Advertisement

ಅಶಿಸ್ತು: ಪಂಜಾಬ್‌ ಬೌಲರ್‌ ಸಂದೀಪ್‌ ಶರ್ಮಾಗೆ ದಂಡ

12:35 PM May 09, 2017 | Harsha Rao |

ಮೊಹಾಲಿ: ಅಂಪಾಯರ್‌ ತೀರ್ಪಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ವಾದಕ್ಕಿಳಿದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಪೇಸ್‌ ಬೌಲರ್‌ ಸಂದೀಪ್‌ ಶರ್ಮ ಅವರಿಗೆ ಪಂದ್ಯ ಸಂಭಾವನೆಯ ಅರ್ಧದಷ್ಟು ದಂಡ ವಿಧಿಸಲಾಗಿದೆ.
ರವಿವಾರ ರಾತ್ರಿ ಮೊಹಾಲಿಯಲ್ಲಿ ನಡೆದ ಪಂಜಾಬ್‌-ಗುಜರಾತ್‌ ನಡುವಿನ ಪಂದ್ಯದ ವೇಳೆ ಈ ಘಟನೆ ನಡೆದಿದೆ.

Advertisement

ಗುಜರಾತ್‌ ಇನ್ನಿಂಗ್ಸಿನ 5ನೇ ಓವರ್‌ ವೇಳೆ, ಸಂದೀಪ್‌ ಶರ್ಮ “ರೌಂಡ್‌ ದಿ ವಿಕೆಟ್‌’ ಬೌಲಿಂಗ್‌ ನಡೆಸಿದರು. ಆಗ ಅಂಪಾಯರ್‌ ಎ. ನಂದಕಿಶೋರ್‌ ಇದನ್ನು ನೋಬಾಲ್‌ ಎಂದು ಘೋಷಿಸಿದರು. ಬೌಲಿಂಗ್‌ ಬದಲಾವಣೆ ಕುರಿತು ಸಂದೀಪ್‌ ತನಗೆ ಸೂಚಿಸಲಿಲ್ಲ ಎಂಬ ಕಾರಣಕ್ಕಾಗಿ ನಂದಕಿಶೋರ್‌ ಇಂಥದೊಂದು ತೀರ್ಮಾನಕ್ಕೆ ಬಂದಿದ್ದರು. 

ಇದು ಸಂದೀಪ್‌ ಶರ್ಮ ಅವರನ್ನು ಕೆರಳಿಸಿತು. ಅವರು ಅಂಪಾಯರ್‌ ಜತೆ ವಾದಕ್ಕಿಳಿದರು. ಬಿಸಿ ಬಿಸಿ ಚರ್ಚೆ ನಡೆಯಿತು. ಅಂಪಾಯರ್‌ ನಿರ್ಣಯ ಪಂಜಾಬ್‌ ನಾಯಕ ಮ್ಯಾಕ್ಸ್‌ವೆಲ್‌ ಅವರ ಅಸಮಾಧಾನಕ್ಕೂ ಕಾರಣವಾಯಿತು.
ಅಂಪಾಯರ್‌ ನೀಡಿದ ದೂರಿನನ್ವಯ ಮ್ಯಾಚ್‌ ರೆಫ್ರಿ ಜಾವಗಲ್‌ ಶ್ರೀನಾಥ್‌ ಯಾವುದೇ ವಿಚಾರಣೆ ನಡೆಸದೆ ಸಂದೀಪ್‌ ಶರ್ಮ ಅವರಿಗೆ ದಂಡ ವಿಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next