Advertisement

ಪುಣೆ: ಕೋವಿಡ್ ಕರ್ತವ್ಯದಲ್ಲಿದ್ದ ಶಿಕ್ಷಕ ಸೋಂಕಿಗೆ ಬಲಿ

01:08 PM Aug 06, 2020 | mahesh |

ಪುಣೆ: ನಗರದ ಸಂಗೀತ ಶಿಕ್ಷಕ ರೊಬ್ಬರು ರವಿವಾರ ಸೋಂಕಿನಿಂದ ಸಾವನ್ನಪ್ಪಿದ ಬಳಿಕ ಕೋವಿಡ್‌ ಕರ್ತವ್ಯಕ್ಕೆ ನಿಯೋಜಿಸಲಾದ ಶಿಕ್ಷಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರ ಮತ್ತು ಪಕ್ಕದ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು 2,700 ಶಿಕ್ಷಕರು ಕೋವಿಡ್‌ ಯೋಧರಾಗಿ ಕೆಲಸ ಮಾಡುತ್ತಿದ್ದಾರೆ, ಮುಖಗವಸುಗಳು ಮತ್ತು ಕೈಗವಸುಗಳಂತಹ ಸುರಕ್ಷತೆಯೊಂದಿಗೆ ಮನೆ ಮನೆಗೆ ಸಮೀಕ್ಷೆ ನಡೆಸುತ್ತಿದ್ದಾರೆ.

Advertisement

ಕಳೆದ 3 ತಿಂಗಳುಗಳಿಂದ ಶಿಕ್ಷಕ ಗೋವಿಂದ್‌ ಭಿಲಾರೆ ಅವರು ಪಿಎಂಸಿ ವ್ಯಾಪ್ತಿಯಲ್ಲಿ ಮನೆ-ಮನೆಗೆ ಸಮೀಕ್ಷೆ ಮತ್ತು ಸಂಪರ್ಕ ಪತ್ತೆಹಚ್ಚುವ ಕೆಲಸ ಮಾಡಿದರು. ಪಿಎಮ್‌ಸಿ ನೇಮಿಸಿಕೊಂಡ ಶಿಕ್ಷಕನ ಮೊದಲ ಸಾವು ಇದಾಗಿದೆ ಎಂದು ನಾಗರಿಕ ಅ ಧಿಕಾರಿಗಳು ತಿಳಿಸಿದ್ದಾರೆ. ಭಿಲಾರೆ ಅವರ ಮರಣದ ಬಳಿಕ, ಮಹಾರಾಷ್ಟ್ರ ರಾಜ್ಯ ಶಿಕ್ಷಕರ ಸಂಘವು ಪಿಎಂಸಿ ಶಿಕ್ಷಕರಿಗೆ ಕೋವಿಡ್‌ ಕರ್ತವ್ಯಗಳನ್ನು ನೀಡಬಾರದು ಎಂದು ಒತ್ತಾಯಿಸಿದ್ದು, ಈಗಾಗಲೇ ಅವರು ಕೆಲಸದ ಹೊರೆಯಿಂದ ಬಳಲುತ್ತಿದ್ದಾರೆ ಎಂದು ತಿಳಿಸಿವೆ.

ಪಿಎಮ್‌ಸಿ ಶಿಕ್ಷಕರಲ್ಲಿ ಅನೇಕರು ಕೋವಿಡ್‌ ತಂಡಗಳಲ್ಲಿ ಕೆಲಸ ಮಾಡುತ್ತಿರುವುದಲ್ಲದೆ, ಆನ್‌ಲೈನ್‌ ತರಗತಿಗಳು ಮತ್ತು ಹೆಚ್ಚುವರಿ ಶಾಲಾ ಕೆಲಸಗಳನ್ನು ಸಹ ಮಾಡುತ್ತಿದ್ದಾರೆ ಎಂದು ಶಿಕ್ಷಕರ ಸಂಸ್ಥೆ ತಿಳಿಸಿದೆ. ಇಲ್ಲಿಯವರೆಗೆ ಕೋವಿಡ್‌ ಕರ್ತವ್ಯಗಳನ್ನು ನಿರ್ವಹಿಸುತ್ತಿರುವ ಸುಮಾರು 18 ಶಿಕ್ಷಕರು ಸೋಂಕಿಗೆ ಒಳಗಾಗಿದ್ದು, ಪಿಎಂಸಿ ಶಿಕ್ಷಕರಲ್ಲಿ ಭಿಲಾರೆ ಸಾವಿನಿಂದ ಆತಂಕ ಉಂಟಾಗಿದೆ ಎಂದು ಪುಣೆ ವಿಭಾಗದ ಸಂಘದ ಮುಖ್ಯಸ್ಥ ಸಚಿನ್‌ ಡಿಂಬಲ್‌ ಹೇಳಿದ್ದಾರೆ.

