Advertisement

ಸ್ಪಟಿಕ ಸುಂದರಿ ಕಾಶ್ಮೀರದಲ್ಲಿ ಜೇಮ್ಸ್…ಕಣಿವೆ ರಾಜ್ಯದಲ್ಲಿ ಪವರ್ ಸ್ಟಾರ್ ಫೈಟ್  

09:01 PM Feb 17, 2021 | Team Udayavani |

ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ತೆರೆಗೆ ಬರಲು ತುದಿಗಾಲಿನ ಮೇಲೆ ನಿಂತಿದೆ. ಇದರ ಜತೆಗೆ ಅವರ ಮತ್ತೊಂದು ಸಿನಿಮಾ ಜೇಮ್ಸ್ ಶೂಟಿಂಗ್ ಭರ್ಜರಿಯಾಗೇ ನಡಿಯುತ್ತಿದೆ.

Advertisement

ಬಹದ್ದೂರು ಖ್ಯಾತಿಯ ಚೇತನ್ ಕುಮಾರ್ ಹಾಗೂ ಚಂದನವನದ ರಾಜಕುಮಾರ ಪುನೀತ್ ಕಾಂಬಿನೇಶನ್ ನ ‘ಜೇಮ್ಸ್’ ಸಿನಿಮಾ ಸಿದ್ಧವಾಗುತ್ತಿದೆ. ಈ ಚಿತ್ರದ ಘೋಷಣೆಯಾದಾಗಲೇ ಗಾಂಧಿನಗರದಲ್ಲಿ ದೊಡ್ಡ ಕ್ರೇಜ್ ಹುಟ್ಟಿಕೊಂಡಿತು. ಆ್ಯಕ್ಷನ್ ಕಮರ್ಷಿಯಲ್ ಜಾನರ್ ನ ಜೇಮ್ಸ್ ಸಿನಿರಸಿಕರಿಗೆ ಭರ್ಜರಿ ಮನರಂಜನೆಯ ರಸದೌತಣ ನೀಡುವುದು ಪಕ್ಕಾ ಎನ್ನುವ ನಿರೀಕ್ಷೆ ಇದೆ.

ಸದ್ಯ ಈ ಚಿತ್ರದ ಶೂಟಿಂಗ್ ಕಾಶ್ಮೀರದಲ್ಲಿ ನಡೆಯುತ್ತಿದೆ. ಸ್ಟಟಿಕ ಸುಂದರಿ ಎಂದು ಕರೆಯಿಸಿಕೊಳ್ಳುವ ಕಾಶ್ಮೀರದಲ್ಲಿ ಹರ್ಷ ಮಾಸ್ಟರ್ ನಿರ್ದೇಶನದಲ್ಲಿ ಒಂದು ಸಾಂಗ್ ಹಾಗೂ ಸಾಹಸ ನಿರ್ದೇಶಕ ವಿಜಯ್ ನಿರ್ದೇಶನದಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯಲಿದೆ. ಚಿತ್ರೀಕರಣ ನಿಮಿತ್ತ ಇಂದು (ಫೆ.17)  ಕಾಶ್ಮೀರ ಕಣಿವೆಯಲ್ಲಿ ಪುನೀತ್ ರಾಜಕುಮಾರ್ ಸೇರಿದಂತೆ ಇಡೀ ಚಿತ್ರತಂಡ ಲ್ಯಾಂಡ್ ಆಗಿದೆ.

ಇನ್ನು ಜೇಮ್ಸ್ ಸಿನಿಮಾ ಪ್ರಿಯಾ ಆನಂದ್ ಜೇಮ್ಸ್ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next