Advertisement
ಇದರೊಂದಿಗೆ ತೆಲುಗು ಟೈಟಾನ್ಸ್ ಸಂಪೂರ್ಣ ಮುಳುಗಿತು. ಗೆದ್ದರೂ ಈಗಾಗಲೇ 21 ಪಂದ್ಯ ಆಡಿರುವ ಪುನೇರಿ ತಂಡ ಪ್ಲೇ-ಆಫ್ನಿಂದ ಹೊರಬಿತ್ತು. ಯುಪಿ ಯೋಧಾ ಸದ್ಯ 6ನೇ ಸ್ಥಾನದಲ್ಲಿದೆ. ಇನ್ನೂ 4 ಪಂದ್ಯ ಆಡಲು ಬಾಕಿ ಇದೆ. ಹೀಗಾಗಿ ಯೋಧಾ ಪ್ಲೇ-ಆಫ್ಗೆ ಅವಕಾಶ ಪಡೆಯುವ ನಿರೀಕ್ಷೆ ಇದೆ. ದಬಾಂಗ್ ಡೆಲ್ಲಿ, ಬೆಂಗಾಲ್ ವಾರಿಯರ್, ಹರ್ಯಾಣ ಸ್ಟೀಲರ್ಸ್, ಯು ಮುಂಬಾ, ಬೆಂಗಳೂರು ಬುಲ್ಸ್ ಸೇರಿದಂತೆ ಒಟ್ಟು 5 ತಂಡಗಳು ಈಗಾಗಲೇ ಪ್ಲೇ-ಆಫ್ ಸ್ಥಾನ ಖಚಿತಪಡಿಸಿಕೊಂಡಿದೆ. ಉಳಿದ ಒಂದು ಸ್ಥಾನಕ್ಕೆ ಪೈಪೋಟಿ ಮುಂದುವರಿದಿದೆ.
ದೇವಿಲಾಲ್ ನ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಪುನೇರಿ ಪಲ್ಟಾನ್ ಸಂಘಟಿತ ಆಟ ಪ್ರದರ್ಶಿಸಿತು, ಮಂಜೀತ್ (12 ಆಲ್‌ರೌಂಡಿಂಗ್ ಅಂಕ), ಸುಶಾಂತ್ ಸೈಲ್ (11 ಆಲ್‌ರೌಂಡಿಂಗ್ ಅಂಕ), ಸುರ್ಜಿತ್ ಸಿಂಗ್ (7 ಟ್ಯಾಕಲ್ ಅಂಕ) ಹಾಗೂ ನಿತಿನ್ ತೋಮರ್ (5 ಆಲ್‌ರೌಂಡಿಂಗ್ ಅಂಕ) ಬಿರುಸಿನ ಆಟ ಪ್ರದರ್ಶಿಸಿದರು. ಇದರಿಂದ ತಂಡ ಗೆಲುವು ಸಾಧಿಸಿತು. ರಾಕೇಶ್ ಗುಡುಗು
ಟೈಟಾನ್ಸ್ ಪರ ರಾಕೇಶ್ ಗೌಡ ರೈಡಿಂಗ್‌ನಲ್ಲಿ ಮಿಂಚಿದರು. ಒಂದು ಆಕರ್ಷಕ ಟ್ಯಾಕಲ್ ಕೂಡ ನಡೆಸಿದ ರಾಕೇಶ್ ವೈಯಕ್ತಿಕ 17 ಅಂಕ ಪಡೆದರು. ಇವರಿಗೆ ಆಕಾಶ್ ಹಾಗೂ ಕೃಷ್ಣ ತಲಾ 5 ಟ್ಯಾಕಲ್ ಅಂಕದಿಂದ ಸಾಥ್ ನೀಡಿದರು. ಆದರೆ ತಾರಾ ಆಟಗಾರ ಸಿದ್ಧಾರ್ಥ್ ದೇಸಾಯಿ ಕಳಪೆ ರೈಡಿಂಗ್ ಪ್ರದರ್ಶಿಸಿದ್ದು ತಂಡಕ್ಕೆ ಮುಳುವಾಯಿತು.