ಪುಣೆ: ಇಂದಿನ ಜೀವನವೇ ಸ್ಪರ್ಧಾತ್ಮಕವಾಗಿದೆ. ಜೀವನದ ಜಂಜಾಟದ ಜತೆಯಲ್ಲಿ ಮನಸ್ಸಿಗೆ ಸಮಾಧಾನ ನೆಮ್ಮದಿ, ಮುದ ನೀಡುವ ಹಾಗೂ ಆನಂದವನ್ನು ನೀಡುವಲ್ಲಿ ಆಟೋಟಗಳು, ಕ್ರೀಡೆಗಳು ತುಂಬಾ ಸಹಾಯಕವಾಗಬಲ್ಲದು. ಪುಣೆಯಂತಹ ಮಹಾನಗರದಲ್ಲಿ ಹೊಟ್ಟೆಪಾಡಿಗಾಗಿ, ಬಂದು ನೆಲೆಸಿದ, ತುಳು-ಕನ್ನಡಿಗರಿಗಾಗಿ ಜಾತಿ-ಭೇದ ಭಾವವಿಲ್ಲದೆ ಪ್ರತಿ ವರ್ಷವೂ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿ ಉತ್ತಮವಾಗಿ ನಡೆಸಿಕೊಂಡು ಬಂದಿರುವ ಸಾಯಿ ಕ್ರಿಕೆಟರ್ಸ್‌ನವರ ಕಾರ್ಯ ಶ್ಲಾಘನೀಯ. ತುಳು ಕನ್ನಡಿಗ ಎÇÉಾ ಕ್ರಿಕೆಟ್ ಆಟಗಾರರು, ಅಭಿಮಾನಿಗಳು, ಆಸಕ್ತರು ಒಂದೇ ಸೂರಿನಡಿ ಸೇರಿ ಈ ಒಂದು ದೊಡ್ಡ ಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಿದ ಈ ಸಂದರ್ಭವನ್ನು ನೋಡಿದಾಗ ಮನಸ್ಸಿಗೆ ತುಂಬಾ ಅನಂದವಾಗುತ್ತದೆ. ನಮ್ಮಲ್ಲಿ ಒಳ್ಳೆಯ ಚುರುಕಿನ ಆಟಗಾರರು, ಪ್ರತಿಭಾಶಾಲಿಗಳು ಇ¨ªಾರೆ ಎಂಬುದು ತಿಳಿಯುತ್ತದೆ. ಪಂದ್ಯಾಟದಲ್ಲಿ ಸೋಲು ಗೆಲುವು ಮುಖ್ಯವಲ್ಲ. ಆದರೆ ಭಾಗವಹಿಸಿ ಶಿಸ್ತುಬದ್ಧವಾಗಿ, ಕ್ರೀಡಾ ಸ್ಫೂರ್ತಿ, ಕ್ರೀಡಾ ಅಭಿಮಾನವನ್ನು ಪ್ರದರ್ಶಿಸುವುದು ನಾವು ಕ್ರೀಡೆಗೆ ಕೊಡುವ ಗೌರವ ಎಂದರೆ ತಪ್ಪಾಗಲಾರದು.
ಪಂದ್ಯಾಟದಲ್ಲಿ ಭಾಗವಹಿಸಿದ ಎಲ್ಲ ತಂಡಗಳಿಗೆ ಹಾಗೂ ವಿಜೇತ ತಂಡಗಳಿಗೆ ಅಭಿನಂದನೆಗಳು ಎಂದು ಪುಣೆ ಬಂಟರ ಸಂಘದ ಉತ್ತರ ವಲಯ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗಣೇಶ್ ಪೂಂಜಾ ಹೇಳಿದರು.
