ಪುಣೆ: ಪ್ರತೀ ವರ್ಷ ಎಪ್ರಿಲ್ ಆರಂಭವಾಯಿತೆಂದರೆ ಪುಣೆ ಹೊಟೇಲಿಗರ ಸಮಸ್ಯೆಯೂ ಆರಂಭವಾಯಿತೆನ್ನಬಹುದು. ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಕಾರ್ಮಿಕರೆಲ್ಲ ತಮ್ಮ ತಮ್ಮ ಊರಿಗೆ ಹೋಗುವ ಕಾರಣ ಹೊಟೇಲಿನಲ್ಲಿ ಸಮಸ್ಯೆ ಎದುರಾಗುತ್ತದೆ. ಪುಣೆಯಾದ್ಯಂತ ವೆಜ್ ಹಾಗೂ ಪರ್ಮಿಟ್ ರೂಮ್‌ಗಳಲ್ಲಿ ಎಲ್ಲ ಕಡೆಯೂ ಇದೀಗ ಕಾರ್ಮಿಕರ ಸಮಸ್ಯೆ ಎದುರಾಗಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಕ್ಲೀನಿಂಗ್ ಸಮಸ್ಯೆಯಾಗಿದೆ. ಮೋರಿ ಹುಡುಗರು ಸಿಗುತ್ತಲೇ ಇಲ್ಲ, ಮಾತ್ರವಲ್ಲ ಸರ್ವಿಸ್ ಮಾಡುವ ವೈಟರ್ ಸಮಸ್ಯೆ, ಉಳಿದಂತೆ ಮಾಲ್‌ವಾಲಾ, ಹೆಲ್ಪರ್‌ಗಳು. ಇದೀಗ ಹೊಟೇಲಿಗರು ಪರಸ್ಪರ ಭೇಟಿಯಾದಾಗ ಹೇಗೆ ಜನ ಇದ್ದಾರಾ…? ಎಂದಾಗ ಭಾರೀ ಕಷ್ಟ ಮಾರಾಯೆÅà ಜನನೇ ಸಿಗುತ್ತಿಲ್ಲ, 25 ಮಂದಿ ಇದ್ದ ಕಡೆ 10 ಜನರಿಂದ ಸುಧಾರಿಸುತ್ತಿದ್ದೇವೆ ಎಂಬ ಮಾತುಗಳು ಹೊಟೇಲಿಗರಿಂದ ಕೇಳಿ ಬರುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.
ಪುಣೆಯಲ್ಲಿ ಅಂದಾಜು ಪ್ರಕಾರ ಮೂರು ಸಾವಿರಕ್ಕೂ ಹೆಚ್ಚು ಹೊಟೇಲ್‌ಗಳಿದ್ದು ಐವತ್ತು ಸಾವಿರಕ್ಕೂ ಹೆಚ್ಚು ಕಾರ್ಮಿಕರಿ¨ªಾರೆ. ಇಂದಿನ ದಿನಗಳಲ್ಲಿ ಹೆಚ್ಚಿನ ಹೊಟೇಲ್ ಕಾರ್ಮಿಕರು ಪಶ್ಚಿಮ ಬಂಗಾಳ ಮೂಲದವರು. ಅವರ ಹೊರತಾಗಿ ಸ್ವಲ್ಪ ಕೊಲ್ಹಾಪುರದ ಕಾರ್ಮಿಕರು. ಕೊಲ್ಹಾಪುರದ ಕಾರ್ಮಿಕರು ಹೆಚ್ಚಾಗಿ ತಿಂಗಳ ಸಂಬಳ ಸಿಕ್ಕಿದ ಕೂಡಲೇ ಊರಿಗೆ ಹೋಗುತ್ತಿರುವುದರಿಂದ ಅವರನ್ನು ಹೆಚ್ಚಾಗಿ ನೆಚ್ಚಿಕೊಳ್ಳುವಂತಿಲ್ಲ. ಒಂದಷ್ಟು ಉತ್ತರ ಪ್ರದೇಶ, ಮಧ್ಯಪ್ರದೇಶ ಹಾಗೂ ಬಿಹಾರ ಮೂಲದವರು.
ಹಿಂದೆ ಬಿಹಾರ ಮೂಲದ ಕಾರ್ಮಿಕರು ಹೊಟೇಲ್‌ಗಳಲ್ಲಿ ಹೆಚ್ಚಾಗಿದ್ದರು. ಆದರೆ ಬಿಹಾರ ಅಭಿವೃದ್ಧಿ ಹೊಂದುತ್ತಿದ್ದಂತೆ ಯಾರೂ ಪುಣೆ ಮುಂಬಯಿಗಳಿಗೆ ಬರುತ್ತಿಲ್ಲ. ಹಿಂದೆ ಬಾಂಗ್ಲಾದೇಶದಿಂದ ವಲಸೆ ಬರುವವರು ನೇರವಾಗಿ ಮುಂಬಯಿ, ಪುಣೆಯಂತಹ ನಗರಗಳಲ್ಲಿ ಹೊಟೇಲ್ ಕೆಲಸಕ್ಕೆ ಬರುತ್ತಿದ್ದರು. ಇದೀಗ ವಲಸೆ ಬರುವವರಿಗೆ ಭಾರತ ಸರಕಾರದ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದ್ದರಿಂದ ಹಾಗೂ ಆಧಾರ್ ಕಾರ್ಡ್, ಗುರುತಿನ ಚೀಟಿಗಳನ್ನು ಕಡ್ಡಾಯಗೊಳಿಸಿದ್ದರಿಂದ ಅವರ ಸಂಖ್ಯೆಯೂ ಇಳಿಮುಖವಾಗಿದ್ದು ಕಾರ್ಮಿಕರ ಸಮಸ್ಯೆಗೆ ಕಾರಣವಾಗಿದೆ.
ಸಮಸ್ಯೆಗಳಿಗೆ ಪರಿಹಾರವೆಂಬಂತೆ ಭವಿಷ್ಯದಲ್ಲಿ ಸೆಲ್ಫ್ ಸರ್ವಿಸ್ ಹೊಟೇಲ್‌ಗಳು ಹೆಚ್ಚಾಗುವ ಸಾಧ್ಯತೆ ಕಂಡುಬರುತ್ತಿದೆ. ಈ ಸಮಸ್ಯೆಗಳಿಂದ ಹೊರಬರಲು ಕೆಲವೊಂದು ಉದ್ಯಮಿಗಳು ರೆಸ್ಟೋರೆಂಟ್‌ಗಳ ಬದಲಾಗಿ ಲಾಡಿjಂಗ್‌ಗಳಿಗೆ ಮೊರೆ ಹೋಗುತ್ತಿದ್ದಾರೆ. ಲಾಡಿjಂಗ್ ಉದ್ಯಮವೆಂದರೆ ಹೆಚ್ಚು ಕಾರ್ಮಿಕರ ಅಗತ್ಯವಿರದೆ ಮೂರು ನಾಲ್ಕು ಜನರು ಸಾಕಾಗುತ್ತದೆ ಎಂಬುದು ಅವರ ಅಭಿಮತವಾಗಿದೆ.
ವರದಿ: ಕಿರಣ್ ಬಿ. ರೈ ಕರ್ನೂರು