ಪುಣೆ: ಶಿವಾಜಿ ನಗರದ ಮಂಗಳ ಮಲ್ಟಿಪ್ಲೆಕ್ಸ್ ಚಿತ್ರ ಮಂದಿರದಲ್ಲಿ ಎ. 15ರಂದು ಕಲಾಜಗತ್ತು ಕ್ರಿಯೇಷನ್ಸ್‌ನ ಡಾ| ವಿಜಯ ಕುಮಾರ್ ಶೆಟ್ಟಿ ತೋನ್ಸೆ ನಿರ್ಮಾಣ ಮತ್ತು ನಿರ್ದೇಶಕತ್ವದ ತುಳು ಸೂಪರ್ ಹಿಟ್ ಪತ್ತನಾಜೆ ಚಲನಚಿತ್ರವು ಹೌಸ್‌ಫುಲ್ ಆಗಿ ಪ್ರದರ್ಶನಗೊಂಡು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ಇದೇ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಮಾಜ ಸೆವಕರು ಮತ್ತು ಕಲಾಪೋಷಕರುಗಳಾದ ಪುಣೆ ಬಂಟರ ಸಂಘದ ಅಧ್ಯಕ್ಷ ಇನ್ನ ಕುರ್ಕಿಲ್ ಬೆಟ್ಟು ಸಂತೋಷ್ ಶೆಟ್ಟಿ ಹಾಗೂ ಕಲಾ ಪೋಷಕ ಸಮಾಜ ಸೇವಕ ಹಾಗೂ ಪುಣೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರು ಅವರನ್ನು ಕಲಾಜಗತ್ತು ಕ್ರಿಯೇಶನ್ಸ್‌ನ ಪರವಾಗಿ ಡಾ| ವಿಜಯ ಕುಮಾರ್ ಶೆಟ್ಟಿ ಅವರು ಸ್ಮರಣಿಕೆಯನ್ನಿತ್ತು ಸಮ್ಮಾನಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪುಣೆ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷ ಸದಾನಂದ ಕೆ. ಶೆಟ್ಟಿ, ಪುಣೆ ಕನ್ನಡ ಸಂಘದ ಅಧ್ಯಕ್ಷ ಕುಶಲ್ ಹೆಗ್ಡೆ, ಪುಣೆ ಬಂಟ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ನಾರಾಯಣ ಶೆಟ್ಟಿ, ಪಿಂಪ್ರಿ-ಚಿಂಚಾÌಡ್ ಬಂಟ್ಸ್ ಸಂಘದ ಮಾಜಿ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ, ಪುಣೆ ಶ್ರೀ ಗುರುದೇವ ಸೇವಾ ಬಳಗ ಮತ್ತು ಪುಣೆ ಬಂಟ್ಸ್ ಅಸೋಸಿಯೇಶನ್ ಕಾರ್ಯದರ್ಶಿ ರೋಹಿತ್ ಶೆಟ್ಟಿ ನಗ್ರಿಗುತ್ತು, ಪುಣೆ ತುಳು ಕೂಟದ ಅಧ್ಯಕ್ಷ ತಾರಾನಾಥ್ ರೈ ಮೇಗಿನಗುತ್ತು, ಪುಣೆ ಬಿಲ್ಲವ ಸಂಘ ಮತ್ತು ಪುಣೆ ರೆಸ್ಟೋರೆಂಟ್ ಅÂಂಡ್ ಹೊಟೇಲಿಯರ್ಸ್ ಅಸೋಸಿಯೇಶನ್‌ನ ಉಪಾಧ್ಯಕ್ಷ ವಿಶ್ವನಾಥ್ ಪೂಜಾರಿ ಕಡ್ತಲ, ಪುಣೆ ತುಳುಕೂಟದ ಗೌರವಾಧ್ಯಕ್ಷ ರಾಜ್ ಕುಮಾರ್ ಶೆಟ್ಟಿ, ಪುಣೆ ಬಂಟರ ಸಂಘದ ಕಾರ್ಯದರ್ಶಿ ಅಜಿತ್ ಹೆಗ್ಡೆ, ಬಂಟ್ಸ್ ಅಸೋಸಿಯೇಶನ್ ಪುಣೆ ಇದರ ಉಪಾಧ್ಯಕ್ಷ ಆನಂದ ಶೆಟ್ಟಿ, ಮಾಜಿ ಅಧ್ಯಕ್ಷ ಜಯ ಶೆಟ್ಟಿ, ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಕಾರ್ಯದರ್ಶಿ ಸಂಕಯ್ಯ ಶೆಟ್ಟಿ ಅವರನ್ನು ಸ್ಮರಣಿಕೆಯನ್ನಿತ್ತು ಸತ್ಕರಿಸಿದರು.
ಈ ಚಲನ ಚಿತ್ರ ಪ್ರದರ್ಶನಕ್ಕೆ ಸಹಕರಿಸಿದ ವಿಶ್ವನಾಥ್ ಶೆಟ್ಟಿ ಬಸ್ತಿ ಹಿರಿಯಡ್ಕ, ವಸಂತ್ ಶೆಟ್ಟಿ ಬಸ್ತಿ ಹಿರಿಯಡ್ಕ, ಶ್ರೀಧರ್ ಶೆಟ್ಟಿ ಕಲ್ಲಾಡಿ, ರವಿ ಶೆಟ್ಟಿ, ಪ್ರದೀಪ್ ಪೂಜಾರಿ ಮುನಿಯಾಲ್, ರಾಮ್ ಪ್ರಸಾದ್ ಶೆಟ್ಟಿ, ಅರುಣ್ ಶೆಟ್ಟಿ ಎರ್ಮಾಳ್, ಪ್ರಶಾಂತ್ ಶೆಟ್ಟಿ ಬಸ್ತಿ ಹಿರಿಯಡ್ಕ ಮೊದಲಾದವರು ಉಪಸ್ಥಿತರಿದ್ದರು.
ಚಿತ್ರ-ವರದಿ : ಹರೀಶ್ ಮೂಡಬಿದ್ರೆ ಪುಣೆ