ಮಾ. 4ರಂದು ಪುಣೆಯ ಪಾಷಣ್‌ನಲ್ಲಿರುವ ಎನ್‌ಸಿಎಲ್ ಮೈದಾನದಲ್ಲಿ ಪುಣೆ ಸಾಯಿ ಕ್ರಿಕೆಟರ್ ವತಿಯಿಂದ ನಡೆದ ಸಾಯಿ ಟ್ರೋಫಿ ಕ್ರಿಕೆಟ್ ಪಂದ್ಯಾಟವನ್ನು ಬೆಳಗ್ಗೆ ಉದ್ಘಾಟಿಸಿ, ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪುಣೆ ತುಳು ಕೂಟದ ಯುವ ವಿಭಾಗದ ಕಾರ್ಯಾಧ್ಯಕ್ಷ ರೋಹನ್ ಶೆಟ್ಟಿ, ಸಾಯಿ ಕ್ರಿಕೆಟರ್ಸ್‌ನ ಸಂಚಾಲಕ ವಸಂತ್ ಶೆಟ್ಟಿ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪುಣೆಯಲ್ಲಿ ನೆಲೆಸಿರುವ ತುಳು-ಕನ್ನಡಿರಿಗಾಗಿ ಆಯೋಜಿಸಲಾಗಿದ್ದ ಸೀಮಿತ ಓವರ್‌ಗಳ ಈ ಪಂದ್ಯಾಟದಲ್ಲಿ ಸುಮಾರು 10 ತಂಡಗಳು ಭಾಗವಹಿಸಿದ್ದವು. ತುಳುಕೂಟ ಪುಣೆ, ಶಬರಿ ಎ., ಅರವಿಂದ್ ಇಲೆವನ್, ಪ್ರಸೆಂಟ್ಸ್ ಗ್ರೂಪ್, ಸುಪ್ರಿಯಾ ಎಜಿಕೆ ಇಲೆವನ್, ಮಸಕಾ ಸೀ ಫುಡ್, ಶಬರಿ ಬಿ., ಸುಪ್ರಿಯಾ ಬಿ., ಕಿನಾರ ಇಲೆವನ್ ತಂಡಗಳು ಭಾಗವಹಿಸಿದ್ದವು. ಐಪಿಎಲ್ ಮಾದರಿಯಲ್ಲಿ ನಡೆದ ಪಂದ್ಯಾಟದಲ್ಲಿ ಫೈನಲ್ ಪಂದ್ಯದಲ್ಲಿ ಮಸಕಾ ಸೀ ಫುಡ್ ತಂಡವು ಪ್ರಸೆಂಟ್ಸ್ ತಂಡವನ್ನು ಸೋಲಿಸಿ ಸಾಯಿ ಟ್ರೋಫಿ ಮತ್ತು 13,333 ರೂ. ಗಳನ್ನು ಮುಡಿಗೇರಿಸಿಕೊಂಡಿತು.
ದ್ವಿತೀಯ ಸ್ಥಾನಿ ಪ್ರಸೆಂಟ್ಸ್ ತಂಡವು ಟ್ರೋಫಿ ಮತ್ತು 8,888 ರೂ. ಗಳನ್ನು ಪಡೆಯಿತು. ತೃತೀಯ ಸ್ಥಾನಿಯಾದ ಶಬರಿ ಎ. ತಂಡಕ್ಕೆ ಟ್ರೋಫಿ ನೀಡಿ ಸತ್ಕರಿಸಲಾಯಿತು. ಅತಿಥಿ-ಗಣ್ಯರು ವಿಜೇತ ತಂಡಗಳನ್ನು ಅಭಿನಂದಿಸಿದರು. ಫೈನಲ್ ಪಂದ್ಯದಲ್ಲಿ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಮಸಕಾ ತಂಡದ ಧೀರಜ್ ಪಡೆದರು. ಉತ್ತಮ ಆಟಗಾರನಾಗಿ ಪ್ರಸೆಂಟ್ಸ್ ತಂಡದ ನಿತಿನ್ ಪ್ರಶಸ್ತಿ ಪಡೆದರು. ಸಾಯಿ ಕ್ರಿಕೆಟ್ ತಂಡದ ಕಳೆದ ವರ್ಷದ ಉತ್ತಮ ಬ್ಯಾಟಿಂಗ್, ಉತ್ತಮ ಕ್ಷೇತ್ರ ರಕ್ಷಕ, ಉತ್ತಮ ಎಸೆತಗಾರ ಪ್ರಶಸ್ತಿಯನ್ನು ಕ್ರಮವಾಗಿ ಸಂದೇಶ್ ಶೆಟ್ಟಿ, ಸುದೀಪ್ ಪೂಜಾರಿ, ಪ್ರವೀಣ್ ಶೆಟ್ಟಿ ಇವರಿಗೆ ಸಚಿನ್ ಪೂಜಾರಿ, ಸುಮಿತ್ ಶೆಟ್ಟಿ ಕುಂಟಾಡಿ ಮತ್ತು ಸಂದೀಪ್ ಶೆಟ್ಟಿ ಅವರು ಪ್ರದಾನಿಸಿ ಶುಭ ಹಾರೈಸಿದರು.
ಮುಂಬಯಿ ಮನೀಶ್ ಶೆಟ್ಟಿ, ಸುಂದರ್ ಕರ್ಕೇರ ಪಾಷಾಣ್, ಸಂತೋಷ್ ಪೂಜಾರಿ ಅವರು ಹಿಂದಿ, ಕನ್ನಡ, ತುಳುವಿನಲ್ಲಿ ವೀಕ್ಷಕ ವಿವರಣೆಯನ್ನು ನೀಡಿದರು. ಅಂಪಾಯರ್‌ಗಳಾಗಿ ಅಂತೋನಿ ಜೆ, ಪ್ರಮೋದ್ ಲೋಕಂಡೆ, ಪ್ರಫುಲ್ ನವಲೆ ಅವರು ಸಹಕರಿಸಿದರು. ಪುಣೆಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದು ಶುಭ ಹಾರೈಸಿದರು ಗಣ್ಯರನ್ನು ಸಾಯಿ ಕ್ರಿಕೆಟರ್ಸ್‌ನ ವಸಂತ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಗೌರವಿಸಿದರು.
