ಪುಣೆ: ಪುಣೆ ತುಳುಕೂಟ ಯುವ ವಿಭಾಗದಿಂದ ಸೂಪರ್ ಸೆವೆನ್ ಬಾಕ್ಸ್ ಕ್ರಿಕೆಟ್ ಪಂದ್ಯಾವಳಿಯು ಮಾ. 31ರಂದು ಸೆಂಟ್ರಲ್ ಮಾಲ್‌ನಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು.
ಪುಣೆ ತುಳುಕೂಟದ ಅಧ್ಯಕ್ಷ ಮೋಹನ್ ಶೆಟ್ಟಿ ಎಣ್ಣೆಹೊಳೆ ಅವರು ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿ ಬ್ಯಾಟ್ ಬೀಸುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು. ಬಳಿಕ ಪಂದ್ಯಾಟವನ್ನು ಆರಂಭಗೊಳಿಸಲಾಯಿತು. ಸುಮಾರು 38 ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದ್ದವು.
ಟೀಮ್ ಆರ್‌ಕೆ, ಟೀಮ್ ಉರ್ಜಾ, ಯೂತ್ ಬಂಟ್ಸ್ ಸಂಘ, ಸ್ಮಾಷರ್ಸ್ 7ಎ, ದೇಹುರೋಡ್ ಬಿ., ರೋಯಲ್ ತುಳುನಾಡು, ರೈಸಿಂಗ್ ಸ್ಟೈಕರ್ಸ್, ಕಿಂಗ್ ಸ್ಟಾರ್ ಇಲೆವೆನ್, ಸಾಯಿ ಎ, ಸಾಯಿ ಬಿ, ದೇವಾಡಿಗ ಬಿ, ಪ್ರಿಸೆಂಟ್ ಗ್ರೂಪ್ ಎ, ಪಿಸಿಎಂಸಿ ಯೂತ್ ಬಂಟ್ಸ್, ಮಾವೆರಿಕ್ ಸೆವೆನ್, ಪ್ರಿಸೆಂಟ್ ಗ್ರೂಪ್ ಸಿ, ತುಳು ಸೂರ್ಪ ರೈಸರ್ಸ್, ತುಳುಕೂಟ ಯೂತ್ ಪಿಸಿಎಂಸಿ, ಅರ್ಬನ್ ಇಲೆವೆನ್, ಶಬರಿ ತಂಡ, ದೇಹುರೋಡ್ ಎ, ಸ್ಮಾಷರ್ಸ್ ಸೆವೆನ್ ಬಿ, ಸೂಪರ್ ನೋವಾ, ಸಿದ್ಧಿವಿನಾಯಕ್, ತುಳುನಾಡ್ ಯುನೈಟೆಡ್, ಅಮ್ಮಾಸ್ ಫೇವರಿಟ್, ಬ್ಯುಟಿ ದ ಬೆಸ್ಟ್, ಮುಮ್ಮಿಸ್ ಫೇವರಿಟ್, ಕೋತ್ರುಡ್ ವಾರಿಯರ್ಸ್, ಅಂಬಿಕಾ ತಂಡ, ದೇವಾಡಿಗ ಎ, ಸಾಯಿ ಸಿ, ತುಳುನಾಡು ಸ್ಟ್ರೋಕರ್ಸ್, ಬಿಲ್ಲವ ಫ್ರೆಶರ್ಸ್, ಕೋತ್ರುಡ್ ವಾರಿಯರ್ಸ್ ಬಿ, ಬಂಟ್ಸ್ ಅಸೋಸಿಯೇಶನ್ ಪುಣೆ, ಕಾರ್ಕಳ ಬಂಟ್ಸ್, ಪ್ರಿಸೆಂಟ್ ಗ್ರೂಪ್ ಬಿ ಮತ್ತು ಸಸ್ಪೆನ್ಸ್ ಸೆವೆನ್ ತಂಡಗಳು ಭಾಗವಹಿಸಿದ್ದವು.
