Advertisement

ಭಾರತೀಯ ಮುಸ್ಲಿಮರನ್ನು ಪಾಕಿಸ್ಥಾನೀಯ ಎನ್ನುವವರಿಗೆ ಜೈಲು: Owaisi

11:39 AM Feb 07, 2018 | Team Udayavani |

ಹೈದರಾಬಾದ್‌ : ಭಾರತೀಯ ಮುಸ್ಲಿಮರನ್ನು ಪಾಕಿಸ್ಥಾನೀ ಎಂದು ಯಾರಾದರೂ ಕರೆದರೆ ಅವರನ್ನು ಜೈಲಿಗೆ ಹಾಕಬೇಕು ಎಂದು ಎಐಎಂಐಎಂ ನಾಯಕ ಅಸಾದುದ್ದೀನ್‌ ಓವೈಸಿ ಹೇಳಿದ್ದಾರೆ. 

Advertisement

ಭಾರತೀಯ ಮುಸ್ಲಿಮರನ್ನು ಪಾಕಿಸ್ಥಾನಿಯ ಎಂದು ಕರೆಯುವವರನ್ನು ಶಿಕ್ಷಿಸುವ ಕಾನೂನನ್ನು ಸರಕಾರ ಜಾರಿಗೆ ತರಬೇಕು ಮತ್ತು ಅಂಥವರಿಗೆ ಮೂರು ವರ್ಷ ಜೈಲು ವಿಧಿಸಬೇಕು ಎಂದು ಓವೈಸಿ ಸಲಹೆ ನೀಡಿದರು. 

ಪಾಕ್‌ ಸ್ಥಾಪಕ ಮೊಹಮ್ಮದ್‌ ಅಲಿ ಜಿನ್ನಾ ಅವರ ದ್ವಿರಾಷ್ಟ್ರ  ನೀತಿಯನ್ನು ಭಾರತೀಯ ಮುಸ್ಲಿಮರು ತಿರಸ್ಕರಿಸಿದ್ದಾರೆ ಎಂದು ಓವೈಸಿ ಹೇಳಿದರು. 

ರಾಷ್ಟ್ರಪತಿ ರಾಮ ನಾಥ್‌ ಕೋವಿಂದ್‌ ಅವರು ಸದನವನ್ನುದ್ದೇಶಿಸಿ ಮಾಡಿದ ಭಾಷಣದ ವಂದನಾ ನಿರ್ಣಯದ ವೇಳೆ ಓವೈಸಿ ಮಾತನಾಡುತ್ತಿದ್ದರು. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next