Advertisement

ಪುನೀತ್‌ “ಜೇಮ್ಸ್‌’ಗೆ ತಯಾರಿ ಜೋರು

10:15 AM Jan 10, 2020 | Lakshmi GovindaRaj |

ಪುನೀತ್‌ ಅಭಿನಯದ “ಯುವರತ್ನ’ ಇನ್ನೇನು ಬಿಡುಗಡೆಯ ತಯಾರಿಯಲ್ಲಿದೆ. ಇತ್ತ ಅವರ ಹೊಸ ಚಿತ್ರ “ಜೇಮ್ಸ್‌’ ಚಿತ್ರ ಕೂಡ ಸುದ್ದಿಯಲ್ಲಿದೆ. “ಬಹದ್ದೂರ್‌’ ಚೇತನ್‌ಕುಮಾರ್‌ ನಿರ್ದೇಶನದ “ಜೇಮ್ಸ್‌’ ಚಿತ್ರಕ್ಕೆ ಜನವರಿ 19ರಂದು ಮುಹೂರ್ತ ನಡೆಯಲಿದೆ. ಈಗಾಗಲೇ ಎಲ್ಲವನ್ನೂ ತಯಾರು ಮಾಡಿಕೊಂಡಿರುವ ನಿರ್ದೇಶಕ ಚೇತನ್‌ಕುಮಾರ್‌, ಜ.19 ರಂದು ಮುಹೂರ್ತ ನೆರವೇರಿಸಿ, ಜ.20 ರಿಂದ ಚಿತ್ರೀಕರಣಕ್ಕೆ ಸಜ್ಜಾಗಲಿದ್ದಾರೆ.

Advertisement

ಈ ಕುರಿತು ಹೇಳಿಕೊಳ್ಳುವ ಚೇತನ್‌ಕುಮಾರ್‌, “ಇದೊಂದು ಪಕ್ಕಾ ಕಮರ್ಷಿಯಲ್‌ ಎಂಟರ್‌ಟೈನರ್‌ ಸಿನಿಮಾ. ಇಲ್ಲಿಯವರೆಗೆ ಪುನೀತ್‌ ಅವರು ಮಾಡಿದ ಚಿತ್ರಗಳಿಗಿಂತಲೂ ಭಿನ್ನವಾಗಿರುತ್ತೆ. ಪಾತ್ರ ಕೂಡ ಹೊಸ ರೀತಿಯಾಗಿದೆ. ಬಾಡಿಲಾಂಗ್ವೇಜ್‌ ಕೂಡ ಹೊಸತನದಿಂದ ಕೂಡಿದೆ. “ಜೇಮ್ಸ್‌’ ಎಂಬ ಶೀರ್ಷಿಕೆಗೆ ತಕ್ಕದ್ದಾದ ಪಾತ್ರವಿದೆ. ಇಲ್ಲಿನ ಮುಖ್ಯ ಆಕರ್ಷಣೆ ಅಂದರೆ, ಅದು ಹೈವೋಲ್ಟೆಜ್‌ ಆ್ಯಕ್ಷನ್‌. ಪುನೀತ್‌ ಸರ್‌ ಅವರ ವಿಶೇಷ ಸ್ಟಂಟ್ಸ್‌ ಇಲ್ಲಿರಲಿದೆ.

ಅವರ ಫ್ಯಾನ್ಸ್‌ಗೆ ವಿಶೇಷತೆಗಳು ತುಂಬಿರಲಿವೆ. ಒಟ್ಟಾರೆ, “ಜೇಮ್ಸ್‌’ ಪಕ್ಕಾ ಮನರಂಜನಾತ್ಮಕವಾಗಿಯೇ ಮೂಡಿಬರಲಿದೆ’ ಎಂದು ವಿವರ ಕೊಡುತ್ತಾರೆ ಚೇತನ್‌ಕುಮಾರ್‌. ಚಿತ್ರದ ನಾಯಕಿಯ ಆಯ್ಕೆ ಕುರಿತಂತೆ ಮಾತುಕತೆ ನಡೆಯುತ್ತಿದೆ. ಚಿತ್ರಕ್ಕೆ ಚರಣ್‌ರಾಜ್‌ ಸಂಗೀತವಿದೆ. ಶ್ರೀಶ ಛಾಯಾಗ್ರಹಣವಿದೆ. ರವಿಸಂತೆ ಹಕ್ಲು ಕಲಾನಿರ್ದೇಶನವಿದೆ. ಕಿಶೋರ್‌ ಪತ್ತಿಕೊಂಡ ಚಿತ್ರ ನಿರ್ಮಿಸುತ್ತಿದ್ದಾರೆ.

ಸದ್ಯಕ್ಕೆ ಪುನೀತ್‌ ರಾಜಕುಮಾರ್‌ ಅವರ “ಯುವರತ್ನ’ ಚಿತ್ರ ನಿರೀಕ್ಷೆ ಹೆಚ್ಚಿಸಿದೆ. “ರಾಜಕುಮಾರ’ ಬಳಿಕ ಸಂತೋಷ್‌ ಆನಂದರಾಮ್‌ ಪುನಃ ಪುನೀತ್‌ ಅವರಿಗೆ ನಿರ್ದೇಶಿಸುತ್ತಿರುವ ಚಿತ್ರ ಆಗಿರುವುದರಿಂದ, ಸಹಜವಾಗಿಯೇ ಈ ಕಾಂಬಿನೇಷನ್‌ ಚಿತ್ರದ ಮೇಲೆ ಕುತೂಹಲವಿದೆ. ಈಗಾಗಲೇ “ಯುವರತ್ನ’ ಚಿತ್ರದ ಪೋಸ್ಟರ್‌ ರಿಲೀಸ್‌ ಆಗಿದ್ದು, ಎಲ್ಲರನ್ನೂ ಆಕರ್ಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next