ಮುಂಬಯಿ: ಮಹಾರಾಷ್ಟ್ರದ ಪುಣೆಯಲ್ಲಿ ನೆಲೆಸಿರುವ ತಮಿಳುನಾಡು ಮೂಲದ ಅನಿಲ್ ನರಸಿಪುರಂ ಮತ್ತು ಶ್ರುತಿ ನಾಯರ್ ಎಂಬ ಜೋಡಿ ಯೊಂದು ಇತ್ತೀಚೆಗೆ ತಮ್ಮ ವಿವಾಹವನ್ನು ಆನ್‌ಲೈನ್‌ನಲ್ಲೇ ನೆರವೇರಿಸಿ ಕೊಂಡಿದೆ.
ಬ್ಲಾಕ್‌ಚೈನ್ ತಂತ್ರಜ್ಞಾನ ಆಧಾರಿತ ಓಪನ್ ಸೀ ಪ್ಲಾಟ್‌ಫಾರ್ಮ್ ಅಡಿಯಲ್ಲಿ, ಮೆಟಾವರ್ಸ್ ಎಂಬ ತ್ರೀ-ಡಿ ವರ್ಚುವಲ್ ಸೇವಾ ಜಾಲ ತಾಣದ ಮೂಲಕ ಮದುವೆ ಮಾಡಿಕೊಂಡಿದ್ದಾರೆ.
ಹಾಗಾಗಿ ಇದು ಭಾರತದಲ್ಲಿ ನಡೆದ ಮೊದಲ “ಬ್ಲಾಕ್‌ಚೈನ್ ಮದುವೆ’ ಎಂಬ ಹೆಗ್ಗಳಿಕೆಗೆ ಪಾತ್ರವಾ ಗಿದೆ.
ಅನಿಲ್ ನರಸಿಪುರಂ ಮತ್ತು ಶ್ರುತಿ ನಾಯರ್ 2021ರ ನವೆಂಬರ್‌ನಲ್ಲೇ ಕಾನೂನಾತ್ಮಕವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.. ಆದರೆ ಬ್ಲಾಕ್‌ಚೈನ್ ಮದುವೆ ಮಾಡಿಕೊಳ್ಳುವ ಮೂಲಕ ದಾಂಪತ್ಯವನ್ನು ಇನ್ನಷ್ಟು ಗಟ್ಟಿ ಮಾಡಿಕೊಳ್ಳಬೇಕೆಂಬ ಆಸೆ ಅವರಿಗಿತ್ತಂತೆ. ಅವರ ವರ್ಚುವಲ್ ಮದುವೆಗೆ ಅನೂಪ್ ಪಕ್ಕಿ ಡಿಜಿಟಲ್ ಪುರೋಹಿತರಾಗಿ ಮದುವೆ ನೆರವೇರಿಸಿದ್ದಾರೆ.
ಈ ವಿಚಾರವನ್ನು ಅನಿಲ್ ತಮ್ಮ ಲಿಂಕ್ಡ್ಇನ್ ಪ್ರೊಫೈಲ್‌ನಲ್ಲಿ ಹಂಚಿಕೊಂಡಿದ್ದಾರೆ.