Advertisement
ಶುಕ್ರವಾರ ಸಂಜೆ ಮೆಜೆಸ್ಟಿಕ್ ಸಮೀಪದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಜೈಪುರ- ಮೈಸೂರು ಎಕ್ಸ್‌ಪ್ರೆಸ್ ರೈಲಿನಲ್ಲಿ 120 ಬಾಕ್ಸ್‌ಗಳಲ್ಲಿ ಅಂದಾಜು 4,500 ಕೆ.ಜಿ ಮಾಂಸ ತರಲಾಗಿತ್ತು. ಅದರಲ್ಲಿ ನಾಯಿ ಮಾಂಸವನ್ನು ಮಿಶ್ರ ಮಾಡಿ ತರಲಾಗಿದೆ ಎಂದು ಪುನೀತ್ ಕೆರೆಹಳ್ಳಿ ನೇತೃತ್ವದಲ್ಲಿ ಗುಂಪೊಂದು ಪ್ರತಿಭಟನೆ ನಡೆಸಿತ್ತು. ಸ್ಥಳಕ್ಕೆ ಬಂದಿದ್ದ ಪೊಲೀಸರು ಪರಿಶೀಲಿಸಿ ಆಹಾರ ಸುರಕ್ಷತೆ ಇಲಾಖೆ ಅಧಿಕಾರಿಗಳನ್ನು ಕರೆಸಿದ್ದರು. ಅವರು ಮಾಂಸದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ರಾಜಸ್ಥಾನದಿಂದ ನಗರಕ್ಕೆ ಮಾಂಸ ಕಳುಹಿಸಿದ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲು ಮಾಡಿಕೊಂಡಿದ್ಧಾರೆ.
Related Articles
Advertisement
ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿ ಮೇಲೆ ಕಾಟನ್‌ಪೇಟೆ ಎಸಿಪಿ ಚಂದನ್ ಕುಮಾರ್ ದೌರ್ಜನ್ಯ ಎಸೆಗಿದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಎಸಿಪಿ ಚಂದನ್ ಕುಮಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಮಸ್ತ ಹಿಂದೂ ಸಂಘಟನೆಗಳ ಒಕ್ಕೂಟ ಮುಖಂಡರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದಗೆ ಶನಿವಾರ ದೂರು ನೀಡಿದ್ದಾರೆ.
ಎಸಿಪಿ ಚಂದನ್ ಕುಮಾರ್ ಪುನೀತ್ ಕೆರೆಹಳ್ಳಿ ಮೇಲೆ ದೌರ್ಜನ್ಯ ಮಾಡಿದ್ದಾರೆ. ಪುನೀತ್ ಕೆರೆಹಳ್ಳಿ ಅವರನ್ನು ನಗ್ನಗೊಳಿಸಿ ವಿಡಿಯೋ ಮಾಡಿಕೊಂಡಿದ್ದಾರೆ. ನಿನ್ನ ನಾಟಕ ಜಾಸ್ತಿಯಾಗಿದೆ. ಇನ್ನು ಮುಂದೆ ಇದೆಲ್ಲಾ ನಡೆಯುವುದಿಲ್ಲ. ಜಾಸ್ತಿ ನಾಟಕ ಮಾಡಿದರೆ ನಿನ್ನ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತೇನೆ’ ಎಂದು ಅಪಮಾನಿಸಿದ್ದಾರೆ. ಅಲ್ಲದೆ, ಪುನೀತ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಸಮಸ್ತ ಹಿಂದೂ ಸಂಘಟನೆಗಳ ಒಕ್ಕೂಟದ ಮುಖಂಡರಾದ ಮೋಹನ ಗೌಡ, ವಕೀಲ ಪ್ರಸನ್ನ, ಶರತ್ ಮತ್ತಿತರರಿದ್ದರು.