ಪಂದ್ಯಾಟದಲ್ಲಿ ಪುಣೆ ತುಳುಕೂಟದ ಸ್ಥಾಪಕಾಧ್ಯಕ್ಷ ಜಯ ಕೆ. ಶೆಟ್ಟಿ, ಗೌರವಾಧ್ಯಕ್ಷ ತಾರಾನಾಥ ಕೆ. ರೈ ಮೇಗಿನಗುತ್ತು, ಪ್ರಧಾನ ಕಾರ್ಯದರ್ಶಿ ಸಂತೋಷ್ ಶೆಟ್ಟಿ ಎಣ್ಣೆಹೊಳೆ, ಕೋಶಾಧಿಕಾರಿ ದಿವಾಕರ ಶೆಟ್ಟಿ ಮಾಣಿಬೆಟ್ಟು, ಜತೆ ಕೋಶಾಧಿಕಾರಿ ಶರತ್ ಭಟ್ ಅತ್ರಿವನ, ಕ್ರೀಡಾ ವಿಭಾಗದ ಉಪ ಕಾರ್ಯಾಧ್ಯಕ್ಷ ಪ್ರಕಾಶ್ ಪೂಜಾರಿ, ಪುಣೆ ಬಂಟರ ಸಂಘದ ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಗಣೇಶ್ ಪೂಂಜಾ, ಉಪ ಕಾರ್ಯಾಧ್ಯಕ್ಷ ರೂಪೇಶ್ ಶೆಟ್ಟಿ,
ಬಂಟ್ಸ್ ಅಸೋಸಿಯೇಷನ್ ಪುಣೆ ಪ್ರಧಾನ ಕಾರ್ಯದರ್ಶಿ ಅರವಿಂದ್ ರೈ, ಬಂಟ್ಸ್ ಅಸೋಸಿಯೇಶನ್ ಪುಣೆ ಮಹಿಳಾ ವಿಭಾಗದ ಕಾರ್ಯಾ ಧ್ಯಕ್ಷೆ ದೀಪಾ ಎ. ರೈ, ಬಂಟ್ಸ್ ಅಸೋಸಿಯೇಶನ್ ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ ಎರವಾಡ, ಯುವ ವಿಭಾಗದ ಕಾರ್ಯಾಧ್ಯಕ್ಷ ನ್ಯಾಯವಾದಿ ರೋಹನ್ ಶೆಟ್ಟಿ ಮತ್ತು ಸದಸ್ಯರು, ಮಹಿಳಾ ವಿಭಾಗದ ಕಾರ್ಯಾ ಧ್ಯಕ್ಷೆ ಸುಜಾತಾ ಡಿ. ಶೆಟ್ಟಿ, ಮಾಜಿ ಕಾರ್ಯಾ ಧ್ಯಕ್ಷೆ ನಯನಾ ಸಿ. ಶೆಟ್ಟಿ, ಕೋಶಾಧಿ ಕಾರಿ ಪ್ರಿಯಾ ಎಚ್. ದೇವಾಡಿಗ ಮತ್ತು ಸಮಿತಿ ಸದಸ್ಯರು, ಪಂದ್ಯಾಟದಲ್ಲಿ ಭಾಗವ ಹಿಸಿದ ಆಟಗಾರರು ಉಪಸ್ಥಿತರಿದ್ದರು.
ಸತತ ತೃತೀಯ ವರ್ಷ ಈ ಮೆಗಾ ಕ್ರಿಕೆಟ್ ಹಬ್ಬ ಸೂಪರ್ 7 ಎನ್ನುವ ಹೊಸ ಆವೃತ್ತಿಯ ಈ ಪಂದ್ಯಾಟ ದಲ್ಲಿ ಆಡುವ ಪ್ರತಿ ತಂಡದಲ್ಲಿ 7 ಆಟಗಾರರಿದ್ದು ಇದರಲ್ಲಿ 4 ಹುಡುಗರು ಹಾಗೂ 3 ಹುಡುಗಿಯರು ಆಡಲು ಅನುಮ
ತಿಸಲಾಗಿತ್ತು. ಪಂದ್ಯಾಟದಲ್ಲಿ ತುಳು-ಕನ್ನಡಿಗರು ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ – ವರದಿ: ಕಿರಣ್ ಬಿ. ರೈ ಕರ್ನೂರು