Advertisement

ಪ್ರೇಮ ವಿವಾಹ ತಿರಸ್ಕರಿಸಿದ್ದಕ್ಕೆ ಕಿರುಕುಳ ನೀಡಿದರೆ ಕಠಿಣ ಕ್ರಮ: ಸಿಎಂ ಪಿಣರಾಯಿ ವಿಜಯನ್‌

07:45 PM Aug 11, 2021 | Team Udayavani |

ತಿರುವನಂತಪುರ: ಪ್ರೇಮ ಪ್ರಸ್ತಾಪ ತಿರಸ್ಕರಿಸಿದ ಕಾರಣ ಮುಂದಿಟ್ಟುಕೊಂಡು ಮಹಿಳೆಯರಿಗೆ ಕಿರುಕುಳ ಕೊಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ ಎಚ್ಚರಿಕೆ ನೀಡಿದ್ದಾರೆ.

Advertisement

ಬುಧವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಮಹಿಳೆಯರು ಪ್ರೀತಿ-ಪ್ರೇಮ ಪ್ರಸ್ತಾಪ ತಿರಸ್ಕರಿಸಿದ್ದಾರೆ ಎಂದು ನೆಪವೊಡ್ಡಿ ಕಿರುಕುಳ ನೀಡುವವರ ಮೇಲೆ ಪೊಲೀಸರು ನಿಗಾ ಇರಿಸಲಿದ್ದಾರೆ. ತೊಂದರೆ ಕೊಡುವವರು ಮಹಿಳೆಯರನ್ನು ಕೊಲ್ಲುವ ಹಂತದ ವರೆಗೆ ಹೋಗದೆ ಇರುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.

ಎರ್ನಾಕುಳಂನ ಕೋತಮಂಗಲಂನಲ್ಲಿ 24 ವರ್ಷದ ದಂತ ವೈದ್ಯ ವಿದ್ಯಾರ್ಥಿನಿಯನ್ನು ಆಕೆ ಪ್ರೇಮಿ ಗುಂಡು ಹಾರಿಸಿ ಹತ್ಯೆ ಮಾಡಿದ್ದು ಸೇರಿದಂತೆ ದೇವರೊಲಿದ ರಾಜ್ಯದಲ್ಲಿ ವರದಕ್ಷಿಣೆ ಕಿರುಕುಳ, ಅತ್ಯಾಚಾರ ನಡೆಸಿ ಕೊಲೆ ಸೇರಿದಂತೆ ಹಲವಾರು ಮಹಿಳೆಯರ ಸಾವಿನ ಪ್ರಕರಣಗಳ ಹಿನ್ನೆಲೆಯಲ್ಲಿ ಸಿಎಂ ಎಚ್ಚರಿಕೆ ಮಹತ್ವಪಡೆದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರನ್ನು ಆಮಿಷಕ್ಕೆ ಒಳಪಡಿಸಿ ಸಿಲುಕಿಸಿ ಹಾಕುವ ಜಾಲದಿಂದ ನೊಂದಿದ್ದರೆ, ಅಂಥ ಪ್ರಕರಣಗಳನ್ನೂ ಗಂಭೀರವಾಗಿ ಪರಿಗಣಿಸಬೇಕು. ಇದರಿಂದಾಗಿ ನೊಂದಿರುವವರಿಗೆ ಧೈರ್ಯ ತುಂಬುವ ಕೆಲಸನ್ನೂ ಪೊಲೀಸರು ಮಾಡಬೇಕಾಗಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next