Advertisement

ಪುಣೆ ತುಳುಕೂಟ ಕ್ರೀಡೋತ್ಸವದ ಸಮಾರೋಪ 

04:39 PM Dec 21, 2017 | Team Udayavani |

ಪುಣೆ: ಪುಣೆಯಲ್ಲಿ ತುಳುಕನ್ನಡಿಗರ ಹತ್ತು ಹಲವು ಸಂಘಟನೆಗಳಿದ್ದರೂ ಇಲ್ಲಿರುವ ಎಲ್ಲಾ ತುಳುನಾಡ ಬಾಂಧವರನ್ನು ಯಾವುದೇ ಜಾತಿ, ಧರ್ಮಗಳ ಭೇದ-ಭಾವವಿಲ್ಲದೆ ಒಂದೇ ಕುಟುಂಬದ ಸದಸ್ಯರಂತೆ ಒಗ್ಗೂಡಿಸಿಕೊಂಡು ಸಾಂಸ್ಕೃತಿಕ, ಸಾಮಾಜಿಕ ಸೇವೆಗೈಯ್ಯುವ ಶಿಸ್ತುಬದ್ಧ ಸಂಘಟನೆ ತುಳುಕೂಟವಾಗಿದೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ ಬೆಟ್ಟು ನುಡಿದರು.

Advertisement

ಡಿ. 17ರಂದು ನಗರದ ಗರ್ವಾರೆ ಕಾಲೇಜು ಮೈದಾನದಲ್ಲಿ ನಡೆದ ಪುಣೆ ತುಳುಕೂಟದ ವಾರ್ಷಿಕ ಕ್ರೀಡೋತ್ಸವದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಸಂಘದ ನಿಸ್ವಾರ್ಥ ಪದಾಧಿಕಾರಿಗಳ ಶ್ರಮದಿಂದ ಸಂಸ್ಥೆ ಉತ್ತಮವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಸಂಘದ ಅಧ್ಯಕ್ಷರು ಹಾಗೂ ಮಾಜಿ ಅಧ್ಯಕ್ಷರುಗಳೂ ಸಂಘದ ಬೆಳವಣಿಗೆಗೆ ಕಾರಣಕರ್ತರಾಗಿ¨ªಾರೆ. ಇಂದು ನಡೆದ ಈ ಕ್ರೀಡೋತ್ಸವದಲ್ಲಿ ನೂರಾರು ಸಂಖ್ಯೆಯಲ್ಲಿ ತುಳುನಾಡ ಬಾಂಧವರು ಭಾಗವಹಿಸಿರುವುದಕ್ಕೆ ಅಭಿನಂದನೆಗಳು.  ಪುಣೆಯಲ್ಲಿ ಪುಣೆ ತುಳುವರೆಲ್ಲರ ಅಭಿಮಾನದ ಸಂಕೇತವಾಗಿ ಬಂಟರ ಭವನವು ನಿರ್ಮಾಣಗೊಂಡಿದ್ದು ಉದ್ಘಾಟನೆಗೆ ಸಜ್ಜಾಗಿದೆ. ಈ ಭವನವು ತುಳುವರ ಭವನವೆಂದು ನಾನು ಭಾವಿಸುತ್ತಿದ್ದು, ಪುಣೆ ತುಳುಕೂಟದ ಯಾವುದೇ ಕಾರ್ಯಕ್ರಮಕ್ಕೆ ಭವನದ ಮೂಲಕ ಸಂಪೂರ್ಣ ಸಹಕಾರ ನೀಡಲಾಗುವುದು. ತುಳುಕೂಟದ ಮೂಲಕ ಭವಿಷ್ಯದಲ್ಲಿ ಇನ್ನೂ ಉತ್ತಮ ಕಾರ್ಯಕ್ರಮಗಳು ನಡೆಯುವಂತಾಗಲಿ ಎಂದು ಹೇಳಿದರು.

ಸಂಘದ ಅಧ್ಯಕ್ಷ ತಾರಾನಾಥ ರೈ ಮೇಗಿನಗುತ್ತು ಮಾತನಾಡಿ  ಇಂದಿನ ಕ್ರೀಡೋತ್ಸವದಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ಇಷ್ಟೊಂದು ಸಂಖ್ಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿ
ಗೊಳಿಸಿದ ಸರ್ವ ತುಳುನಾಡ ಬಾಂಧವರಿಗೆ ಅಭಿನಂದನೆಗಳು. ಅಂತೆಯೇ ಈ ಕ್ರೀಡಾ ಕೂಟವನ್ನು ಆಯೋಜಿಸಲು ಶ್ರಮಿಸಿದ ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ  ವಿಭಾಗ ಹಾಗೂ ಪಿಂಪ್ರಿ-ಚಿಂಚಾÌಡ್‌ ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳಿಗೆ ಕೃತಜ್ಞತೆಗಳು. ಅಂತೆಯೇ ಪ್ರಾಯೋಕತ್ವವನ್ನು ನೀಡಿ  ಸಹಕಾರ ನೀಡಿದ ದಾನಿಗಳಿಗೂ ಕೃತಜ್ಞತೆಗಳು. ಕ್ರೀಡೋತ್ಸವದಲ್ಲಿ ಸೋಲು ಗೆಲುವು ಮುಖ್ಯ ವಲ್ಲ. ಎಲ್ಲರೂ ಉತ್ಸಾಹದಿಂದ   ಭಾಗವಹಿಸುವುದೇ
ಇಲ್ಲಿ ಪ್ರಾಮುಖ್ಯ ಪಡೆಯುತ್ತದೆ  ಎಂದರು.

