Advertisement

ಪುಣೆಯಲ್ಲೊಂದು ಅಮಾನುಷ ಘಟನೆ: ಸಾಲ ತೀರಿಸಲಿಲ್ಲವೆಂದು ಪತಿಯ ಎದುರೇ ಪತ್ನಿಯ ಅತ್ಯಾಚಾರ

03:36 PM Jul 27, 2023 | Team Udayavani |

ಪುಣೆ: ಪುಣೆಯಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಲೇವಾದೇವಿದಾರನಿಂದ ಪಡೆದ ಸಾಲ ಸರಿಯಾದ ಸಮಯದಲ್ಲಿ ತೀರಿಸಲಿಲ್ಲವೆಂದು ಸಾಲಗಾರನ ಎದುರೇ ಆತನ ಪತ್ನಿಯನ್ನು ಅತ್ಯಾಚಾರವೆಸಗಿದ ಅಮಾನುಷ ಘಟನೆ ಪುಣೆಯಲ್ಲಿ ನಡೆದಿದೆ.

Advertisement

ಕಳೆದ ಫೆಬ್ರವರಿಯಲ್ಲಿ ಘಟನೆ ನಡೆದಿರುವುದಾಗಿ ಹಡಪ್ಸರ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಲಾಗಿದೆ.

ಘಟನೆ ವಿವರ : ಸಂತ್ರಸ್ತೆಯ ಪತಿ ಲೇವಾದೇವಿ ವ್ಯವಹಾರ ನಡೆಸುವ ವ್ಯಕ್ತಿಯ ಬಳಿ ಸಾಲ ಪಡೆದಿದ್ದರು ಆದರೆ ಅದನ್ನು ಮರುಪಾವತಿಸಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಆರೋಪಿಗಳು ದಂಪತಿಗೆ ಕಿರುಕುಳ ನೀಡಲು ಆರಂಭಿಸಿದ್ದರು. ಆರೋಪಿಗಳು ಪತಿಗೆ ಚಾಕು ತೋರಿಸಿ ಬೆದರಿಸಿ ನಂತರ ಆತನ ಸಮ್ಮುಖದಲ್ಲೇ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಬಳಿಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ ಇದರಿಂದ ಪ್ರಕರಣವೂ ಬೆಳಕಿಗೆ ಬಂದಿದ್ದು ಪ್ರಕರಣ ದಾಖಲಿಸಿಕೊಂಡ ಹಡಪ್ಸರ್ ಪೊಲೀಸ್ ಠಾಣೆಯ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮೀ: ನೋಂದಣಿಗೆ ಸೈಬರ್‌ ಸೆಂಟರ್‌ಗಳಲ್ಲಿ ಹಣ ವಸೂಲಿ

Advertisement

Udayavani is now on Telegram. Click here to join our channel and stay updated with the latest news.

Next