Advertisement

ಕೋವಿಡ್ ಪ್ರಕರಣ ಹೆಚ್ಚಳ; ಪುಣೆ ಶಾಲಾ, ಕಾಲೇಜುಗಳು ಮತ್ತೆ ಬಂದ್, ರಾತ್ರಿ ಕರ್ಫ್ಯೂ ಜಾರಿ

05:03 PM Mar 12, 2021 | Team Udayavani |

ಪುಣೆ: ಪುಣೆಯಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಶಾಲಾ, ಕಾಲೇಜುಗಳನ್ನು ಪುನಃ ಬಂದ್ ಮಾಡುವುದಾಗಿ ಅಧಿಕಾರಿಗಳು ಶುಕ್ರವಾರ(ಮಾರ್ಚ್ 12) ಘೋಷಿಸಿದ್ದಾರೆ. ಅಲ್ಲದೇ ಕೋವಿಡ್ 19 ಕಠಿಣ ನಿರ್ಬಂಧಗಳನ್ನೂ ಜಾರಿಗೊಳಿಸಿರುವುದಾಗಿ ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ತಮಿಳುನಾಡು: ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ನಟ ಕಮಲ್ ಹಾಸನ್ ಚುನಾವಣಾ ಅಖಾಡಕ್ಕೆ

ಪುಣೆಯಲ್ಲಿ ಶಾಲಾ, ಕಾಲೇಜುಗಳು ಮಾರ್ಚ್ 31ರವರೆಗೆ ಬಂದ್ ಆಗಿರಲಿದ್ದು, ರಾತ್ರಿ 11ರಿಂದ ಬೆಳಗ್ಗೆ 6ಗಂಟೆವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾತ್ರಿ ಕರ್ಫ್ಯೂ ವೇಳೆ ತುರ್ತು ಸೇವೆ ಹೊರತುಪಡಿಸಿ ಬೇರೆ ಯಾವುದೇ ಸಾರ್ವಜನಿಕ ಚಟುವಟಿಕೆಗೆ ಅವಕಾಶ ಇಲ್ಲ ಎಂದು ಆದೇಶದಲ್ಲಿ ತಿಳಿಸಿದೆ.

ಬಾರ್ ಮತ್ತು ರೆಸ್ಟೋರೆಂಟ್ಸ್ ಗಳು ರಾತ್ರಿ 10ಗಂಟೆವರೆಗೆ ಮಾತ್ರ ತೆರೆದಿರಲಿದ್ದು, ಮಾರುಕಟ್ಟೆ, ಸಿನಿಮಾ ಹಾಲ್ ಮತ್ತು ಮಾಲ್ಸ್ ಗಳು ರಾತ್ರಿ 10ಗಂಟೆಗೆ ಬಂದ್ ಮಾಡುವಂತೆ ಸೂಚನೆ ನೀಡಲಾಗಿದೆ. ಹೋಮ್ ಡೆಲಿವರೆ ಮಾಡುವವರಿಗೆ ರಾತ್ರಿ 11ಗಂಟೆವರೆಗೆ ಅವಕಾಶ ನೀಡಲಾಗಿದೆ ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next