ಅತಿಥಿಗಳಾಗಿ ಉಪಸ್ಥಿತರಿದ್ದ ಪುಣೆ ಬಂಟರ ಸಂಘದ ಗೌರವ ಕೋಶಾಧಿಕಾರಿ ಎರ್ಮಾಳ್‌ ಚಂದ್ರಹಾಸ್‌ ಶೆಟ್ಟಿ ಹಾಗೂ ಪುಣೆ ಸಾಗರ್‌ ಡೈರಿಯ ಮಾಲಕರಾದ ರವೀಂದ್ರ ಸಾರೂಕ್‌  ಸಂಘದ ಯಶಸ್ವಿ ಕ್ರೀಡೋತ್ಸವಕ್ಕೆ ಶುಭ ಹಾರೈಸಿದರು. ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷ  ಮಿಯಾರು  ರಾಜ್‌ ಕುಮಾರ್‌ ಎಂ. ಶೆಟ್ಟಿ, ಉಪಾಧ್ಯಕ್ಷ ಮೋಹನ್‌ ಶೆಟ್ಟಿ ಎಣ್ಣೆಹೊಳೆ, ಕೋಶಾಧಿಕಾರಿ ಸಂತೋಷ್‌ ಶೆಟ್ಟಿ ಎಣ್ಣೆಹೊಳೆ, ಕ್ರೀಡಾ ಕಾರ್ಯಾಧ್ಯಕ್ಷ ಯಶವಂತ್‌ ಶೆಟ್ಟಿ ತಾಮಾರು, ಯುವ ವಿಭಾಗದ ಕಾರ್ಯಾಧ್ಯಕ್ಷ ನ್ಯಾಯವಾದಿ ರೋಹನ್‌ ಶೆಟ್ಟಿ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಸುಜಾತಾ ಡಿ. ಶೆಟ್ಟಿ  ಹಾಗೂ ಮಹಿಳಾ ವಿಭಾಗದ ಕ್ರೀಡಾ ಸಂಯೋಜಕಿ  ರಂಜಿತಾ ರಮೇಶ್‌ ಶೆಟ್ಟಿ ಉಪಸ್ಥಿತರಿದ್ದರು. 

ಅತಿಥಿಗಳನ್ನು ಪುಷ್ಪಗುತ್ಛ ನೀಡಿ ಸತ್ಕರಿಸಲಾಯಿತು. ಕ್ರೀಡಾಕೂಟದಲ್ಲಿ ಭಾಗ ವಹಿಸಿದ 10 ವರ್ಷದೊಳಗಿನ ಎÇÉಾ ಮಕ್ಕಳಿಗೆ ಪ್ರೋತ್ಸಾಹದಾಯಕ ಕ್ರೀಡಾ ಪದಕಗಳನ್ನು ನೀಡಲಾಯಿತು. ಕ್ರೀಡೋತ್ಸವದಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಿಸಿದ ಕ್ರೀಡಾಳುಗಳಿಗೆ ಟ್ರೋಫಿಗಳನ್ನು ಅತಿಥಿಗಳ ಹಸ್ತದಿಂದ ನೀಡಲಾಯಿತು. ಈ ಸಂದರ್ಭ ಉಪಸ್ಥಿತರಿದ್ದ ವಿವಿಧ ಸಂಘ ಸಂಸ್ಥೆಗಳ ಗಣ್ಯರುಗಳನ್ನು  ಪುಷ್ಪಗುತ್ಛವನ್ನಿತ್ತು ಗೌರವಿಸಲಾಯಿತು. 

Advertisement

 ಕ್ರೀಡೋತ್ಸವಕ್ಕೆ ಪ್ರಾಯೋಜಕತ್ವ ನೀಡಿದ ಸಂಘದ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಸಂಘದ ಯುವ ವಿಭಾಗದ ವತಿಯಿಂದ ಇತ್ತೀಚೆಗೆ ಪುಣೆ ವಿಶ್ವವಿದ್ಯಾನಿಲಯದ ವಾಲಿಬಾಲ್‌ ತಂಡಕ್ಕೆ ಆಯ್ಕೆಗೊಂಡ ವಾಲಿಬಾಲ್‌ ಆಟಗಾರ ಸಂಪತ್‌ ಶೆಟ್ಟಿ ಯವರನ್ನು ಸ್ಮರಣಿಕೆ ನೀಡಿ ಸಮ್ಮಾನಿಸಲಾಯಿತು. ಸಂಘದ ಕೋಶಾಧಿಕಾರಿ ಸಂತೋಷ್‌ ಶೆಟ್ಟಿ ಸ್ವಾಗತಿಸಿ ವಂದಿಸಿದರು. ದೇಶಭಕ್ತಿಗೀತೆಯನ್ನು ಹಾಡುವುದರ ಮೂಲಕ ಕಾರ್ಯಕ್ರಮವು ಕೊನೆಗೊಂಡಿತು. 

Advertisement

Udayavani is now on Telegram. Click here to join our channel and stay updated with the latest news.

Next