Advertisement
ಸೆ. 23ರಂದು ಪುಣೆ ಕನ್ನಡ ಸಂಘದ ಡಾ| ಕಲ್ಮಾಡಿ ಶ್ಯಾಮರಾವ್ ಕನ್ನಡ ಮಾಧ್ಯಮ ಹೈಸ್ಕೂಲ್ ಸಭಾಂಗಣದಲ್ಲಿ ನಡೆದ ಪುಣೆ ತುಳುಕೂಟದ ದಸರಾ ಪೂಜೆ ಹಾಗೂ ತೆನೆಹಬ್ಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಇಂದಿನ ಯಾಂತ್ರೀಕೃತ ಬದುಕಿನ ಧಾವಂತದಲ್ಲಿ ನಾವು ನಮ್ಮತನವನ್ನು ಕಳೆದುಕೊಂಡು ಪಾಶ್ಚಾತ್ಯ ಸಂಸ್ಕೃತಿಯ ದಾಸರಾಗುತ್ತಿರುವುದು ಮಾತ್ರ ಚಿಂತಿಸತಕ್ಕ ವಿಚಾರವಾಗಿದೆ. ನಮ್ಮ ಹಿರಿಯರ ಕಟ್ಟುಕಟ್ಟಳೆಗಳ ಚೌಕಟ್ಟಿನಲ್ಲಿ ಆಚರಿಸುತ್ತಿದ್ದ ಆಚಾರ ವಿಚಾರಗಳನ್ನು ಮೂಢನಂಬಿಕೆಗಳಂತೆ ಹಣೆಪಟ್ಟಿ ಕಟ್ಟುವ ನಮ್ಮ ದಿನಚರಿಗಳಲ್ಲಿ ಟಿವಿ ಮೊಬೈಲ್‌ಗಳೇ ಜೀವನದ ಅವಿಭಾಜ್ಯ ಅಂಗವೆನ್ನುವಂತಾಗಿದೆ. ನಮ್ಮ ಕೂಡುಕುಟುಂಬದ ಅರ್ಥ ಕಳೆದುಕೊಳ್ಳುತ್ತಿದೆ. ಬದುಕಿನ ಸುಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸಿ ಬದುಕನ್ನು ಆನಂದಿಸುವ ಪರಿಪಾಠ ನಮ್ಮದಾಗಲಿ. ನಮ್ಮ ಮಾತೃಭಾಷೆ, ಸಂಸ್ಕೃತಿ, ಧಾರ್ಮಿಕ ವಿಚಾರಗಳನ್ನು ಗೌರವಿಸುತ್ತಾ ನಮ್ಮ ಮಕ್ಕಳಿಗೆ ಆದರ್ಶದ ಅರಿವನ್ನು ಮೂಡಿಸುವ ಕಾರ್ಯ ನಮ್ಮಿಂದಾಗಲಿ ಎಂದರು.
Related Articles
ದಾಂಡಿಯಾ ಕಾರ್ಯìಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಪುಣೆ ಬಂಟರ ಸಂಘದ ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾ ಧ್ಯಕ್ಷ ಚಂದ್ರಶೇಖರ ಶೆಟ್ಟಿ ನಿಟ್ಟೆ, ಕ್ರೀಡಾ ಕಾರ್ಯಾಧ್ಯಕ್ಷ ವಿವೇಕಾನಂದ ಶೆಟ್ಟಿ ಆವರ್ಸೆ, ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ,ಶ್ರೀ ಅಯ್ಯಪ್ಪ ಯಕ್ಷಗಾನ ಮಂಡಳಿ ಅಧ್ಯಕ್ಷ ಪಾಂಗಾಳ ವಿಶ್ವನಾಥ ಶೆಟ್ಟಿ, ಹಿರಿಯ ಯಕ್ಷ ಗಾನ ಕಲಾವಿದ ರಾಮಣ್ಣ ರೈ ಪುತ್ತೂರು, ಪುರುಷೋತ್ತಮ ಶೆಟ್ಟಿ, ಸಂಘದ ಸ್ಥಾಪಕಾಧ್ಯಕ್ಷ ಜಯ ಕೆ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Advertisement