ಪುಣೆ ವಿಭಾಗದ ಪ್ರಾಥಮಿಕ ಶಿಕ್ಷಕರ ಸಂಘದ ನಾಲ್ಕು ಸದಸ್ಯರ ಸಮಿತಿಯು ಪಿಎಂಸಿ ಆಯುಕ್ತ ವಿಕ್ರಮ್‌ ಕುಮಾರ್‌ ಅವರೊಂದಿಗೆ ಕರ್ತವ್ಯ ವಿಷಯದ ಬಗ್ಗೆ ಸಭೆ ನಡೆಸಿತು. 3ರಿಂದ 4 ತಿಂಗಳುಗಳಿಂದ 2,700 ಪಿಎಂಸಿ ಶಿಕ್ಷಕರಿಗೆ ಕೋವಿಡ್‌ ಸಂಬಂ ಧಿತ ಕೆಲಸದ ಕರ್ತವ್ಯಗಳನ್ನು ನೀಡಲಾಗಿದೆ. ಇದು ಜನರ ಸ್ವಾಬ್‌ ಪರೀಕ್ಷೆ, ಸಂಪರ್ಕ ಪತ್ತೆಹಚ್ಚುವಿಕೆ, ಪ್ರದೇಶ ಸಮೀಕ್ಷೆ, ವಿಪತ್ತು ನಿರ್ವಹಣಾ ಕಾರ್ಯಗಳನ್ನು ಒಳಗೊಂಡಿದೆ. ನಮಗೆ ನಿರಾಶಾದಾಯಕವಾದ ಮುಖ್ಯ ವಿಷಯವೆಂದರೆ ಯಾವುದೇ ಆವರ್ತಕ ವಿಧಾನವಿಲ್ಲದೆ ಮೂರು ತಿಂಗಳುಗಳಲ್ಲಿ ಕರ್ತವ್ಯಗಳನ್ನು ನೀಡಲಾಯಿತು.

ಶಿಕ್ಷಕರು ದಣಿದಿದ್ದಾರೆ
ಪುಣೆ ವಿಭಾಗದ ಸಂಘದ ಮುಖ್ಯಸ್ಥ ಸಚಿನ್‌ ಡಿಂಬಲ್‌ ಮಾತನಾಡಿ, ಇಂದು ನಾವು ಪಿಎಂಸಿ ಆಯುಕ್ತರನ್ನು ಭೇಟಿ ಮಾಡಿದ್ದೇವೆ ಮತ್ತು ನಮ್ಮ ಎಲ್ಲ ಶಿಕ್ಷಕರಿಗೆ ರಾಜ್ಯ ಸರಕಾರದ ಮಾರ್ಗಸೂಚಿಗಳ ಪ್ರಕಾರ 14 ದಿನಗಳ ಆವರ್ತಕ ಕರ್ತವ್ಯಗಳನ್ನು ನೀಡಬೇಕೆಂದು ಒತ್ತಾಯಿಸಿದ್ದೇವೆ. ನಾವು ಕೋವಿಡ್‌ ಕರ್ತವ್ಯಗಳಿಗಾಗಿ ಕೆಲಸ ಮಾಡಲು ಸಿದ್ಧರಿದ್ದೇವೆ. ದೈಹಿಕವಾಗಿ, ನಮ್ಮ ಶಿಕ್ಷಕರು ಈಗ ದಣಿದಿದ್ದಾರೆ ಆದರೆ ಕೆಲಸ ಕಳೆದುಕೊಳ್ಳುವ ಭಯದಿಂದಾಗಿ ಅವರು ಕೋವಿಡ್‌ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next