Advertisement

ಪುಣೆ ತುಳುಕೂಟ ಬ್ಯಾಡ್ಮಿಂಟನ್‌: ಬ್ಲ್ಯಾಕ್‌ ಪರ್ಲ್ ಗೆ ಪ್ರಶಸ್ತಿ

02:48 PM Nov 19, 2017 | Team Udayavani |

ಪುಣೆ: ಪುಣೆ ತುಳುಕೂಟದ ಯುವ ವಿಭಾಗದ ವತಿಯಿಂದ ತುಳುಕನ್ನಡಿಗರಿಗಾಗಿ ಬ್ಯಾಡ್ಮಿಂಟನ್‌ ಪಂದ್ಯಾಟವನ್ನು ನ.12ರಂದು ನಗರದ ಕಟಾರಿಯಾ ಹೈಸ್ಕೂಕ್‌ ಬ್ಯಾಡ್ಮಿಂಟನ್‌ ಕೋರ್ಟ್‌ನಲ್ಲಿ  ಆಯೋಜಿಸಲಾಗಿತ್ತು.  ಬೆಳಗ್ಗಿನಿಂದ ಸಂಜೆಯವರೆಗೆ ನಡೆದ ಪಂದ್ಯಾಟದಲ್ಲಿ ಸಿಂಗಲ್ಸ್‌, ಡಬಲ್ಸ್‌ ಮತ್ತು ಮಿಕ್ಸ್‌ಡ್‌ ಡಬಲ್ಸ್‌ ವಿಭಾಗಗಳನ್ನು ಮಾಡಲಾಗಿದ್ದು, 30 ವರ್ಷದೊಳಗಿನ ವಯೋಮಾನದವರಿಗಾಗಿ ಹಾಗೂ 30 ವರ್ಷ ಮೇಲ್ಪಟ್ಟವರಿಗಾಗಿ ಎ ಮತ್ತು ಬಿ ವಿಭಾಗಗಳಲ್ಲಿ ತಂಡಗಳನ್ನು ರಚಿಸಲಾಗಿತ್ತು. ಇದರಲ್ಲಿ  ಮಿಕ್ಸ್‌ಡ್‌ ಡಬಲ್ಸ್‌ ವಿಭಾಗದಲ್ಲಿ ಅಭಿಜಿತ್‌ ಶೆಟ್ಟಿ ನೇತೃತ್ವದ ಸುವಿತ್‌ ಶೆಟ್ಟಿ ,ಸ್ಮಿತಾ ಶೆಟ್ಟಿ ,ಖುಷಿ ಸುವರ್ಣ ಅವರನ್ನೊಳಗೊಂಡ ಬ್ಲ್ಯಾಕ್‌ ಪರ್ಲ್ ತಂಡ ಜಯ ಗಳಿಸಿ ಟ್ರೋಫಿಯನ್ನು ಪಡೆದರೆ, ಸಚಿನ್‌ ಶೆಟ್ಟಿ ನೇತೃತ್ವದ ಶುಭಂ ಶೆಟ್ಟಿ ,ನಮ್ರತಾ ಶೆಟ್ಟಿ ,ರಶ್ಮಿತಾ ಶೆಟ್ಟಿ ಅವರನ್ನೊಳಗೊಂಡ ತಂಡ ರನ್ನರ್ಸ್‌ ಪ್ರಶಸ್ತಿಯನ್ನು ಗೆದ್ದುಕೊಂಡಿತು.

Advertisement

ಬಿ ವಿಭಾಗದಲ್ಲಿ ಕಿರಣ್‌ ಸುವರ್ಣ ಹಾಗೂ ಖುಷಿ ಸುವರ್ಣ ಜಯಗಳಿಸಿದರೆ ಗಣೇಶ್‌ ಪೂಂಜಾ ಹಾಗೂ ನಿಶ್ಮಿತಾ ಪೂಂಜಾ ರನ್ನರ್ಸ್‌ ಪ್ರಶಸ್ತಿ ಪಡೆದುಕೊಂಡರು. ಪುಣೆ ತುಳುಕೂಟದ ಅಧ್ಯಕ್ಷ ತಾರಾನಾಥ ಕೆ. ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ವಿಜೇತರಿಗೆ ಟ್ರೋಫಿಯೊಂದಿಗೆ ಪ್ರಮಾಣಪತ್ರಗಳನ್ನೂ ನೀಡಲಾಯಿತು.

ಈ ಪಂದ್ಯಾಟಕ್ಕೆ ಮಾಧವ ಆರ್‌ ಶೆಟ್ಟಿ ,ಅಜಿತ್‌ ಹೆಗ್ಡೆ ,ಗಣೇಶ್‌ ಪೂಂಜಾ ,ದಿನೇಶ್‌ ಶೆಟ್ಟಿ, ತಾರಾನಾಥ ರೈ ಹಾಗೂ ಪ್ರವೀಣ… ಶೆಟ್ಟಿ ಪ್ರಾಯೋಜಕತ್ವವನ್ನು ವಹಿಸಿದ್ದರು.  ರೋಹನ್‌ ಶೆಟ್ಟಿ, ಕಾರ್ಯದರ್ಶಿ ಭಾಗೆÂàಶ್‌ ಬಿ. ಶೆಟ್ಟಿ ಮತ್ತು ಪದಾಧಿಕಾರಿಗಳು ಪ್ರಾಯೋಜಕರನ್ನು ಸತ್ಕರಿಸಿದರು.

ಚಿತ್ರ-ವರದಿ:ಕಿರಣ್‌ ಬಿ ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next