ಸಂಘದ ಉಪಾಧ್ಯಕ್ಷ ಮೋಹನ್ ಶೆಟ್ಟಿ ಎಣ್ಣೆಹೊಳೆ, ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯಕ್ಷ ದಿವಾಕರ ಶೆಟ್ಟಿ ಮಾಣಿಬೆಟ್ಟು, ಕ್ರೀಡಾ ಕಾರ್ಯಾಧ್ಯಕ್ಷ ಯಶವಂತ್ ಶೆಟ್ಟಿ ತಾಮಾರು, ಪದಾಧಿಕಾರಿಗಳಾದ ವಿಶ್ವನಾಥ ಶೆಟ್ಟಿ, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರಾದ ಶಕುಂತಳಾ ಆರ್. ಶೆಟ್ಟಿ, ನಯನಾ ಸಿ. ಶೆಟ್ಟಿ, ಸದಸ್ಯೆಯರಾದ ಶಶಿಕಲಾ ಎ. ಶೆಟ್ಟಿ, ಸರಿತಾ ತುಷಾರ್ ಶೆಟ್ಟಿ, ಪ್ರಿಯಾ ಎಚ್. ದೇವಾಡಿಗ, ಸರಿತಾ ಯಶವಂತ್ ಶೆಟ್ಟಿ, ರಮಾ ಶೆಟ್ಟಿ, ರಂಜಿತಾ ರಮೇಶ್ ಶೆಟ್ಟಿ, ಉಮಾ ಎಸ್.ಶೆಟ್ಟಿ, ಗೀತಾ ಪೂಜಾರಿ, ಸರಸ್ವತಿ ಕುಳಾಲ್, ನವಿತಾ ಪೂಜಾರಿ, ಯುವ ವಿಭಾಗದ ಕಾರ್ಯದರ್ಶಿ ಭಾಗೆÂàಶ್ ಬಿ. ಶೆಟ್ಟಿ, ಹಿತೇಶ್ ಶೆಟ್ಟಿ ಕಳತ್ತೂರು ಮತ್ತು ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಪ್ರತೀವರ್ಷ ಸಂಘದ ವತಿಯಿಂದ ದಸರಾ ಕಾರ್ಯಕ್ರಮಗಳನ್ನು ಹಾಗೂ ತೆನೆಹಬ್ಬವನ್ನು ಆಚರಿಸುತ್ತಾ ನಮ್ಮ ತುಳುನಾಡಿನ ಸಾಂಸ್ಕೃತಿಕ, ಧಾರ್ಮಿಕ ಆಚರಣೆಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಾ ಬಂದಿರು ತ್ತೇವೆ. ಪುಣೆಯಲ್ಲಿರುವ ನಾಡಿನ ಎಲ್ಲ ತುಳುವರು ಜಾತ್ಯತೀತವಾಗಿ ತುಳುಕೂಟದ ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡಿ ಉತ್ಸಾಹ ತುಂಬುವ ಕಾರ್ಯವನ್ನು ಮಾಡುತ್ತಿರುವುದು ಸಂಘಟನೆ ಬಲಗೊಳ್ಳಲು ಕಾರಣವಾಗಿದೆ. ಅಂತೆಯೇ ಇಂದು ನಮ್ಮ ಸಂಸ್ಕೃತಿ ಅಲ್ಲದಿ ದ್ದರೂ ಅನ್ಯ ಸಂಸ್ಕೃತಿಯನ್ನು ಗೌರವಿಸುವ ಉದ್ದೇಶದಿಂದಲೂ ಮತ್ತು ನಮ್ಮ ಯುವ ವಿಭಾಗದ ಸದಸ್ಯರಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ದಾಂಡಿಯಾ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಇಂದಿನ ಕಾರ್ಯಕ್ರಮ ಯಶಸ್ವಿಯಾಗಲು ಸಹಕಾರ ನೀಡಿದ ಕಾರ್ಯಕಾರಿ, ಮಹಿಳಾ ವಿಭಾಗ ಹಾಗೂ ಯುವ ವಿಭಾಗಕ್ಕೆ ಕೃತಜ್ಞತೆಗಳು. ಮಂದೆಯೂ ನಿಮ್ಮೆಲ್ಲರ ಸಹಕಾರ ಸಂಘಕ್ಕಿರಲಿ– ತಾರಾನಾಥ ಕೆ. ರೈ ಮೇಗಿನಗುತ್ತು
(ಅಧ್ಯಕ್ಷರು: ಪುಣೆ ತುಳುಕೂಟ)