ಸಾಯಿ ಕ್ರಿಕೆಟರ್ಸ್ ಫ್ರೆಂಡ್‌ನ ಪ್ರಮುಖ ರಾದ ವಿಶ್ವನಾಥ್ ಶೆಟ್ಟಿ ಬಸ್ತಿ, ಸಂತೋಷ್ ವಾರಂಗ, ಸುದೀಪ್ ಪೂಜಾರಿ, ರಾಮ್ ಪ್ರಸಾದ್, ಪ್ರಶಾಂತ್ ಪಕ್ಕಿಬೆಟ್ಟು, ಜನಾರ್ದನ್, ಸಂದೀಪ್ ಶೆಟ್ಟಿ, ಪ್ರವೀಣ್, ಪ್ರಶಾಂತ್ ಶೆಟ್ಟಿ, ಪ್ರವೀಣ್ ಪೂಜಾರಿ, ಸಂದೇಶ್ ಶೆಟ್ಟಿ, ವೆಂಕಟ್ ಚೇತನ್ ಶೆಟ್ಟಿ, ನಾಗೇಶ್, ಹರೀಶ್ ಪಾಷಣ್, ಸಂಪತ್ ಹೆಗ್ಡೆ, ಸುಕೇಶ್, ಪ್ರಶಾಂತ್ ಹಿರಿಯಡ್ಕ, ಸಂತೋಷ್ ಪೂಜಾರಿ, ಕುಮಾರ್ ಶೆಟ್ಟಿ, ಅರವಿಂದ್ ಶೆಟ್ಟಿ, ಮನೀಶ್ ಶೆಟ್ಟಿ, ರಘು, ಹರೀಶ್ ಪೂಜಾರಿ, ಪ್ರಜ್ವಲ್ ಶೆಟ್ಟಿ, ದೀಕ್ಷಿತ್ ಶೆಟ್ಟಿ, ಪ್ರಶಾಂತ್ ಬಸ್ತಿ, ಭೋಜ ಶೆಟ್ಟಿ ಸಹಕರಿಸಿದರು. ಸುಂದರ್ ಕರ್ಕೇರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ದೊಡ್ಡ ಮಟ್ಟದಲ್ಲಿ ನಮ್ಮ ತುಳು ಕನ್ನಡಿಗರನ್ನು ಒಟ್ಟು ಸೇರಿಸಿಕೊಂಡು ಶಿಸ್ತು ಬದ್ಧವಾಗಿ ಈ ಪಂದ್ಯಾಟವನ್ನು ಆಯೋಜಿಸಿದ ಸಾಯಿ ಕ್ರಿಕೆಟರ್ಸ್‌ನವರ ಕೆಲಸ ಮೆಚ್ಚುವಂಥ ದ್ದಾಗಿದೆ. ಪುಣೆಯಲ್ಲಿನ ಎÇÉಾ ಸಮಾಜ ಬಾಂಧವರು ಭೇದಭಾವ ಇಲ್ಲದೆ ಉತ್ತಮ ರೀತಿಯಲ್ಲಿ ಅಡಿ ನಮ್ಮಲ್ಲಿ ಕೂಡಾ ಪ್ರತಿಭಾವಂತ ಕ್ರೀಡಾ ಪ್ರತಿಭೆಗಳು ಇದ್ದಾರೆ ಎಂಬುದನ್ನು ತೋರಿಸಿದ್ದೀರಿ. ಭಾಗವಹಿಸಿದ ಎಲ್ಲ ತಂಡಗಳ ಕ್ರೀಡಾಳುಗಳಿಗೆ ಹಾಗೂ ವಿಜೇತ ತಂಡಗಳಿಗೆ ಅಭಿನಂದನೆಗಳು. ಮುಂದಿನ ವರ್ಷಗಳಲ್ಲಿ ಪಂದ್ಯಾಟವನ್ನು ಶಿಸ್ತುಬದ್ಧವಾಗಿ ಆಯೋಜಿಸುವಲ್ಲಿ ನಮ್ಮೆಲ್ಲರ ಸಹಕಾರ ನಿಮ್ಮೊಂದಿಗಿದೆ. ಪುಣೆಯ ತುಳು ಕನ್ನಡಿಗ ಕ್ರಿಕೆಟ್ ಆಟಗಾರರು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಾಯಿ ಕ್ರಿಕೆಟರ್ಸ್
ನವರೊಂದಿಗೆ ಒಂದಾಗಿ ಸಹಕರಿಸಬೇಕು
– ರೋಹನ್ ಶೆಟ್ಟಿ (ಅಧ್ಯಕ್ಷರು: ಯುವ ವಿಭಾಗ ತುಳು ಕೂಟ ಪುಣೆ).
ಚಿತ್ರ-ವರದಿ: ಹರೀಶ್ ಮೂಡಬಿದ್ರೆ ಪುಣೆ