ಬಲ. ಇವರಿಬ್ಬರೂ ಮೊದಲ ಪಂದ್ಯದಲ್ಲಿÉ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಬುಧವಾರ ರಾತ್ರಿ ನಡೆಯುವ ಆಟದಲ್ಲಿ ಇವರಿಬ್ಬರ ಆಟ ಪ್ರಮುಖ ಆಕರ್ಷಣೆ. ಹೀಗಾಗಿ ಅವರಿಬ್ಬರ ಆಟ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಕೋಲ್ಕತಾಗೆ ಬ್ಯಾಟಿಂಗ್ ಬಲ
ಕೋಲ್ಕತಾ ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದೆ. ನಿತೀಶ್ ರಾಣ, ಆ್ಯಂಡ್ರೆ ರಸೆಲ್, ಉತ್ತಪ್ಪ ಈಗಾಗಲೇ ತಮ್ಮ ಬಲವನ್ನು ತೋರ್ಪಡಿಸಿದ್ದಾರೆ. ಕ್ರಿಸ್ ಲಿನ್, ದಿನೇಶ್ ಕಾರ್ತಿಕ್, ಶುಬ್‌ಮನ್ ಗಿಲ್ ಮೊದಲ ಪಂದ್ಯದಲ್ಲಿ ಎಡವಿದ್ದರೂ ದ್ವಿತೀಯ ಪಂದ್ಯದಲ್ಲಿ ಸಿಡಿಯುವ ವಿಶ್ವಾಸದಲ್ಲಿದ್ದಾರೆ. ಉತ್ತಮ ಬೌಲರ್‌ಗಳಿದ್ದರೂ ಮೊದಲ ಪಂದ್ಯದಲ್ಲಿ ಆಲ್‌ರೌಂಡರ್ ರಸೆಲ್ ಹೊರತುಪಡಿಸಿ ಉಳಿದ ಬೌಲರ್‌ಗಳು ಮೋಡಿ ಮಾಡಿರಲಿಲ್ಲ. ಯಾದವ್, ಚಾವ್ಲಾ, ಸುನಿಲ್ ನಾರಾಯಣ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.
Related Articles
Advertisement
ಕೆಕೆಆರ್-ಪಂಜಾಬ್ ಇಲ್ಲಿಯ ವರೆಗೆ 23 ಬಾರಿ ಎದುರಾಗಿವೆ. ಇದರಲ್ಲಿ ಕೆಕೆಆರ್ 15 ಪಂದ್ಯ ಗೆದ್ದಿದ್ದರೆ, ಪಂಜಾಬ್ 8 ಪಂದ್ಯವಷ್ಟೇ ಜಯಿಸಿದೆ. ಪಂಜಾಬ್ ಈಡನ್‌ನಲ್ಲಿ 3 ಬಾರಿಯಷ್ಟೇ ಗೆಲುವು ಸಾಧಿಸಿದೆ. ಹೀಗಾಗಿ ಕೋಲ್ಕತಾಗೆ ತವರಿನಂಗಳದ ಆಟ ಹೆಚ್ಚು ನೆಚ್ಚಿನದ್ದಾಗಿದೆ.